ಕರ್ನಾಟಕ

karnataka

ETV Bharat / city

ಮಗನ ಶವ ಕಳಿಸ್ತೇವೆ, ಹಾರ ಹಾಕಿ ಸ್ವಾಗತಿಸಿ.. ಕಿಡ್ನಾಪರ್ಸ್​ ಕರೆಗೆ ಬೆಚ್ಚಿಬಿದ್ದ ಪೋಷಕರು.. - mico layout police station

ಮಗ ಕೆಲಸಕ್ಕೆ ಹೋದವನು ಮನೆಗೆ ಬರದೆ ಕಾಣೆಯಾಗಿದ್ದಾನೆ ಎಂದು ದೂರು ನೀಡಿದ್ದ ಪೋಷಕರು, ನಿಮ್ಮ ಮಗನ ಶವ ಕಳಿಸುತ್ತೇವೆ, ಹಾರ ಹಾಕಿ ಸ್ವಾಗತಿಸಿ ಎಂದು ಹೇಳಿದ ಅಪಹರಣಾಕಾರರ ಕರೆಯಿಂದ ಬೆಚ್ಚಿ ಬಿದ್ದಿದ್ದಾರೆ.

ಪೊಲೀಸ್ ಠಾಣೆ ಮುಂದೆ ಸಂಬಂಧಿಕರ ಆಕ್ರಂದನ

By

Published : Sep 22, 2019, 9:56 PM IST

ಬೆಂಗಳೂರು: ಮಗ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದ ಪೋಷಕರಿಗೆ ಮತ್ತೊಂದು ಆತಂಕ ಎದುರಾಗಿದೆ.

ಬನ್ನೇರುಘಟ್ಟ ರಸ್ತೆಯ ಸಿಕೆ ಪಾಳ್ಯದ ನಿವಾಸಿ ಅಜಯ್ (24) ಕಾಣೆಯಾದ ಯುವಕ. ಮೈಕೋಲೇಔಟ್​ನ ರಾಯಲ್ ಎನ್​ಫೀಲ್ಡ್ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದ ಅಜಯ್, ಕಳೆದ ಸೆಪ್ಟೆಂಬರ್‌ 16ರಂದು ಕೆಲಸ ಮುಗಿಸಿ ಮನೆಗೆ ಹಿಂದಿರುಗಿರಲಿಲ್ಲ.

ಪೊಲೀಸ್ ಠಾಣೆ ಮುಂದೆ ಸಂಬಂಧಿಕರ ಆಕ್ರಂದನ

ಮಗ ಕೆಲಸಕ್ಕೆ ಹೋದವನು ಮನೆಗೆ ಬರದೆ ಕಾಣೆಯಾಗಿದ್ದಾನೆ ಎಂದು ಯುವಕನ ಪೋಷಕರು ಮೈಕೋಲೇಔಟ್ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಆದರೆ, ಇದೀಗ ಮಗನ ಮೊಬೈಲ್​ನಿಂದ ಪೋಷಕರಿಗೆ ಕರೆ ಬಂದಿದ್ದು, ನಿಮ್ಮ ಮಗನ ಶವ ಕಳಿಸುತ್ತೇವೆ, ಹಾರ ಹಾಕಿ ಸ್ವಾಗತಿಸಿ ಎಂದು ಅಪಹರಣಾಕಾರರು ಹೇಳಿ, ಮೊಬೈಲ್​ ಸ್ವಿಚ್ ಆಫ್ ಮಾಡಿದ್ದಾರೆ. ಇದರಿಂದ ಆತಂಕಗೊಂಡಿರುವ ಯುವಕನ ಕುಟುಂಬದವರು ಪೊಲೀಸ್ ಠಾಣೆಗೆ ತೆರಳಿ ತಮ್ಮ ಮಗನನ್ನು ಹುಡುಕಿಕೊಡುವಂತೆ ಪೊಲೀಸರ ಮುಂದೆ ಗೋಳು ತೋಡಿಕೊಂಡಿದ್ದಾರೆ.

ಅಜಯ್, ಕಾಣೆಯಾದ ಯುವಕ

ಇದೀಗ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮೈಕೋಲೇಔಟ್ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ.

ABOUT THE AUTHOR

...view details