ಕರ್ನಾಟಕ

karnataka

ETV Bharat / city

ಐಎಂಎ ವಂಚನೆ ಪ್ರಕರಣ: ಮನ್ಸೂರ್​​​ ವಿಚಾರಣೆ ಚುರುಕುಗೊಳಿಸಿದ ಎಸ್ಐಟಿ

ನ್ಯಾಯಾಲಯದ ಅನುಮತಿ ಪಡೆದು ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್​ನನ್ನು ನಿನ್ನೆಯಿಂದ ವಶಕ್ಕೆ ಪಡೆದಿರುವ ಎಸ್ಐಟಿ ವಿಚಾರಣೆ ತೀವ್ರಗೊಳಿಸಿದೆ.

ಮನ್ಸೂರ್ ವಿಚಾರಣೆ

By

Published : Aug 4, 2019, 11:20 AM IST

ಬೆಂಗಳೂರು:ಎಸ್ಐಟಿ ವಶದಲ್ಲಿರುವ ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್​ನ ವಿಚಾರಣೆಯನ್ನು ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.

ನ್ಯಾಯಾಲಯದ ಅನುಮತಿ ಪಡೆದು ನಿನ್ನೆಯಿಂದ ಎಸ್ಐಟಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿತ್ತು.‌ ಇಂದು ಸಹ ಡೋರ್ ಕ್ಲೋಸ್ ಮಾಡಿಕೊಂಡು ಮನ್ಸೂರ್ ವಿಚಾರಣೆ ಮುಂದುವರೆಸಿದ್ದಾರೆ.

ತನಿಖಾಧಿಕಾರಿಗಳನ್ನು ಬಿಟ್ಟರೆ ಮನ್ಸೂರ್ ಇರುವ ಕೊಠಡಿಗೆ ಯಾರ ಎಂಟ್ರಿಯೂ ಇಲ್ಲದಂತೆ ಅಧಿಕಾರಿಗಳು ನೋಡಿಕೊಂಡಿದ್ದಾರೆ. ಹಾಗೂ ಮನ್ಸೂರ್ ಜೊತೆ ಯಾವುದೇ ಪೊಲೀಸ್ ಸಿಬ್ಬಂದಿ ಮಾತನಾಡದಂತೆ ಅಧಿಕಾರಿಗಳು ತಾಕೀತು ಮಾಡಿದ್ದಾರೆ.

ABOUT THE AUTHOR

...view details