ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ನಿವಾಸದಲ್ಲಿಂದು "ಅಲೆಮಾರಿ ಬಂಧು" ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದರು.
ಕ್ಯಾಲೆಂಡರ್ ಬಿಡುಗಡೆ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಅಲೆಮಾರಿ ಜನಾಂಗದ ನಿಯೋಗ ಪ್ರೊ. ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ನನ್ನನ್ನು ಭೇಟಿ ಮಾಡಿದ್ದಾರೆ. ನಿಯೋಗವು ಅಲೆಮಾರಿ ಅಭಿವೃದ್ಧಿ ನಿಗಮ ಮಾಡಬೇಕೆಂದು ಮನವಿ ಮಾಡಿದ್ದಾರೆ. ಜಾತಿ ಸರ್ಟಿಫಿಕೇಟ್ ಪಡೆಯಲು ಸಮಸ್ಯೆ ಇದೆ. ಹೀಗಾಗಿ ಪ್ರತ್ಯೇಕ ನಿಗಮ ಮಾಡಲು ಮನವಿ ಮಾಡಿದ್ದಾರೆ. ನನ್ನ ಪ್ರಕಾರ ಅಭಿವೃದ್ಧಿ ನಿಗಮ ಮಾಡಬೇಕು ಎಂದು ಹೇಳಿದರು.
ನಾವು ಅಧಿಕಾರದಲ್ಲಿದ್ದಾಗ ಅಲೆಮಾರಿ ಜನಾಂಗದವರಿಗೆ ವಿಶೇಷ ಸವಲತ್ತು ನೀಡಿದ್ದೇವೆ. ಅಲೆಮಾರಿ ಜನಾಂಗದ ಕೋಶ ಎಂದು ಮಾಡಿದ್ದೆವು. ಆ ಹಣವನ್ನು ಅಲೆಮಾರಿ ಜನಾಂಗದ ಅಭಿವೃದ್ಧಿಗಾಗಿಯೇ ಉಪಯೋಗಿಸಿದ್ದೆವು ಎಂದರು.
ಅಲೆಮಾರಿ ಜನಾಂಗದವರು ಬೇರೆ ಬೇರೆ ಸಮಾಜದಲ್ಲಿ ಹಂಚಿ ಹೋಗಿದ್ದಾರೆ. ಇವರಿಗೆ ಭೂಮಿ, ಮನೆ ಏನೂ ಇಲ್ಲ. ಇವರು ಜೀವನ ನಡೆಸುವುದೇ ಕಷ್ಟ. ದೊಂಬಿದಾಸರ ರೀತಿ ಇವರಿಗೂ ಕಷ್ಟ. ನಾನು ಸರ್ಕಾರಕ್ಕೆ ಪತ್ರ ಬರೆದು ಒತ್ತಾಯ ಮಾಡುತ್ತೇನೆ. ಆದ್ರೆ ನನಗೆ ಈ ಸರ್ಕಾರದ ಮೇಲೆ ವಿಶ್ವಾಸ ಹೋಗಿದೆ. ಈ ಸರ್ಕಾರ ಹಿಂದುತ್ವದ ಪರ ಇದೆ. ನಾವೆಲ್ಲ ಹಿಂದೂಗಳೇ. ಆದರೆ ಹಿಂದುತ್ವ ನಮ್ಮನ್ನು ಮತ್ತೆ ಚತುರ್ವಣ ವ್ಯವಸ್ಥೆಗೆ ಕರೆದುಕೊಂಡು ಹೋಗುವ ರೂಪ. ಇವರು ತರುವ ಕಾನೂನು ಜನರಿಗೆ ಪ್ರಯೋಜನ ಇಲ್ಲ. ಯಾರೂ ಕೇಳಬಾರದು ಅಂತ ಭಾವನಾತ್ಮಕ ವಿಚಾರ ತರುತ್ತಾರೆ. ಆದರೆ ಅಲೆಮಾರಿಗಳಿಗೆ ನ್ಯಾಯ ಸಿಗಬೇಕಾಗಿರುವುದು ಅಗತ್ಯ ಎಂದರು.
ಇದನ್ನೂ ಓದಿ:ಕರ್ನಾಟಕ ಮುಕ್ತ ವಿವಿ ಕುಲಪತಿ ವಿದ್ಯಾಶಂಕರ್ ರಾಜೀನಾಮೆ ನೀಡಲಿ: ವರುಣಾ ಮಹೇಶ್
ಹಿರಿಯ ಸಾಹಿತಿ ಪ್ರೊ. ಸಿದ್ದರಾಮಯ್ಯ, ಮಾಜಿ ಸಚಿವರಾದ ಹೆಚ್. ಆಂಜನೇಯ, ರಾಜಶೇಖರ ಪಾಟೀಲ್ ಹಾಜರಿದ್ದರು.