ಕರ್ನಾಟಕ

karnataka

ETV Bharat / city

ಸಣ್ಣ ನೀರಾವರಿ ಇಲಾಖೆಯಿಂದ 2 ವರ್ಷದಲ್ಲಾದ ಕಾಮಗಾರಿಗಳೆಷ್ಟು? ಪ್ರಗತಿಯಲ್ಲಿರುವ ಯೋಜನೆಗಳೆಷ್ಟು ?

ರಾಜ್ಯದಲ್ಲಿ ಸುಮಾರು 2.61 ಮಿಲಿಯನ್ ಹೆಕ್ಟೇರ್ ಪ್ರದೇಶ ಕೃಷಿ ಯೋಗ್ಯವಾಗಿದ್ದು, ಬಿಎಸ್​ವೈ ಸಿಎಂ ಆಗಿದ್ದ ಅವಧಿಯಲ್ಲಿ 15 ಯೋಜನೆಗಳಿಗೆ ಸಚಿವ ಸಂಪುಟವು ಅನುಮೋದನೆ ನೀಡಿದ್ದು, ಹಲವು ಯೋಜನೆಗಳ ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿವೆ.

small-irrigation-plans-in-karnataka
ಸಣ್ಣ ನೀರಾವರಿ ಇಲಾಖೆಯಿಂದ ಕಳೆದ ಎರಡು ವರ್ಷದ ಅವಧಿಯಲ್ಲಿ ಅನುಮೋದನೆಗೊಂಡಿರುವ ಕಾಮಗಾರಿಗಳೆಷ್ಟು? ಪ್ರಗತಿಯಲ್ಲಿರುವ ಯೋಜನೆಗಳೆಷ್ಟು ?

By

Published : Sep 7, 2021, 1:30 PM IST

ಬೆಂಗಳೂರು : ರಾಜ್ಯದ ಭೌಗೋಳಿಕ ಪ್ರದೇಶವು 19.04 ಮಿಲಿಯನ್ ಹೆಕ್ಟೇರ್​ಗಳಷ್ಟು ವಿಸ್ತೀರ್ಣ ಹೊಂದಿದೆ. ಇದರಲ್ಲಿ 12.61 ಮಿಲಿಯನ್ ಹೆಕ್ಟೇರ್​ ಪ್ರದೇಶವು ಕೃಷಿ ಯೋಗ್ಯವಾಗಿದ್ದು, ಇದರಲ್ಲಿ 61.00 ಲಕ್ಷ ಹೆಕ್ಟೇರ್​ ಪ್ರದೇಶವು ನೀರಾವರಿ ವ್ಯಾಪ್ತಿಗೆ ಬರುತ್ತದೆ.

ಎಲ್ಲಾ ಅಂತರ್ಜಲ ಮತ್ತು ಬಾಹ್ಯಜಲ ಯೋಜನೆಗಳು ಅಂದರೆ ಹರಿಯುವ ಮತ್ತು ನೀರೆತ್ತುವ 2 ಸಾವಿರ ಹೆಕ್ಟೇರ್​ವರೆಗಿನ ಅಚ್ಚುಕಟ್ಟು ಪ್ರದೇಶ ಸಣ್ಣ ನೀರಾವರಿ ಯೋಜನಾ ವ್ಯಾಪ್ತಿಗೆ ಬರುತ್ತದೆ. ಸಣ್ಣ ನೀರಾವರಿ ಯೋಜನೆಗಳ ಮೂಲಕ ಕೃಷಿಕರಿಗೆ ಸಮಯ ಸಂದರ್ಭಾನುಸಾರವಾಗಿ ನೀರು ಪೂರೈಸಲಾಗುತ್ತಿದೆ.

ರಾಜ್ಯದಲ್ಲಿ ಮೇಲ್ಮೈ ಜಲ ಮೂಲಗಳಿಂದ ನೀರಾವರಿಗೆ ಒಳಪಡಿಸಬಹುದಾದ ಗರಿಷ್ಠ ವಿಸ್ತೀರ್ಣವನ್ನು 45 ಲಕ್ಷ ಹೆಕ್ಟೇರ್‌ ಎಂದು ಅಂದಾಜಿಸಲಾಗಿದೆ. ಈ ಪೈಕಿ 10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸಣ್ಣ ನೀರಾವರಿ ಯೋಜನೆಗಳ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ ಎಂದು ಅಂದಾಜಿಸಲಾಗಿದೆ. ಈವರೆಗೂ ಸಣ್ಣ ನೀರಾವರಿ ಯೋಜನೆಗಳಡಿ 8.39 ಲಕ್ಷ ಹೆಕ್ಟೇರ್‌ ಪ್ರದೇಶ ಅಚ್ಚುಕಟ್ಟು ಒದಗಿಸಲಾಗಿದೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 1441 ಕೋಟಿ ರೂ. ವೆಚ್ಚದ 15 ಯೋಜನೆಗಳಿಗೆ ಸಚಿವ ಸಂಪುಟವು ಅನುಮೋದನೆ ನೀಡಿದ್ದು, ಹಲವು ಯೋಜನೆಗಳ ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿವೆ.

ಅನುಮೋದನೆಗೊಂಡಿರುವ ಕಾಮಗಾರಿಗಳು

  • ಶಿವಮೊಗ್ಗ ಜಿಲ್ಲೆಯ ಹೊಳೆಹನಸವಾಡಿ ಗ್ರಾಮದ ಹತ್ತಿರ ಹರಿಯುತ್ತಿರುವ ತುಂಗಾ ನದಿಯಿಂದ 29 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಏತ ನೀರಾವರಿ ಯೋಜನೆ ಮೂಲಕ ಆರು ಗ್ರಾಮಗಳ ಒಟ್ಟು 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ.
  • ಅಗರ (STP) ಕೆರೆಯಿಂದ ಕೆ & ಸಿ ಪಂಪ್ ಹೌಸ್‌ವರೆಗೆ 30 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಹೆಚ್ಚುವರಿಯಾಗಿ 35 ಎಂಎಲ್​ಡಿ ನೀರನ್ನು ಕೊಂಡೊಯ್ಯಲು ಪೈಪ್ ಲೈನ್ ಅಳವಡಿಕೆ
  • ಪಶ್ಚಿಮವಾಹಿನಿ ಯೋಜನೆಯಡಿ 35 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಪಡುವರಿ ಗ್ರಾಮದ ಸುಬ್ಬರಾಡಿ ಎಂಬಲ್ಲಿ ಉಪ್ಪು ನೀರು ತಡೆ ಅಣೆಕಟ್ಟು ರಚನೆ ಕಾಮಗಾರಿ
  • ಕಲಬುರಗಿ ಜಿಲ್ಲೆ ಕಲಬುರಗಿ ದಕ್ಷಿಣ ತಾಲೂಕಿನ ಕೆರೆಗಳಿಗೆ 197.71 ಕೋಟಿ ರೂ. ವೆಚ್ಚದಲ್ಲಿ ಬೆಣ್ಣೆತೊರೆ ಜಲಾಶಯದ ಮೇಲ್ಬಾಗದಿಂದ ಏತ ನೀರಾವರಿ ಮೂಲಕ ನೀರನ್ನು ತುಂಬಿಸುವ ಕಾಮಗಾರಿ
  • ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಲಕ್ಷಣತೀರ್ಥ ನದಿಯಿಂದ 19 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಏತ ನೀರಾವರಿ ಯೋಜನೆ ಮೂಲಕ ಚಿಲ್ಕಾಂದ ಮತ್ತು ಇತರ ಗ್ರಾಮಗಳಿಗೆ ಕುಡಿಯುವ ನೀರಿಗಾಗಿ 11 ಕೆರೆಗಳಿಗೆ ಬದಲಾಗಿ 14 ಕೆರೆಗಳಿಗೆ ನೀರು ತುಂಬಿಸುವ ಯೋಜನೆ.
  • ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ 250 ಕೋಟಿ ಮೊತ್ತದ ಯೋಜನೆ ಹಾಕಿಕೊಳ್ಳಲಾಗಿದೆ.
  • ಬೆಳಗಾವಿ ಜಿಲ್ಲೆ, ಬೆಳಗಾವಿ ತಾಲೂಕಿನಲ್ಲಿ 15 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಯಳ್ಳೂರ-1080 ಸಣ್ಣ ನೀರಾವರಿ ಕೆರೆಯ ಏರಿ ಬಲವರ್ಧನೆ ಮತ್ತು ಸುಧಾರಣೆ ಕಾಮಗಾರಿ
  • ಕಲಬುರಗಿ ಜಿಲ್ಲೆ, ಅಫಲಪುರ ತಾಲ್ಲೂಕಿನ ಘೋಳನೂರು ಹಾಗೂ ಮೊಗನ ಇಟಗಾ ಗ್ರಾಮಗಳ ನಡುವೆ 72 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಭೀಮಾ ನದಿಗೆ ಅಡ್ಡಲಾಗಿ ಸೇತುವೆ ಸಹಿತ ಬಾಂದಾರ ನಿರ್ಮಾಣ
  • ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲೂಕಿನ ವಿವಿಧ ಗಾಮಗಳ ಕೆರೆಗಳಿಗೆ 24.85 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕನ್ಯಾ ಜಲಾಶಯದಿಂದ ಏತ ನೀರಾವರಿ ಯೋಜನೆಯ ಮೂಲಕ ನೀರು ತುಂಬಿಸುವ ಕಾಮಗಾರಿಯ 2ನೇ ಹಂತ
  • ಚಿಕ್ಕಮಗಳೂರು ಜಿಲ್ಲೆಯಲ್ಲಿ ಲಕ್ಕಾ ಹೋಬಳಿ ಬೈರಾಪುರ ಪಿಕಪ್​ನಿಂದ ಮಾದರಸನ ಕೆರೆಗೆ ಮತ್ತು ಹಿರೇಮಗಳೂರು ಕೆರೆಯಿಂದ ದಾಸರಹಳ್ಳಿ ಕೆರೆಗೆ ನೀರು ತುಂಬಿಸುವ ಎರಡು ಏತ ನೀರಾವರಿ ಯೋಜನೆಗಳು
  • ಬೆಂಗಳೂರು ನಗರದ ಹುಳಿಮಾವು ಸಂಸ್ಕರಣಾ ಘಟಕದಿಂದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ 10 ಎಂ.ಎಲ್.ಡಿ. ನೀರನ್ನು ಚಿಕ್ಕಬೇಗೂರು ಸಂಸ್ಕರಣಾ ಘಟಕಕ್ಕೆ ಒದಗಿಸುವ 19.50 ಕೋಟಿ ರೂ. ಅಂದಾಜು ವೆಚ್ಚದ ಏತ ನೀರಾವರಿ ಯೋಜನೆಯ ಕಾಮಗಾರಿ.
  • ಬೆಂಗಳೂರು ನಗರದ ಚಿಕ್ಕಬೇಗೂರು ಸಂಸ್ಕರಣಾ ಘಟಕದಿಂದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ 15 ಎಂ.ಎಲ್.ಡಿ ನೀರನ್ನು ಅಗರ ಸಂಸ್ಕರಣಾ ಘಟಕಕ್ಕೆ ಒದಗಿಸುವ ಏತ ನೀರಾವರಿ ಯೋಜನೆ, ಇದರಿಂದ ಕೆ.ಸಿ. ವ್ಯಾಲಿ ಯೋಜನೆಗೆ 50 ಎಂ.ಎಲ್.ಡಿ. ಹೆಚ್ಚುವರಿಯಾಗಿ ಒದಗಿಸಲು ಅನುಕೂಲವಾಗಲಿದೆ.
  • ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲ್ಲೂಕು, ಪವನಹಳ್ಳಿ ಹಾಗೂ ಇತರೆ 50 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ
  • ಕೆ.ಸಿ. ವ್ಯಾಲಿ ಯೋಜನೆ ಅಡಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಕೊಂಡೊಯ್ಯಲಾಗುತ್ತಿರುವ 40 ಎಂ.ಎಲ್.ಡಿ. ನೀರನ್ನು ಬಳಸಿಕೊಳ್ಳುವ ಬಗ್ಗೆ ಕಾಡುಬಿಸನಹಳ್ಳಿ ಎಸ್.ಟಿ.ಪಿಯಿಂದ ಬೆಳಂದೂರು ಜಾಕ್‌ವೆಲ್ ವರೆಗೆ ಪೈಪ್‌ಲೈನ್‌ ಅಳವಡಿಸುವ 40.00 ಕೋಟಿ ರೂ.ಗಳ ಅಂದಾಜು ಮೊತ್ತದ ಕಾಮಗಾರಿ
  • ಕೊಪ್ಪಳ ಜಿಲ್ಲೆ, ಕೊಪ್ಪಳ ತಾಲೂಕು ಹಿರೇಹಳ್ಳಕ್ಕೆ 89.96 ಕೋಟಿ ರೂ. ಅಂದಾಜು ವೆಚ್ಚದಲ್ಲಿ ತುಂಗಭದ್ರಾ ನದಿಯಿಂದ ಏತ ನೀರಾವರಿ ಮೂಲಕ ನೀರನ್ನು ತುಂಬಿಸುವ ಕಾಮಗಾರಿ,
  • ತುಮಕೂರು ಜಿಲ್ಲೆ, ತಿಪಟೂರು ತಾಲೂಕಿನ ಕೆರೆಗಳಿಗೆ 180 ಕೋಟಿ ರೂ. ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆ.
  • ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಕೆರೆಗಳಿಗೆ 457.18 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೃಷ್ಣಾ ನದಿಯಿಂದ ಏತ ನೀರಾವರಿ ಮೂಲಕ ನೀರನ್ನು ತುಂಬಿಸುವ ಕಾಮಗಾರಿ.
  • ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅಥಣಿ ಗ್ರಾಮೀಣ ಭಾಗದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ನೀರಾವರಿ ಸಂಘದ ರೈತರ ಜಮೀನುಗಳಿಗೆ 21 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೃಷ್ಣಾ ನದಿಯಿಂದ ಏತ ನೀರಾವರಿ ಸೌಲಭ್ಯ ಒದಗಿಸುವ ಕಾಮಗಾರಿ ಪ್ರಗತಿಯಲ್ಲಿದೆ‌.
  • ಪಶ್ಚಿಮವಾಹಿನಿ ಯೋಜನೆಯಡಿ ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲೂಕು, ಹೆರೂರು ಗ್ರಾಮದ ಸೇತುವೆ ಬಳಿ 35 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮಡಿಸಾಲು ಹೊಳೆಗೆ ಅಡ್ಡಲಾಗಿ ಉಪ್ಪುನೀರು ತಡೆ ಅಣೆಕಟ್ಟು ನಿರ್ಮಾಣ ಕಾಮಗಾರಿ
  • ಪಶ್ಚಿಮವಾಹಿನಿ ಯೋಜನೆಯಡಿ ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲೂಕು, ಕೊಕ್ಕರ್ಣೆ ಗ್ರಾಮಪಂಚಾಯತ್ ವ್ಯಾಪ್ತಿಯ ಮೊಗವೀರಪೇಟೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹತ್ತಿರ 35 ಕೋಟಿ ರೂ. ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿ
  • ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಪರ್ವತಿ (ಹಿರೇಕೆರೆ) ಗಂಜಿಕೆರೆಗಳಿಗೆ ಮಲಪಭಾ ನದಿಯ ಆಸಂಗಿ ಬ್ಯಾರೇಜಿನಿಂದ 12 ಕೋಟಿ ರೂ ವೆಚ್ಚದಲ್ಲಿ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ಪ್ರಗತಿಯಲ್ಲಿರುವ ಯೋಜನೆಗಳು

  • ಬೆಂಗಳೂರು ನಗರದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೋಲಾರ ಜಿಲ್ಲೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಒಟ್ಟು 126 ಕೆರೆಗಳಿಗೆ ತುಂಬಿಸುವ 1,450 ಕೋಟಿ ರೂ. ಅಂದಾಜು ವೆಚ್ಚದ ಕೋರಮಂಗಲ ಚಲ್ಲಘಟ್ಟ ವ್ಯಾಲಿ ಏತ ನೀರಾಮ ಯೋಜನೆಯನ್ನು ಚಾಲನೆಗೊಳಿಸಿದ್ದು, 7.24 ಟಿಎಂಸಿ ನೀರನ್ನು 84 ಕೆರೆಗಳಿಗೆ ಹಾಗೂ 114 ಚೆಕ್ ಡ್ಯಾಂಗಳಿಗೆ ತುಂಬಿಸಲಾಗುತ್ತಿದೆ. ಇದುವರೆಗೆ 1,365.20 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಉಳಿದ ಕೆರೆಗಳಿಗೆ ನೀರು ತುಂಬಿಸಲು ಅಗತ್ಯ ಕಾಮಗಾರಿಗಳು ಪ್ರಗತಿಯಲ್ಲಿವೆ.
  • ಬೆಂಗಳೂರು ನಗರದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಹೆಬ್ಬಾಳ ನಾಗವಾರ ಕಣಿವೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 65 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಈ ವರೆಗೆ 1.79 ಟಿಎಂಸಿ ನೀರನ್ನು 35 ಕೆರೆಗಳಿಗೆ ತುಂಬಿಸಲಾಗಿದೆ. 947.88 ಕೋಟಿ ರೂ. ಅಂದಾಜು ವೆಚ್ಚದ ಈ ಯೋಜನೆಯಡಿ ಈ ವರೆಗೆ 850 ಕೋಟಿ ರೂ. ವೆಚ್ಚ ಮಾಡಲಾಗಿದೆ.
  • ಬೆಂಗಳೂರು ನಗರದ ಸಂಸ್ಕರಿಸಿದ ತ್ಯಾಜ್ಯ ನೀರನ್ನು 260.61 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಆನೇಕಲ್ ತಾಲೂಕಿನ 67 ಕೆರೆಗಳನ್ನು ಹಾಗೂ ಕನಕಪುರ ತಾಲ್ಲೂಕಿನ ರಾವುತನಹಳ್ಳಿ ಮತ್ತು ಮಾವತ್ತೂರು ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಯಡಿ 214.33 ಕೋಟಿ ರೂ. ವೆಚ್ಚ ಮಾಡಲಾಗಿದೆ.
  • ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲೂಕಿನ 30 ಕೆರೆಗಳಿಗೆ ಕೆ.ಆರ್.ಪುರಂ ಎಸ್.ಟಿ.ಪಿ.ಯಿಂದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ತುಂಬಿಸುವ ಕಾಮಗಾರಿಯನ್ನು 113.70 ಕೋಟಿ ರೂ. ಮೊತ್ತದ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ.
  • ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಆಗ್ರಹಾರ ಗಾಮದ ಬಳಿ 144 ಕೋಟಿ ರೂ. ವೆಚ್ಚದಲ್ಲಿ ನದಿಯಿಂದ ನೀರನ್ನು ಎತ್ತಿ ಮಂಡ್ಯ ತಾಲೂಕು, ದುದ್ದ ಹೋಬಳಿಯ 54 ಕರೆ/ಅಟ್ಟೆಗಳನ್ನು ತುಂಬಿಸುವ ಯೋಜನೆಯ ಕಾಮಗಾರಿಗಳು ಪ್ರಗತಿಯಲ್ಲಿದೆ.
  • ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂಕು, ಶ್ಯಾದನಹಳ್ಳಿ ಬಳಿ ಮೊಸಳೆ ಹಳಕ್ಕೆ ಪಿಕಪ್ ರ್ಮ, ಏತ ನೀರಾವರಿ ಮೂಲಕ ವಡ್ಡರಹಳ್ಳಿ ಗ್ರಾಮದ ಕಣಿವೆ ಕೆರೆಗೆ ನೀರು ತುಂಬಿಸುವುದು ಹಾಗೂ ಸೂಕ್ಷ್ಮ ನೀರಾವರಿ ಕಲ್ಪಿಸುವ 41 ಕೋಟಿ ರೂ. ಯೋಜನೆಯ ಪ್ರಗತಿಯಲ್ಲಿದೆ.
  • ಮೈಸೂರು ಜಿಲ್ಲೆ ಮೈಸೂರು ತಾಲೂಕಿನ ಒಟ್ಟು 23 ಕೆರೆಗಳಿಗೆ ನೀರು ತುಂಬಿಸಲು 50 ಕೋಟಿ ರೂ. ಹಾಗೂ 15 ಕೋಟಿ ರೂ. ವೆಚ್ಚದಲ್ಲಿ ಆನಂದೂರು ಗ್ರಾಮದ ಬಳಿ ಎರಡು ಏತ ನೀರಾವರಿ ಯೋಜನೆ ನಿರ್ಮಾಡಿ ಕಾಮಗಾರಿ ಪ್ರಗತಿಯಲ್ಲಿದೆ.
  • ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಗ್ರಾಮಗಳಿಗೆ ಕೃಷ್ಣಾ ನದಿಯಿಂದ ಏತ ನೀರಾವರಿ ಯೋಜನೆ ನಿರ್ಮಾಣ ಕಾಮಗಾರಿಯನ್ನು ರೂ.139.55 ಕೋಟಿ ಮೊತ್ತದಲ್ಲಿ ಕೈಗೊಳ್ಳಲಾಗಿದೆ.
  • ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಕೌಜಲಗಿ, ಗೋಸಬಾಳ ಹಾಗೂ ಸುತ್ತಮುತ್ತಲಿನ ಹಳಿಗಳ ಜಮೀನುಗಳಗೆ ಕಲ್ಮಡ್ಡಿ ಏತ ನೀರಾವರಿ ಯೋಜನೆ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವ 161.20 ಕೋಟಿ ರೂ. ವೆಚ್ಚದ ಯೋಜನೆಯಡಿ ಇದುವರೆಗೆ ಒಟ್ಟು 149,09 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗಿದೆ.
  • ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಮತ್ತು ಕೊಪ್ಪಳ ತಾಲೂಕುಗಳ ಕೆರೆಗಳಿಗೆ 290 ಕೋಟಿ ರೂ. ವೆಚ್ಚದಲ್ಲಿ ತುಂಗಭದ್ರಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ನೀರು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದೆ.
  • ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನಲ್ಲಿ 498,80 ಕೋಟಿ ರೂ. ವೆಚ್ಚದಲ್ಲಿ ಕೃಷ್ಣಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ನೀರನ್ನು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಬಳ್ಳಾರಿ ಜಿಲ್ಲೆ ಹಡಗಲಿ ತಾಲೂಕಿನ ಕಾಲ್ವಿ ತಾಂಡದ ಹತ್ತಿರ ಏತ ನೀರಾವರಿ ಯೋಜನೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ.
  • ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ತಾಲೂಕು, ಹರೇಕಳ ಎಂಬಲ್ಲಿ ನೇತ್ರಾವತಿ ನದಿಗೆ ಸೇತುವೆ ಸಹಿತ ಉಪ್ಪು ನೀರು ತಡೆ ಕಿಂಡಿ ಆಣೆಕಟ್ಟು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಇದುವರೆಗೆ 181.04 ಕೋಟಿ ರೂ. ವೆಚ್ಚ ಮಾಡಲಾಗಿದೆ.
  • ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮದ ಮುಳಿಕ್ಕಾರು ಎಂಬಲ್ಲಿ 14.97 ಕೋಟಿ ರೂ. ವೆಚ್ಚದಲ್ಲಿ ನೆರಿಯಾ ಹೊಳೆಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
  • ಹಾವೇರಿ ಜಿಲ್ಲೆ ಹಿರೇಕೇರೂರ ತಾಲೂಕಿನ ಕುಮುದ್ವತಿ ನದಿಗೆ ಅಡ್ಡಲಾಗಿ 17.07 ಕೋಟಿ ರೂ. ವೆಚ್ಚದಲ್ಲಿ ಸರಣಿ ಸೇತುವೆ ಸಹಿತ ಬ್ಯಾರೇಜ್‌ಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

ABOUT THE AUTHOR

...view details