ಬೆಂಗಳೂರು: ಮಾಜಿ ಸಿಎಂ ಎಸ್. ಎಂ. ಕೃಷ್ಣರ ನಿವಾಸಕ್ಕೆ ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದ ಶ್ರೀಗಳು ಭೇಟಿ ನೀಡಿದ್ದರು.
ಎಸ್ ಎಂ ಕೃಷ್ಣ ನಿವಾಸಕ್ಕೆ ನಿರ್ಮಲಾನಂದ ಶ್ರೀಗಳ ಭೇಟಿ... ಕುಟುಂಬಕ್ಕೆ ಸಾಂತ್ವನ
ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ನಿಧನ ಹಿನ್ನೆಲೆಯಲ್ಲಿ ಉದ್ಯಮಲೋಕವೇ ಶೋಕಸಾಗರದಲ್ಲಿ ಮುಳುಗಿದೆ. ಸಿದ್ಧಾರ್ಥ್ ನಿಧನಕ್ಕೆ ಎಲ್ಲೆಡೆಯಿಂದ ಸಂತಾಪ ವ್ಯಕ್ತವಾಗಿದೆ. ನಿನ್ನೆ ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದ ಶ್ರೀಗಳನ್ನು ಸಿದ್ಧಾರ್ಥ್ ಅವರ ಮಾವ ಎಸ್ ಎಂ ಕೃಷ್ಣ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ರು.
ಎಸ್. ಎಂ. ಕೃಷ್ಣ
ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ನಿಧನ ಹಿನ್ನೆಲೆಯಲ್ಲಿ ಸದಾಶಿವನಗರದಲ್ಲಿರುವ ಎಸ್. ಎಂ. ಕೃಷ್ಣರ ನಿವಾಸಕ್ಕೆ ಭೇಟಿ ನೀಡಿದ್ದ ನಿರ್ಮಲಾನಂದ ಶ್ರೀಗಳು, ಸಿದ್ದಾರ್ಥ್ ನಿಧನಕ್ಕೆ ಸಂತಾಪ ಸೂಚಿಸಿದರು. ಕೃಷ್ಣರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ವಿ. ಜಿ ಸಿದ್ಧಾರ್ಥ್ ಅವರು ಮಾಜಿ ಮುಖ್ಯಮಂತ್ರಿ ಎಸ್. ಎಂ ಕೃಷ್ಣರ ಅಳಿಯ. ಈ ಹಿನ್ನೆಲೆಯಲ್ಲಿ ಕೃಷ್ಣರ ಕುಟುಂಬಕ್ಕೆ ಶ್ರೀಗಳು ಸಾಂತ್ವನದ ಜೊತೆ ಆತ್ಮಸ್ಥೈರ್ಯ ತುಂಬಿದರು.