ಬೆಂಗಳೂರು: ಜನಸ್ನೇಹಿ, ಕ್ರಿಯಾಶೀಲ ಆಡಳಿತ ನೀಡುವ ಉದ್ದೇಶದಿಂದ ಸರ್ಕಾರದ ಸೇವೆ ಹಾಗೂ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಸಲುವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ.
ಬಿಎಸ್ವೈ ಬಜೆಟ್-2021-22: ಜನಸ್ನೇಹಿ ಆಡಳಿತ ನೀಡಲು ಸಿಎಂ ಕೈಗೊಂಡ ಮಹತ್ವದ ಯೋಜನೆಗಳಿವು - budget 2021,
ಆಡಳಿತ ಯಂತ್ರವನ್ನು ಎಲ್ಲಾ ಹಂತದಲ್ಲಿ ತಂತ್ರಜ್ಞಾನದ ಸಹಾಯದೊಂದಿಗೆ ಪಾರದರ್ಶಕವಾಗಿ ಮುನ್ನೆಡೆಸಿಕೊಂಡು ಹೋಗಲು ಕ್ರಮ ಕೈಗೊಂಡಿರುವುದಾಗಿ ಬಜೆಟ್ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಶ್ವಾಸನೆ ನೀಡಿದ್ದಾರೆ. ಜನಸ್ನೇಹಿ ಆಡಳಿತ ನೀಡಲು ಸಿಎಂ ಕೈಗೊಂಡ ಮಹತ್ವದ ಯೋಜನೆಗಳ ಮಾಹಿತಿ ಇಲ್ಲಿದೆ.

CM yediyurappa
ಆಡಳಿತ ಯಂತ್ರವನ್ನು ಎಲ್ಲಾ ಹಂತದಲ್ಲಿ ತಂತ್ರಜ್ಞಾನದ ಸಹಾಯದೊಂದಿಗೆ ಪಾರದರ್ಶಕವಾಗಿ ಮುನ್ನೆಡೆಸಿಕೊಂಡು ಹೋಗಲು ಕ್ರಮ ಕೈಗೊಂಡಿರುವುದಾಗಿ ಬಜೆಟ್ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಶ್ವಾಸನೆ ನೀಡಿದ್ದಾರೆ.
- ಆಡಳಿತ ವ್ಯವಸ್ಥೆಯಲ್ಲಿ ದಕ್ಷತೆ ತರಲು ಎರಡನೇ ಆಡಳಿತ ಸುಧಾರಣಾ ಆಯೋಗ ರಚನೆ.
- ಪ್ರತಿ ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿಗಳು ಹಳ್ಳಿಗೆ ತೆರಳಿ ಜನರ ಸಮಸ್ಯೆ ಇತ್ಯರ್ಥ ಮಾಡುವುದು.
- ವೃದ್ಯರು, ವಿಧವೆಯರು, ವಿಶಿಷ್ಟಚೇತನರಿಗೆ ಮನೆ ಬಾಗಿಲಿಗೆ ಮಾಸಾಶನ.
- ಕೃಷಿ ಭೂಮಿ ಪರಿವರ್ತಿಸುವ ಪ್ರಕ್ರಿಯೆ ಸರಳಿಕರೀಸಲು ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ.
- ಭೂ ದಾಖಲೆ ಒದಗಿಸಲು ಗಣಕೀಕೃತ ಆಕಾರ್ ಬಂದ್ ಪಹಣಿ ಮಾಹಿತಿ ಒದಗಿಸುವ ವ್ಯವಸ್ಥೆ.
- ಗ್ರಾಮೀಣ ಜನವಸತಿ ಪ್ರದೇಶಗಳಿಗೆ ಹಕ್ಕು ದಾಖಲೆಗಳನ್ನು ಒದಗಿಸಲು 25 ಕೋಟಿ ರೂ.ವೆಚ್ಚದಲ್ಲಿ ಸ್ವಾಮಿತ್ವ ಯೋಜನೆ ಜಾರಿ.
- ನಗರ ಪ್ರದೇಶದ ಭೂ ದಾಖಲೆ ಸಂರಕ್ಷಿಸಲು 48 ನಗರ- ಪಟ್ಟಣಗಳ ನಗರ ಮಾಪನ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಂರಕ್ಷಿಸುವುದು.
- ಗೇಣಿದಾರರು, ಕುಮ್ಕಿ ಜಮೀನು, ಖಾನೇ, ಬಾನೇ, ಡೀಮ್ಡ್ ಅರಣ್ಯ ಸಾಗುವಳಿದಾರರ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ ಪರಿಹಾರ ಕಂಡುಕೊಳ್ಳಲು ಪ್ರತ್ಯೇಕ ಸಮಿತಿ ರಚನೆ.
- ಆಡಳಿತಾತ್ಮಕ ಹಿತದೃಷ್ಟಿಯಿಂದ ವಿಜಯನಗರ ಜಿಲ್ಲೆಗೆ ಎಲ್ಲಾ ಅಗತ್ಯ ಮೂಲಸೌಕರ್ಯ ಒದಗಿಸುವುದು.
- ಸರ್ಕಾರಿ ನೌಕರರಿಗೆ ಕಾಲ ಕಾಲಕ್ಕೆ ದೊರೆಯಬೇಕಾದ ಸೌಲಭ್ಯಗಳನ್ನು ನಿಗದಿತ ಅವಧಿಯಲ್ಲಿ ನೀಡಲು ಎಚ್ ಆರ್ ಎಂಎಸ್ -2 ಯೋಜನೆ ಜಾರಿ.
- ಸರ್ಕಾರಿ ನೌಕರರು ಮತ್ತು ಅವಲಂಬಿತರಿಗೆ ಜ್ಯೋತಿ ಸಂಜೀವಿನಿ ಯೋಜನೆ ಮಾರ್ಪಡಿಸಿ, ಶಸ್ತ್ರ ಚಿಕಿತ್ಸೆ ವಿಧಾನಗಳಿಗೆ ನಗದು ರಹಿತ ಚಿಕಿತ್ಸೆ ನೀಡಲು ಯೋಜನೆ.
- ಸರ್ಕಾರಿ ವಿಮಾ ಇಲಾಖೆಯ ಎಲ್ಲಾ ಪ್ರಕ್ರಿಯೆಗಳನ್ನು ಗಣಕೀರಣಗೊಳಿಸುವುದು.
- ರಾಜ್ಯದ 5.5 ಕೋಟಿ ನಿವಾಸಿಗಳಿಗೆ ಕೌಟುಂಬಿಕ ಗುರುತು ದಾಖಲಿಸಿಕೊಂಡು ನಾಗರೀಕ ಸೇವಾ ಸೌಲಭ್ಯ ಒದಗಿಸಲು ಸಾಮಾಜಿಕ ನೋಂದಣಿ ಪುಸ್ತಕ ಮತ್ತು ಅರ್ಹತಾ ನಿವಾರ್ಹಣಾ ವ್ಯವಸ್ಥೆ ಜಾರಿಗೊಳಿಸಲು 15 ಕೋಟಿ ರೂ.ವೆಚ್ಚದ ಯೋಜನೆ ಜಾರಿ.
- ಸರ್ಕಾರದ 90 ಯೋಜನೆಗಳಡಿ ಪಲಾನುಭವಿಗಳಿಗೆ ಆರ್ಥಿಕ ನೆರವು ನೀಡಲು ಹಾಗೂ ಪಾರದರ್ಶಕತೆ ತರುವ ಉದ್ದೇಶದಿಂದ ಎಲ್ಲಾ ಯೋಜನೆಗಳನ್ನು ಡಿಬಿಟಿ ವೇದಿಕೆಯಡಿ ತರುವುದು.
- ಆಸ್ತಿ ನೋಂದಣಿ ವಂಚನೆ ಹಾಗೂ ದಾಖಲೆ ತಿರುಚುವುದನ್ನು ತಡೆಗಟ್ಟಲು ಐಐಟಿ ಕಾನ್ಪುರ ನೆರವಿನೊಂದಿಗೆ ಬ್ಲಾಕ್ ಚೈನ್ ತಂತ್ರಜ್ಞನ ಜಾರಿಗೊಳಿಸಲು ಒಂದು ಕೋಟಿ ರೂ.ವೆಚ್ಚದ ಯೋಜನೆ ಜಾರಿ.
- ವಿವಿಧ ಇಲಾಖೆಗಳು ಭೂ ಸಂಬಂಧಿತ ಚಟುವಟಿಕೆಗಳಿಗೆ ಹೊಂದಿರುವ ವಿವಿಧ ತಂತ್ರಾಂಶಗಳ ಬಳಕೆಯಿಂದ ಆಗುವ ಗೊಂದಲ ನಿವಾರಿಸಲು ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆ ಜಾರಿ.
- ರಾಜ್ಯ ದತ್ತಾಂಶ ಕೇಂದ್ರ ಸೈಬರ್ ಸುರಕ್ಷತೆ ಬಲಪಡಿಸಲು ಎರಡು ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತ ಭದ್ರತಾ ಕಾರ್ಯಾಚರಣೆ ಕೇಂದ್ರ ಸ್ಥಾಪನೆ.
- ವಿಪತ್ತು ಸಂದರ್ಭಗಳಲ್ಲಿ ಸರ್ಕಾರದ ದತ್ತಾಂಶ ಸಂರಕ್ಷಿಸಿ ಲಭ್ಯವಾಗುವಂತೆ ಮಾಡಲು 35 ಕೋಟಿ ರೂ.ವೆಚ್ಚದಲ್ಲಿ ರಾಜ್ಯ ದತ್ತಾಂಶ ಕೇಂದ್ರದ ವಿಪತ್ತು ಚೇತರಿಕೆ ಮತ್ತು ವ್ಯವಹಾರ ಮುಂದುವರಿಕೆ ತಾಣ ನಿರ್ಮಾಣ.
- ರಾಜ್ಯದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳ ದಾಖಲೆಗಳನ್ನು ಆನ್ ಲೈನ್ ನಲ್ಲಿ ಸಂಗ್ರಹಿಸಿ ಪ್ರಕಟಿಸಲು 3 ಕೋಟಿ ರೂ.ವೆಚ್ಚದಲ್ಲಿ ರಾಷ್ಟ್ರೀಯ ಶೈಕ್ಷಣಿಕ ಡೆಪಾಸಿಟರಿ ಅನುಷ್ಠಾನ.
Last Updated : Mar 8, 2021, 6:15 PM IST