ಕರ್ನಾಟಕ

karnataka

ETV Bharat / city

ಸ್ಮಾರ್ಟ್​ ಸಿಟಿ ಯೋಜನೆ, ನೆಹರೂ ತಾರಾಲಯದಲ್ಲಿ ಸಭಾಂಗಣ ನಿರ್ಮಾಣ: ಬಿ.ಹೆಚ್. ಅನಿಲ್ ಕುಮಾರ್ - ನೂತನ ಕಟ್ಟಡದಲ್ಲಿ ಸಂಗೀತ, ನಾಟಕ, ಸೆಮಿನಾರ್​​

ಸ್ಮಾರ್ಟ್ ಸಿಟಿ ಯೋಜನೆ ಅನುದಾನದಲ್ಲಿ ನಗರದ ಜವಹರಲಾಲ್ ನೆಹರೂ ತಾರಾಲಯದ ಆವರಣದಲ್ಲಿ ಸಭಾಂಗಣ ನಿರ್ಮಿಸಲಾಗುವುದೆಂದು ಬಿಬಿಎಂಪಿ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್ ತಿಳಿಸಿದ್ದಾರೆ.

Kn_bng_05_smart_city_7202707
ಸ್ಮಾರ್ಟ್​ ಸಿಟಿ ಯೋಜನೆ, ನೆಹರೂ ತಾರಾಲಯದಲ್ಲಿ ಸಭಾಂಗಣ ನಿರ್ಮಾಣ: ಬಿ.ಹೆಚ್ ಅನಿಲ್ ಕುಮಾರ್

By

Published : Feb 20, 2020, 9:26 PM IST

ಬೆಂಗಳೂರು: ಸ್ಮಾರ್ಟ್ ಸಿಟಿ ಯೋಜನೆ ಅನುದಾನದಲ್ಲಿ ನಗರದ ಜವಹರಲಾಲ್ ನೆಹರೂ ತಾರಾಲಯದ ಆವರಣದಲ್ಲಿ ಸಭಾಂಗಣ ನಿರ್ಮಾಣ ಮಾಡಲಾಗುದು ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್ ತಿಳಿಸಿದ್ದಾರೆ.

ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಅಧಿಕಾರಿಗಳು ವಿನೂತನ ಮಾದರಿಯ ವೈಜ್ಞಾನಿಕ ಸಭಾಂಗಣ ನಿರ್ಮಾಣದ ಸ್ಥಳ ಪರಿಶೀಲಿಸಿದರು. ಒಟ್ಟು 20 ಕೋಟಿ ರೂ. ವೆಚ್ಚದಲ್ಲಿ ಸಭಾಂಗಣವನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. 600 ಜನರು ಕುಳಿತುಕೊಳ್ಳುವ ಸಾಮರ್ಥ್ಯ ಮತ್ತು ಒಟ್ಟು 40,350 ಚದರ ಅಡಿ ವಿಸ್ತೀರ್ಣದ ಆಧುನಿಕ, ಸುಸಜ್ಜಿತ ಕಟ್ಟಡ ಇದಾಗಲಿದೆ. ಕಟ್ಟಡದಲ್ಲಿ 4 ಉಪನ್ಯಾಸ ಸಭಾಂಗಣಗಳು, ವಿಶ್ರಾಂತಿ ಕೊಠಡಿ, ಶೌಚಾಲಯ ವ್ಯವಸ್ಥೆ, ಅತಿಥಿ ಗಣ್ಯರ ಕಾಯುವ ಕೋಣೆ, ನೆಲಮಹಡಿಯಲ್ಲಿ ಪಾರ್ಕಿಂಗ್ ಸೌಲಭ್ಯ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲು ಉದ್ದೇಶಿಸಲಾಗಿದೆ.

ನೂತನ ಕಟ್ಟಡದಲ್ಲಿ ಸಂಗೀತ, ನಾಟಕ, ಸೆಮಿನಾರ್​​ಗಳು ಸೇರಿದಂತೆ ಇನ್ನಿತರ ಪ್ರದರ್ಶನಕ್ಕಾಗಿ ಸಭಾಂಗಣಗಳನ್ನು ಬಳಸಬಹುದಾಗಿರುತ್ತದೆ. ಇದರಿಂದಾಗಿ ನಗರದಲ್ಲಿ ಉನ್ನತ ಮಟ್ಟದ ಸೌಲಭ್ಯಗಳುಳ್ಳ ವೈಜ್ಞಾನಿಕ ಕಟ್ಟಡ ನಿರ್ಮಿಸುವ ಯೋಜನೆ ಪಾಲಿಕೆಯದ್ದಾಗಿದೆ.

ABOUT THE AUTHOR

...view details