ಬೆಂಗಳೂರು:ಕೇರಳದ ಗವರ್ನಮೆಂಟ್ ಚಿಲ್ಡ್ರನ್ ಹೋಮ್ನಿಂದ 6 ಅಪ್ರಾಪ್ತ ಬಾಲಕಿಯರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಕಿ ಬೆಂಗಳೂರಲ್ಲಿ ಇಂದು ಪತ್ತೆಯಾಗಿದ್ದಾಳೆ.
ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 6 ಬಾಲಕಿಯಲ್ಲಿ ಒಬ್ಬರು ಪತ್ತೆಯಾಗಿದ್ದು, ಈಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಣರಾಜ್ಯೋತ್ಸವ ಆಚರಣೆಯ ಬಳಿಕ 6 ಮಂದಿ ಬಾಲಕಿಯರು ಸಂಸ್ಥೆಯಿಂದ ನಾಪತ್ತೆಯಾಗಿದ್ದರು. ಘಟನೆ ಸಂಬಂಧ ಚೆವಯೂರು ಠಾಣೆಗೆ ಚಿಲ್ಡ್ರನ್ ಹೋಮ್ ಅಧೀಕ್ಷಕರು ದೂರು ನೀಡಿದ್ದರು.