ಕರ್ನಾಟಕ

karnataka

By

Published : Nov 7, 2020, 4:10 PM IST

ETV Bharat / city

'ಸರ್ಕಾರಿ ನೌಕರನ ಕುಟುಂಬದವರ ಚಟುವಟಿಕೆಗಳ ಮೇಲೆ ನಿರ್ಬಂಧ ಫ್ಯಾಸಿಸ್ಟ್​ ನಡವಳಿಕೆ'

ಸರ್ಕಾರವು ನೌಕರರನ್ನು ತನ್ನ ಗುಲಾಮರು, ಸ್ವತಂತ್ರ ವ್ಯಕ್ತಿತ್ವವಿಲ್ಲದ ರೋಬೋಟುಗಳು ಎಂದು ಭಾವಿಸಿದ ಹಾಗೆ ಕಾಣುತ್ತಿದೆ. ಉಪ ನಿಯಮಗಳು ಒಂದಕ್ಕೊಂದು ಸಂಪೂರ್ಣವಾಗಿ ವಿರೋಧಾಭಾಸಗಳಿಂದ ಕೂಡಿವೆ. ಒಂದು ಕಡೆ, ಏನೇ ಚಟುವಟಿಕೆಗಳನ್ನು ನಡೆಸಬೇಕೆಂದರೂ, ಏನೇ ಬರೆಯಬೇಕೆಂದರೂ, ಏನೇ ಮಾತನಾಡಬೇಕೆಂದರೂ, ಪ್ರಕಟಿಸಬೇಕೆಂದರೂ ಪೂರ್ವಾನುಮತಿ ಪಡೆಯುವುದು ಅಗತ್ಯ ಎಂದು ಹೇಳಲಾಗುತ್ತದೆ.

siddaramaiah-write-letter-to-cm-yadiyurappa-news
ಬಿಎಸ್​​ವೈಗೆ ಸಿದ್ದು ಪತ್ರ

ಬೆಂಗಳೂರು: ಸರ್ಕಾರಿ ನೌಕರರ ಕುಟುಂಬದವರು ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎನ್ನುವ ಸರ್ಕಾರದ ಆದೇಶ ನೌಕರ ವಿರೋಧಿ ನೀತಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಬಿಎಸ್​​ವೈಗೆ ಸಿದ್ದು ಪತ್ರ

ಈ ಸಂಬಂಧ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಇದು ಫ್ಯಾಸಿಸ್ಟ್ ರೀತಿಯ ನಡವಳಿಕೆ. ನೌಕರ ತಪ್ಪು ಮಾಡಿದರೆ, ಕುಟುಂಬಕ್ಕೆ ಶಿಕ್ಷೆ ಕೊಡಲಾಗುತ್ತದಯೇ? ಈ ರೀತಿಯ ಅಮಾನವೀಯ ನಿಯಮ ತರಬಾರದು. ಅಗತ್ಯ ಬಿದ್ದರೆ ತಜ್ಞರ ಸಮಿತಿ ರಚಿಸಿ ಬೇರೆ ದೇಶಗಳಲ್ಲಿ ಯಾವ ರೀತಿ ಕಾನೂನು ಇದೆ ಎಂಬ ಬಗ್ಗೆ ಅಧ್ಯಯನ ನಡೆಸಲಿ. ಬಳಿಕ ಉತ್ತಮವಾದ ಕಾನೂನು ರಚಿಸಿ. ಆತುರ ಪಟ್ಟು ನಿಯಮ ಜಾರಿ ಮಾಡುವುದು ಬೇಡ ಎಂದಿದ್ದಾರೆ.

ಬಿಎಸ್​​ವೈಗೆ ಸಿದ್ದು ಪತ್ರ

ಈ ಅಧಿಸೂಚನೆಯನ್ನು ಸಂಪೂರ್ಣವಾಗಿ ಗಮನಿಸಿದಾಗ, ಸರ್ಕಾರವು ನೌಕರರನ್ನು ತನ್ನ ಗುಲಾಮರು, ಸ್ವತಂತ್ರ ವ್ಯಕ್ತಿತ್ವವಿಲ್ಲದ ರೋಬೋಟುಗಳು ಎಂದು ಭಾವಿಸಿದ ಹಾಗೆ ಕಾಣುತ್ತಿದೆ. ಉಪ ನಿಯಮಗಳು ಒಂದಕ್ಕೊಂದು ವಿರೋಧಾಭಾಸಗಳಿಂದ ಕೂಡಿವೆ. ಒಂದು ಕಡೆ, ಏನೇ ಚಟುವಟಿಕೆಗಳನ್ನು ನಡೆಸಬೇಕೆಂದರೂ, ಏನೇ ಬರೆಯಬೇಕೆಂದರೂ, ಏನೇ ಮಾತನಾಡಬೇಕೆಂದರೂ, ಪ್ರಕಟಿಸಬೇಕೆಂದರೂ ಪೂರ್ವಾನುಮತಿ ಪಡೆಯುವುದು ಅಗತ್ಯ ಎಂದು ಹೇಳಲಾಗುತ್ತದೆ. ಅದೇ ಅಧಿನಿಯಮದ ಇನ್ನೊಂದು ಉಪನಿಯಮದಲ್ಲಿ ಇದಕ್ಕೆ ಸಂಪೂರ್ಣ ವಿರುದ್ಧವಾದ ನಿಲುವು ಇದೆ ಎಂದಿದ್ದಾರೆ.

ಬಿಎಸ್​​ವೈಗೆ ಸಿದ್ದು ಪತ್ರ

ಈಗಲೂ ಸಾಂಸ್ಕೃತಿಕವಾಗಿ ಮತ್ತು ವೈಜ್ಞಾನಿಕವಾಗಿ ಮೇಲ್ಪಂಕ್ತಿ ಆಗುವ ಕೆಲವು ವಿದ್ವಾಂಸರು ವಿಶ್ವ ವಿದ್ಯಾಲಯಗಳಲ್ಲಿ, ಕಾಲೇಜುಗಳಲ್ಲಿ ಇದ್ದಾರೆ. ಮತ್ತೆ ಕೆಲವರು ಸರ್ಕಾರಿ ನೌಕರಿಗಳಲ್ಲೂ ಇದ್ದಾರೆ. ಅದೇ ರೀತಿ ಬರೆಯಬೇಡಿ, ಓದಬೇಡಿ, ಸಂಶೋಧನೆ ಮಾಡಬೇಡಿ ಎಂದರೆ ಸಂಭ್ರಮಿಸುವ, ಖುಷಿಪಡುವ ದಡ್ಡರೂ, ಸೋಮಾರಿಗಳೂ ಇದ್ದಾರೆ.

ಸರ್ಕಾರ ತರಲು ಹೊರಟಿರುವ ನಿಯಮಗಳು ಇಂಥವರಿಗೆ, “ತೂಕಡಿಸುತ್ತಿದ್ದವರಿಗೆ ಹಾಸಿಗೆ ಹಾಸಿ ಕೊಟ್ಟಂತಾಗುತ್ತದೆ”. ಸೋಮಾರಿಗಳ ಕಿವಿ ಹಿಂಡಿ ಸಂಶೋಧನೆ, ಅಧ್ಯಯನಗಳಲ್ಲಿ ಗಂಭೀರವಾಗಿ ತೊಡಗುವಂತೆ ಮಾಡಬೇಕಾದ ಅನಿವಾರ್ಯತೆ ಇದೆ. ಸರ್ಕಾರ ಈ ಕುರಿತು ಆತುರ ಪಡದೆ ಅಧಿವೇಶನದಲ್ಲಿ ವಿಸ್ತೃತವಾಗಿ ಚರ್ಚಿಸಿ ನಿಯಮಗಳನ್ನು ಅಂತಿಮಗೊಳಿಸಬೇಕು ಎಂದು ಆಗ್ರಹಿಸುತ್ತೇನೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details