ಕರ್ನಾಟಕ

karnataka

ETV Bharat / city

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದ ಎಸ್​ಐಒ ಕರ್ನಾಟಕ ನಿಯೋಗ - ಬೆಂಗಳೂರು ಸುದ್ದಿ

ಸೆಪ್ಟೆಂಬರ್ 16ರಂದು ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲೂ ರಾಷ್ಟ್ರೀಯ ನೂತನ ಶಿಕ್ಷಣ ನೀತಿಯ ಬಗ್ಗೆ ಚರ್ಚಿಸಬೇಕು. ಜತೆಗೆ ಸಿಎಂಗೆ ಈ ಬಗ್ಗೆ ಚರ್ಚೆಗೆ ಸಮಯ ಮೀಸಲಿಡಲು ಪತ್ರ ಬರೆಯುವಂತೆ ವಿನಂತಿಸಿದೆ..

SIO Karnataka Mission meets Former CM Siddaramaiah
ಎಸ್​ಐಒ ಕರ್ನಾಟಕ ನಿಯೋಗದಿಂದ ವಿರೋಧಪಕ್ಷ ನಾಯಕ ಸಿದ್ಧರಾಮಯ್ಯ ಭೇಟಿ

By

Published : Sep 9, 2020, 6:54 PM IST

ಬೆಂಗಳೂರು :ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತರಲು ಯತ್ನಿಸುತ್ತಿರುವ ನೂತನ ಶಿಕ್ಷಣ ನೀತಿಯ ಬಗ್ಗೆ ಮುಂಗಾರು ಅಧಿವೇಶನದಲ್ಲಿ ಚರ್ಚಿಸಲು ಸರ್ಕಾರದ ಮೇಲೆ ಒತ್ತಾಯ ತರಬೇಕೆಂದು ಎಸ್​ಐಒ ಕರ್ನಾಟಕ ನಿಯೋಗ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದೆ.

ಎಸ್​ಐಒ ಕರ್ನಾಟಕ ನಿಯೋಗದಿಂದ ವಿರೋಧಪಕ್ಷ ನಾಯಕ ಸಿದ್ಧರಾಮಯ್ಯ ಭೇಟಿ

ಇಂದು ವಿರೋಧಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಿಯೋಗ, ಸೆಪ್ಟೆಂಬರ್ 16ರಂದು ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲೂ ರಾಷ್ಟ್ರೀಯ ನೂತನ ಶಿಕ್ಷಣ ನೀತಿಯ ಬಗ್ಗೆ ಚರ್ಚಿಸಬೇಕು. ಜೊತೆಗೆ ಮುಖ್ಯಮಂತ್ರಿಗೆ ಈ ಬಗ್ಗೆ ಚರ್ಚೆಗೆ ಸಮಯ ಮೀಸಲಿಡಲು ಪತ್ರ ಬರೆಯುವಂತೆ ವಿನಂತಿಸಿದೆ.

ಈ ವೇಳೆ ಎಸ್​ಐಒ ರಾಜ್ಯಾಧ್ಯಕ್ಷ ನಿಹಾಲ್ ಕಿದಿಯೂರು, ಪ್ರಧಾನ ಕಾರ್ಯದರ್ಶಿ ಡಾ.ನಸೀಮ್ ಅಹ್ಮದ್, ಸಂಪರ್ಕ ಕಾರ್ಯದರ್ಶಿ ಯಾಸೀನ್ ಕೋಡಿಬೆಂಗ್ರೆ, ರಾಜ್ಯ ಕಾರ್ಯದರ್ಶಿಗಳಾದ ಅಸೀಮ್ ಜವಾದ್, ಸಯ್ಯದ್ ಶಫಿ, ಸದಸ್ಯರಾದ ಅಫ್ವಾನ್ ಹೂಡೆ ಉಪಸ್ಥಿತರಿದ್ದರು.

ABOUT THE AUTHOR

...view details