ಬೆಂಗಳೂರು: ದಸರಾ ಆಚರಣೆಗೆ ಸಿಲಿಕಾನ್ ಸಿಟಿ ಮಾರುಕಟ್ಟೆಗಳು ಸಿಂಗಾರಗೊಂಡಿದ್ದು, ಕೆ ಆರ್ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಎರಡು ದಿನ ಮುನ್ನವೇ ಜನ ಕಿಕ್ಕಿರಿದು ತುಂಬಿದ್ರೆ, ಮಲ್ಲೇಶ್ವರಂ ಮಾರುಕಟ್ಟೆ ದೀಪಾಲಂಕಾರಗಳಿಂದ ಸಿಂಗಾರಗೊಂಡು ಗ್ರಾಹಕರನ್ನು ಆಹ್ವಾನಿಸುತ್ತಿದೆ.
ದಸರಾ ಖರೀದಿ ಜೋರು.. ಎಲ್ಲೆಲ್ಲೂ ಬೂದು ಕುಂಬಳಕಾಯಿ, ಬಾಳೆ ಕಂಬ ಮಾರಾಟ.. - ಕೆ.ಆರ್ ಮಾರುಕಟ್ಟೆ
ದಸರಾ ಆಚರಣೆಗೆ ಸಿಲಿಕಾನ್ ಸಿಟಿ ಮಾರುಕಟ್ಟೆಗಳು ಸಿಂಗಾರಗೊಂಡಿದ್ದು, ಕೆ ಆರ್ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಎರಡು ದಿನ ಮುನ್ನವೇ ಜನ ಕಿಕ್ಕಿರಿದು ತುಂಬಿದ್ರೆ, ಮಲ್ಲೇಶ್ವರಂ ಮಾರುಕಟ್ಟೆ ದೀಪಾಲಂಕಾರಗಳಿಂದ ಸಿಂಗಾರಗೊಂಡು ಗ್ರಾಹಕರನ್ನು ಆಹ್ವಾನಿಸುತ್ತಿದೆ.
ಸೋಮವಾರದ ಆಯುಧ ಪೂಜೆ, ಮಂಗಳವಾರ ವಿಜಯದಶಮಿ ಆಗಿದ್ದರಿಂದ ಎರಡು ದಿನ ಮುನ್ನವೇ ವ್ಯಾಪಾರ ಬಿರುಸಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಸಾಲು ಸಾಲು ರಜೆಯ ಕಾರಣ ಎರಡು ದಿನ ಮುನ್ನವೇ ಆಯುಧ ಪೂಜೆ, ಕಚೇರಿ ಪೂಜೆ ನೆರವೇರಿಸಲಾಗಿದೆ. ಸ್ಥಳಕ್ಕೊಂದರಂತೆ ಬೂದುಗುಂಬಳಕಾಯಿ, ಬಾಳೆ ಕಂಬದ ಬೆಲೆಯಲ್ಲೂ ಹೆಚ್ಚು ಕಡಿಮೆ ಇದೆ. ಇನ್ನು, ಕೆ ಆರ್ ಮಾರುಕಟ್ಟೆಯಲ್ಲಿ ಒಂದು ಮಾರು ಸೇವಂತಿಗೆ ಹೂವಿಗೆ 60-80 ರೂ. ಇದ್ದು, ಮಲ್ಲೇಶ್ವರಂ ಮಾರುಕಟ್ಟೆಯಲ್ಲಿ 50 ರಿಂದ 70 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
ಕೆ ಆರ್ ಮಾರುಕಟ್ಟೆಯಲ್ಲಿ ಬೂದು ಕುಂಬಳ ಕಾಯಿಗೆ 100 ರಿಂದ 250 ರೂ.ಗೆ ಮಾರಾಟ ಮಾಡಲಾಗುತ್ತಿದ್ದು, ಮಲ್ಲೇಶ್ವರಂ ಬೀದಿಗಳಲ್ಲಿ ಕೆಜಿಗೆ 60 ರಂತೆ ಮಾರಾಟ ಮಾಡಲಾಗುತ್ತಿದೆ. ಬಾಳೆಕಂಬ ಜೋಡಿಗೆ 40 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ನಾಳೆಯೂ ಸಹ ಹೆಚ್ಚಿನ ಗ್ರಾಹಕರು ಬರುವ ನಿರೀಕ್ಷೆಯಿದ್ದು, ವ್ಯಾಪಾರ ಉತ್ತಮವಾಗಬಹುದು ಎಂಬ ನಿರೀಕ್ಷೆಯಲ್ಲಿ ವ್ಯಾಪಾರಿಗಳಿದ್ದಾರೆ.ಇನ್ನು, ಹೂವಿನ ದರದಲ್ಲಿ ಕೊಂಚ ಏರಿಕೆಯಾಗಿದ್ದು, ಗ್ರಾಹಕರ ಕೈ ಬಿಸಿ ಮಾಡಿದೆ. ಆದರೆ, ಈರುಳ್ಳಿ ದರ ಕಡಿಮೆಯಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತೆ ಮಾಡಿದೆ.