ಕರ್ನಾಟಕ

karnataka

ETV Bharat / city

ವಿಧಾನಸಭೆ ಸಭಾಂಗಣದಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕಲು ಸ್ಪೀಕರ್​ ಒಪ್ಪಿಗೆ - Vishweshwar Hegde Kageri Statement in assembly

ಸದನದಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕುವುದಕ್ಕೆ ಒಪ್ಪಿಕೊಂಡ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಂಬೇಡ್ಕರ್ ಭಾವಚಿತ್ರ ಸೇರಿದಂತೆ ಉಳಿದವರ ಭಾವಚಿತ್ರಗಳನ್ನು ಕಾಲಮಿತಿಯಲ್ಲಿ ಹಾಕಲು ನಿರ್ಧರಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು.

Speaker Vishweshwar Hegde Kageri
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

By

Published : Dec 22, 2021, 2:07 PM IST

ಬೆಂಗಳೂರು: ವಿಧಾನಸಭೆ ಸಭಾಂಗಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಒಳಗೊಂಡಂತೆ ಉಳಿದವರ ಫೋಟೋಗಳನ್ನು ಕಾಲಮಿತಿ ಒಳಗೆ ಹಾಕಲು ಸರ್ಕಾರ ಬದ್ಧವಿದೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿ ಹೇಳಿದರು.

ಅದರ ಬಗ್ಗೆ ಯಾವುದೇ ಗೊಂದಲ ಇಲ್ಲ. ಆ ಸಮಸ್ಯೆಯೂ ಇಲ್ಲ. ಅಂಬೇಡ್ಕರ್ ಭಾವಚಿತ್ರವನ್ನು ಕಾಲಮಿತಿ ಒಳಗೆ ಹಾಕುತ್ತೇವೆ ಎಂದರು. ವಿಧಾನಸಭೆ ಸಭಾಂಗಣದಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕದೇ ಇರುವುದಕ್ಕೆ ಹಿಂದಿನ ಸದನದಲ್ಲಿ ಜೆಡಿಎಸ್ ಶಾಸಕ ಅನ್ನದಾನಿ ಧ್ವನಿ ಎತ್ತಿದ್ದರು. ಸದನದಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕಲೇಬೇಕು ಎಂದು ಸಭಾಧ್ಯಕ್ಷರ ಜತೆ ಸದನದಲ್ಲಿ ವಾದ ಮಾಡಿದ್ದ ಅನ್ನದಾನಿ, ಎಲ್ಲಾ ಶಾಸಕರಿಂದ ಸಹಿ ಸಂಗ್ರಹಿಸಿದ್ದರು.

ಕೊನೆಗೂ ಸದನದಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕುವುದಕ್ಕೆ ಒಪ್ಪಿಕೊಂಡ ಸ್ಪೀಕರ್ ಕಾಗೇರಿ, ಅಂಬೇಡ್ಕರ್ ಭಾವಚಿತ್ರ ಸೇರಿದಂತೆ ಉಳಿದವರ ಭಾವಚಿತ್ರವನ್ನು ಕಾಲಮಿತಿಯಲ್ಲಿ ಹಾಕಲು ನಿರ್ಧರಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು.

ಇದನ್ನೂ ಓದಿ:ಡೀಮ್ಡ್ ಫಾರೆಸ್ಟ್ ಗದ್ದಲ, ಕಾಂಗ್ರೆಸ್- ಬಿಜೆಪಿ ನಡುವೆ ಗದ್ದಲ : ಚರ್ಚೆಗೆ ಅವಕಾಶ ನೀಡುವ ಭರವಸೆ ನೀಡಿದ ಸಭಾಪತಿ

ABOUT THE AUTHOR

...view details