ಬೆಂಗಳೂರು: ಲಾಕ್ಡೌನ್ ನಡುವೆಯೂ ಆರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಲಾಕ್ಡೌನ್ ಮಧ್ಯೆ ಐಪಿಎಸ್ ಅಧಿಕಾರಿಗಳ ವರ್ಗಾವಣೆ - ಪೊಲೀಸ್ ಇಲಾಖೆಗೆ ಸರ್ಜರಿ
ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಆಗಿದ್ದು, ಆರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಐಪಿಎಸ್ ಅಧಿಕಾರಿಗಳಾದ ಶರತ್ ಚಂದ್ರ (ಆಡಳಿತ ವಿಭಾಗದಿಂದ ಸಿಐಡಿ ಅರಣ್ಯ ಘಟಕ ಐಜಿಪಿ, ನಂಜುಂಡಸ್ವಾಮಿ (ಬಳ್ಳಾರಿ ಐಜಿಪಿಯಿಂದ ಕಾರಾಗೃಹ ಇಲಾಖೆ ಐಜಿಪಿ), ಮನಿಶ್ ಖರ್ಬಿಕರ್ (ಈಶಾನ್ಯ ವಲಯದಿಂದ ಐಜಿಪಿ ಬಳ್ಳಾರಿ ವಲಯ), ರಾಘವೇಂದ್ರ ಸುಹಾಸ್ (ಉತ್ತರ ವಲಯದಿಂದ ಆಂತರಿಕ ಭದ್ರತಾ ವಿಭಾಗ) ಹಾಗೂ ಸತೀಶ್ ಕುಮಾರ್ (ಕಲಬುರಗಿ ನಗರ ಕಮಿಷನರ್ ಹುದ್ದೆಯಿಂದ ಐಜಿಪಿ ಉತ್ತರ ವಲಯ), ಡಾ. ವೈ.ಎಸ್.ರವಿಕುಮಾರ್ (ನೇಮಕಾತಿ ವಿಭಾಗದ ಡೆಪ್ಯೂಟಿ ಐಜಿಪಿಯಿಂದ ಕಲಬುರಗಿ ನಗರ ಕಮಿಷನರ್) ಆಗಿ ವರ್ಗಾವಣೆ ಮಾಡಲಾಗಿದೆ.