ಕರ್ನಾಟಕ

karnataka

ETV Bharat / city

ಅಧಿವೇಶನ ನಡೆಯುವವರೆಗೂ ಅಹೋರಾತ್ರಿ ಧರಣಿ ಮುಂದುವರಿಯಲಿದೆ: ಸಿದ್ದರಾಮಯ್ಯ

ಅಧಿವೇಶನ ನಡೆಯುವವರೆಗೂ ಅಹೋರಾತ್ರಿ ಧರಣಿ ಮುಂದುವರಿಯಲಿದೆ. ಒಂದು ವೇಳೆ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರೆ ನಾವು ಜನರ ಬಳಿ ಹೋಗುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

siddaramaiah
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

By

Published : Feb 19, 2022, 1:45 PM IST

ಬೆಂಗಳೂರು: ಅಧಿವೇಶನ ನಡೆಯುವವರೆಗೂ ಅಹೋರಾತ್ರಿ ಧರಣಿ ಮುಂದುವರಿಯಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಅಧಿವೇಶನವನ್ನು ಅನಿರ್ದಿಷ್ಟಾವಧಿ ಮುಂದೂಡಿದರೆ ನಾವು ಜನರ ಬಳಿ ಹೋಗುತ್ತೇವೆ. ಇದು 130 ಕೋಟಿ ಜನರ ಭಾವನೆಗಳ ವಿಚಾರ. ಇದು ದೇಶದ ಸ್ವಾಭಿಮಾನದ ವಿಚಾರ.‌ ಇಂತಹ ಅವಮಾನ ಮಾಡಿದವರು ಸರ್ಕಾರದಲ್ಲಿ ಇರುವುದು ಹೇಗೆ? ಎಂದು ಪ್ರಶ್ನಿಸಿದರು.

ಸಂವಿಧಾನಕ್ಕೆ ಗೌರವ ಕೊಡದೇ ಈಶ್ವರಪ್ಪನವರು ಮಂತ್ರಿಯಾಗಿ ಹೇಗೆ ಇರುತ್ತಾರೆ ಎಂದು ಪ್ರಶ್ನಿಸಿದ್ರು. ಇನ್ನೂ ರಾಷ್ಟ್ರ ಧ್ವಜಕ್ಕೆ ಡಿ.ಕೆ. ಶಿವಕುಮಾರ್ ಅಪಮಾನ ಮಾಡಿಲ್ಲ. ಶಿವಮೊಗ್ಗದ ವಿಚಾರವನ್ನು ಡಿಕೆಶಿ ಖಂಡನೆ ಮಾಡಿದ್ರು ಎಂದು ಹೇಳಿದರು.

ರಾಷ್ಟ್ರಧ್ವಜ ಹಾರುವ ಜಾಗದಲ್ಲಿ ಕೇಸರಿ ಧ್ವಜ ಹಾರಿಸಿದ್ರಲ್ಲ ಅದಕ್ಕೆ ಕ್ರಮ ಏನು ತಗೆದುಕೊಂಡರು. ಈಶ್ವರಪ್ಪ ಅವರ ಕೈಯಲ್ಲಿ ಆರ್​ಎಸ್​ಎಸ್ ನವರೇ ಮಾಡಿಸಿರೋದು. ಈ ಪೆದ್ದ ಮಾಡಿಬಿಟ್ಟಿದ್ದಾನೆ ಎಂದು ಕಿಡಿಕಾರಿದರು. ಈ ಆರ್​ಎಸ್​ಎಸ್​ನವರಿಗೆ ತ್ರಿವರ್ಣ ಧ್ವಜದ ಮೇಲೆ ಗೌರವವಿಲ್ಲ.

ಅವರಿಗೆ ಕೇಸರಿ ಧ್ವಜದ ಮೇಲೆ ಗೌರವ. ಇದು ಸಂಪೂರ್ಣ ಆರ್​ಎಸ್​ಎಸ್ ಕುತಂತ್ರ ಎಂದು ಟೀಕಿಸಿದರು. ಅಲ್ಲದೇ ಈ ವಿಚಾರದ ಬಗ್ಗೆ ಚರ್ಚೆಗೆ ಅವಕಾಶ ಕೊಟ್ಟು, ಈಶ್ವರಪ್ಪ ಅವರು ರಾಜೀನಾಮೆ ಪಡೆದಿದ್ರೆ ಮುಂದೆ ಹಲವು ವಿಚಾರಗಳನ್ನು ಮಾತನಾಡಬಹುದಿತ್ತು ಎಂದರು.

ಇದನ್ನೂ ಓದಿ:ಈಶ್ವರಪ್ಪ ಹರಕು ಬಾಯಿ ದಾಸ, ಅವರದ್ದು ಆರ್​ಎಸ್​​ಎಸ್​ ಸಂಸ್ಕೃತಿ: ಹರಿಪ್ರಸಾದ್‌ ವಾಗ್ದಾಳಿ

ಸೋಮವಾರದಂದು ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರದಲ್ಲಿ ನಮ್ಮ ಪಕ್ಷದಿಂದ ಹೋರಾಟ ಮಾಡಲಿದ್ದಾರೆ ಎಂದರು.

ABOUT THE AUTHOR

...view details