ಬೆಂಗಳೂರು: ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ನೈರುತ್ಯ ರೈಲ್ವೆ ತಪಾಸಣಾ ಸಿಬ್ಬಂದಿಯಿಂದ ನಡೆದ ವಿಶೇಷ ತಪಾಸಣಾ ಕಾರ್ಯದಲ್ಲಿ 5 ಕೋಟಿ ರೂ.ಗೂ ಹೆಚ್ಚು ದಂಡ ವಸೂಲಿ ಮಾಡಲಾಗಿದೆ.
ಮೂರು ತಿಂಗಳ ಅವಧಿಯಲ್ಲಿ ನೈರುತ್ಯ ರೈಲ್ವೆಯು 1,16,521 ಟಿಕೆಟ್‌ರಹಿತ ಪ್ರಯಾಣದ ಪ್ರಕರಣಗಳನ್ನು ದಾಖಲಿಸಿದೆ. ಇದರಿಂದ 5 ಕೋಟಿ 52 ಲಕ್ಷದ 27 ಸಾವಿರ ರೂ. ದಂಡದ ಹಣವನ್ನು ಸಂಗ್ರಹಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು 2,435 ಪ್ರಕರಣಗಳನ್ನು ದಾಖಲಿಸಲಾಗಿದ್ದು, ತಪ್ಪಿತಸ್ಥರಿಂದ ರೂ. 13.74 ಲಕ್ಷ ಮೊತ್ತದ ದಂಡವನ್ನು ಸಂಗ್ರಹಿಸಲಾಗಿತ್ತು. ಕೇಂದ್ರ ಕಚೇರಿಯ ಟಿಕೆಟ್ ಪರೀಕ್ಷಕರ ತಪಾಸಣಾ ದಳ(ಫ್ಲೈಯಿಂಗ್ ಸ್ಕ್ವಾಡ್)ವು 3,825 ಪ್ರಕರಣಗಳನ್ನು ದಾಖಲಿಸಿ ರೂ. 15.44 ಲಕ್ಷ ಮೊತ್ತದ ದಂಡವನ್ನು ಸಂಗ್ರಹಿಸಿತ್ತು.
ಇದನ್ನೂ ಓದಿ:ಕೇಂದ್ರ, ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳೇ ಉಪ ಚುನಾವಣೆಗೆ ಸಹಕಾರಿ: ಬಿಎಸ್ವೈ
ರೈಲ್ವೆ ಕಾಯ್ದೆ 1989ರ ಅನುಚ್ಛೇದ 138ರ ಅನುಸಾರ, ಯಾವುದೇ ಪ್ರಯಾಣಿಕರು ಪಾಸ್/ಟಿಕೆಟ್ ಹೊಂದಿರದೇ ಪ್ರಯಾಣಿಸುತ್ತಿದ್ದಲ್ಲಿ ರೂ. 250 ದಂಡ ಅಥವಾ ಟಿಕೆಟ್ ದರಕ್ಕೆ ಸಮಾನವಾದ ಮೊತ್ತ (ಪ್ರಯಾಣಿಕನು ಪ್ರಯಾಣಿಸಿದ ದೂರ ಅಥವಾ ರೈಲು ಪ್ರಾರಂಭವಾದ ನಿಲ್ದಾಣದಿಂದ ಕ್ರಮಿಸಿದ ದೂರಕ್ಕೆ ಅನುಗುಣವಾದ ಸಾಮಾನ್ಯ ಏಕ ದರ ಹಾಗೂ ರೂ. 250 ಗಳ ಹೆಚ್ಚುವರಿ ಶುಲ್ಕ) ಇವೆರಡರಲ್ಲಿ ಯಾವುದು ಹೆಚ್ಚು ಅದನ್ನು ದಂಡವಾಗಿ ವಿಧಿಸಲಾಗುತ್ತದೆ.