ಅರಕಲಗೂಡು/ ಅನೇಕಲ್/ಬಾಗಲಕೋಟೆ:ಕೊರೊನಾ ಭೀತಿ ಹಿನ್ನೆಲೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ನವರಾತ್ರಿ ಹಾಗೂ ದಸರಾ ಹಬ್ಬವನ್ನು ಸಂಪ್ರದಾಯ ಬದ್ದ ಮತ್ತು ಸರಳವಾಗಿ ಆಚರಿಸಲಾಯಿತು.
ಕೊರೊನಾ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಸರಳ ದಸರಾ ಆಚರಣೆಗೆ ಚಾಲನೆ - Anekal
ಕೊರೊನಾ ಭೀತಿ ಹಿನ್ನೆಲೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಅರಕಲಗೂಡು ಪಟ್ಟಣ, ಆನೇಕಲ್ ಹಾಗೂ ಬಾಗಲಕೋಟೆಯಲ್ಲಿ ದಸರಾ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು.

ಅರಕಲಗೂಡು ಪಟ್ಟಣದ ಗ್ರಾಮದೇವತೆ ಶ್ರೀ ದೊಡ್ಡಮ್ಮ ತಾಯಿ ಸನ್ನಿಧಿಯಲ್ಲಿ ಶಾಸಕ ಎ. ಟಿ. ರಾಮಸ್ವಾಮಿ ಹಾಗೂ ತಾಲೂಕಿನ ವಿವಿಧ ಮಠಾಧೀಶರು ದಸರಾ ಉತ್ಸವಕ್ಕೆ ಚಾಲನೆ ನೀಡಿದರು. ಪ್ರತಿ ವರ್ಷದಂತೆ ಈ ಬಾರಿಯೂ ಆನೇಕಲ್ ದಸರಾಗೆ ಚಾಲನೆ ದೊರಕಿದೆ. ಆನೇಕಲ್ ಚೌಡೇಶ್ವರಿ ದೇವಿಗೆ ನಿತ್ಯ ವಿಭಿನ್ನವಾದ ಹೂವಿನ ಅಲಂಕಾರಗಳಲ್ಲಿ ಪೂಜೆ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ದೇವಾಲಯದಲ್ಲಿ ಆನೇಕಲ್ ಶಾಸಕ ದಂಪತಿ ಜ್ಯೋತಿ ಬೆಳಗುವ ಮೂಲಕ ದಸರಾಗೆ ಚಾಲನೆ ನೀಡಿದರು.
ಇನ್ನು ಬಾಗಲಕೋಟೆಯಲ್ಲಿ ನವರಾತ್ರಿಯ ಮೊದಲನೇ ದಿನ ಘಟ್ಟ ಸ್ಥಾಪನೆ ಹಿನ್ನೆಲೆ, ನಗರದ ಅಂಬಾ ಭವಾನಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಪೂಜೆ ಪುನಸ್ಕಾರ ಜರುಗಿತು. ಎಸ್ಎಸ್ಕೆ ಸಮಾಜದ ಭಾಂದವರು ಮೊದಲು ದಿನ ಘಟ್ಟವನ್ನು ಹಾಕಿ, ಆರತಿ ಪೂಜೆ ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.