ಕರ್ನಾಟಕ

karnataka

ETV Bharat / city

ಸಾರಿ, ಸಾರಿ ಎಂದು ಗೀಚಿದ್ದ ಯುವಕರ ಚಹರೆ ಪತ್ತೆ: ಡಿಸಿಪಿ ಡಾ.ಸಂಜೀವ್​ ಪಾಟೀಲ್​ - Sorry ಗೀಚಿದ್ದ ಯುವಕರ ಚಹರೆ ಪತ್ತೆ

SORRY...SORRY... ಎಂದು ಗೀಚಿ ಸಾರ್ವಜನಿಕರ ನಿದ್ದೆ ಕೆಡಿಸಿದ್ದ ಯುವಕರ ಚಹರೆಯನ್ನು ಇದೀಗ ಪೊಲೀಸರು ಸಿಸಿಟಿವಿ ದೃಶ್ಯಗಳ ಸಹಾಯದಿಂದ ಪತ್ತೆ ಹಚ್ಚಿದ್ದಾರೆ.

'Sorry' painted all over the premises of a private school
SORRY...SORRY... ಎಂದು ಗೀಚಿದ್ದ ಯುವಕರ ಚಹರೆ ಪತ್ತೆ: ಡಿಸಿಪಿ ಡಾ. ಸಂಜೀವ್​ ಪಾಟೀಲ್​

By

Published : May 25, 2022, 1:49 PM IST

ಬೆಂಗಳೂರು:ಸುಂಕದಕಟ್ಟೆಯ ಶಾಂತಿಧಾಮ ಕಾಲೇಜಿನ ಎಲ್ಲೆಡೆ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಕೆಂಪು ಬಣ್ಣದ ಸ್ಪ್ರೇನಿಂದ ಸಾರಿ, ಸಾರಿ ಎಂದು ಬರೆದು ವಿಕೃತಿ ಮೆರೆದಿದ್ದ ಇಬ್ಬರು ಯುವಕರಿಗೆ ಬಲೆ ಬೀಸಿರುವ ಪೊಲೀಸರು, ತೀವ್ರ ಹುಡುಕಾಟದ ನಂತರ ಇಬ್ಬರ ಚಹರೆ ಪತ್ತೆ ಮಾಡಿದ್ದಾರೆ. ಈ ಕುರಿತು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್​ ಪಾಟೀಲ್ ಮಾಹಿತಿ ನೀಡಿದರು.

ಕಾಲೇಜು ಗೋಡೆ, ರಸ್ತೆ ಮೇಲೆಲ್ಲ ಸಾರಿ, ಸಾರಿ ಪದದ ಜೊತೆಗೆ ಹಾರ್ಟ್​ ಸಿಂಬಲ್​ಗಳಿದ್ದ ಬರಹಗಳನ್ನು ಸೋಮವಾರ ಮಧ್ಯರಾತ್ರಿ ಬೈಕಿನಲ್ಲಿ ಬಂದ ಯುವಕರು ಗೀಚಿದ್ದರು. ಈ ಹುಚ್ಚಾಟದ ನಂತರ ಪರಾರಿಯಾಗಿದ್ದಾರೆ. ಫುಡ್ ಡೆಲಿವರಿ ಹುಡುಗರು ಬಳಸುವ ಬ್ಯಾಗ್​ನಲ್ಲಿ ಸ್ಪ್ರೇ ತುಂಬಿಕೊಂಡು ಬಂದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ಕಾಮಾಕ್ಷಿಪಾಳ್ಯದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ:ಮಧ್ಯರಾತ್ರಿ‌ ಬೈಕ್‌ ನಲ್ಲಿ ಬಂದು ಬೆಂಗಳೂರು ತುಂಬೆಲ್ಲ Sorry ಬರಹ.. ಕಿಡಿಗೇಡಿಗಳ ಕೃತ್ಯಕ್ಕೆ ಬೆಚ್ಚಿಬಿದ್ದ ಜನ!

ABOUT THE AUTHOR

...view details