ಬೆಂಗಳೂರು : ಸಿಲಿಕಾನ್ ಸಿಟಿ ಜನರು ಯುಗಾದಿ ಹಬ್ಬದ ಪ್ರಯುಕ್ತ ವಿಭಿನ್ನವಾದ ಸಾವಯವ ಊಟ ಮಾಡಿ ಸಂಭ್ರಮಿಸಿದರು.
ಸಾವಯವ ಊಟ ತಿಂದು, ಭರ್ಜರಿಯಾಗಿ ಯುಗಾದಿ ಆಚರಿಸಿದ ಸಿಲಿಕಾನ್ ಸಿಟಿ ಜನ - kannada newspaper
ಸಿರಿಧಾನ್ಯದ ಕಿಚಡಿ, ಕೆಂಪಕ್ಕಿ ಅನ್ನ, ತಿಳಿ ಸಾರು, ಸಿರಿಧಾನ್ಯದ ಬರ್ಫಿ, ಶ್ಯಾವಿಗೆ ಪಾಯಸ, ದಹಿ ಚಾಟ್, ಖಾರದ ರೊಟ್ಟಿ, ಬಗೆ ಬಗೆಯ ಪಲ್ಯ, ಚಟ್ನಿ ಹೀಗೆ ಹತ್ತಾರು ಬಗೆಯ ಈ ವಿಶಿಷ್ಟ ಖಾದ್ಯಗಳ ಔತಣ ಮಲ್ಲೇಶ್ವರಂನ ಗ್ರೀನ್ ಪಾಥ್ನಲ್ಲಿ ಆಯೋಜನೆಯಾಗಿತ್ತು.
ಸಿರಿಧಾನ್ಯದ ಕಿಚಡಿ, ಕೆಂಪಕ್ಕಿ ಅನ್ನ, ತಿಳಿ ಸಾರು, ಸಿರಿಧಾನ್ಯದ ಬರ್ಫಿ, ಶ್ಯಾವಿಗೆ ಪಾಯಸ, ದಹಿ ಚಾಟ್, ಖಾರದ ರೊಟ್ಟಿ, ಬಗೆ ಬಗೆಯ ಪಲ್ಯ, ಚಟ್ನಿ ಹೀಗೆ ಹತ್ತಾರು ಬಗೆಯ ಈ ವಿಶಿಷ್ಟ ಖಾದ್ಯಗಳ ಔತಣ ಮಲ್ಲೇಶ್ವರಂನ ಗ್ರೀನ್ ಪಾಥ್ನಲ್ಲಿ ಆಯೋಜನೆಯಾಗಿತ್ತು. ಮೊದಲಿಗೆ ಬೇವು-ಬೆಲ್ಲ ಕೊಟ್ಟು ಹಬ್ಬದ ಆಚರಣೆಯನ್ನು ನೆನಪಿಸುತ್ತಾ ಗ್ರಾಹಕರನ್ನು ಊಟಕ್ಕೆ ಕರೆದೊಯ್ಯುವ ವ್ಯವಸ್ಥೆ ಇಲ್ಲಿತ್ತು. ಯುಗಾದಿ ಹಬ್ಬಕ್ಕಾಗಿ ತಯಾರಾದ ವಿಶಿಷ್ಟ ಖಾದ್ಯಗಳನ್ನು ಅನೇಕರು ಕುಟುಂಬ ಸಮೇತರಾಗಿ ಬಂದು ಸವಿದರು.
ಮನೆಯಲ್ಲಿ ಹಬ್ಬದಡುಗೆ ಮಾಡೋ ಮನಸ್ಸಿದ್ರೂ ಯಾರಿಗೂ ಅಷ್ಟೊಂದು ಸಮಯ ಇರೋದಿಲ್ಲ. ಅಲ್ಲದೇ ಹಬ್ಬದ ದಿನ ಮನೆಯವ್ರೆಲ್ಲಾ ಆರಾಮಾಗಿ ಊಟ ಮಾಡಿ ಖುಷಿಯಿಂದ ಕಾಲ ಕಳೆಯೋಕೆ ಬಯಸುತ್ತಾರೆ. ಜೊತೆಗೆ ಇತ್ತೀಚೆಗೆ ಆರೋಗ್ಯದ ಬಗ್ಗೆ ಕಾಳಜಿಯೂ ಹೆಚ್ಚಿರೋದ್ರಿಂದ ಸಾವಯವ ಪದಾರ್ಥಗಳಿಂದಲೇ ಎಲ್ಲಾ ಖಾದ್ಯಗಳನ್ನೂ ತಯಾರಿಸಿ ಬಡಿಸಲಾಗ್ತಿದೆ ಎಂದ್ರು ಗ್ರೀನ್ ಪಾಥ್ ಸಂಸ್ಥಾಪಕ ಜಯರಾಮ್ ತಿಳಿಸಿದ್ದಾರೆ.