ಕರ್ನಾಟಕ

karnataka

ETV Bharat / city

'ಸರ್ಕಾರದ ಸುಳ್ಳುಗಳ ಸರಮಾಲೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಬಯಲುಗೊಳಿಸಿದೆ' - ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಟ್ವೀಟ್

ಕೋವಿಡ್‌ನಿಂದ ಸತ್ತವರಿಗೆ ಪರಿಹಾರ ಕೊಡುವುದನ್ನು ತಪ್ಪಿಸಲು ಕೇಂದ್ರ ಬಿಜೆಪಿ ಸರ್ಕಾರ ಸಾವಿನ ಸುಳ್ಳು ಲೆಕ್ಕ ಹೇಳಿ ಮೋಸ ಮಾಡಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

siddaramaiah
ಸಿದ್ದರಾಮಯ್ಯ

By

Published : May 8, 2022, 7:43 AM IST

ಬೆಂಗಳೂರು:ಕೋವಿಡ್ ಕಾರಣದಿಂದಾಗಿ 2020-21 ರಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಸಾವು ಭಾರತದಲ್ಲಿ ಸಂಭವಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ನೀಡಿರುವ ವರದಿ ಉಲ್ಲೇಖಿಸಿ ರಾಜ್ಯ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, 'ಕೋವಿಡ್ ಕಾಯಿಲೆಯಿಂದ ಸತ್ತವರ ಸಂಖ್ಯೆಯನ್ನು ಬಚ್ಚಿಟ್ಟಿರುವ ಕೇಂದ್ರ ಬಿಜೆಪಿ ಸರ್ಕಾರದ ಸುಳ್ಳುಗಳ ಸರಮಾಲೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಬಯಲುಗೊಳಿಸಿದೆ' ಎಂದಿದ್ದಾರೆ.

ಕೋವಿಡ್ ಸಾವಿನ ಸಂಖ್ಯೆ ಕೇಂದ್ರ ಸರ್ಕಾರದ ಪ್ರಕಾರ 4.81 ಲಕ್ಷ ಮತ್ತು ಡಬ್ಲೂಹೆಚ್ಒ ಪ್ರಕಾರ 47.40 ಲಕ್ಷ. ಕೋವಿಡ್ ಕಾಯಿಲೆಯಿಂದ ಸತ್ತವರಿಗೆ ಪರಿಹಾರ ಕೊಡುವುದನ್ನು ತಪ್ಪಿಸಲು ಕೇಂದ್ರ ಬಿಜೆಪಿ ಸರ್ಕಾರ ಸಾವಿನ ಸುಳ್ಳು ಲೆಕ್ಕ ಹೇಳಿ ಮೋಸ ಮಾಡಿದೆ. ಇದರಿಂದ ಕೋವಿಡ್​​ನಿಂದ ಸಾವಿಗೀಡಾದ ಲಕ್ಷಾಂತರ ಮಂದಿಯ ಕುಟುಂಬಕ್ಕೆ ಪರಿಹಾರವೇ ಸಿಕ್ಕಿಲ್ಲ. ಕೋವಿಡ್ ಸಾವಿನ ಮರು ಎಣಿಕೆ ಮಾಡಿದರೆ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದು ಕೇಳಿದ್ದಾರೆ.

ಕೋವಿಡ್ ಸಾವಿನ ಸಂಖ್ಯೆ ಕೇವಲ 37,603 ಎಂದು ರಾಜ್ಯ ಬಿಜೆಪಿ ಸರ್ಕಾರ ಹೇಳಿತ್ತು. ಕೆಪಿಸಿಸಿ ಸಮೀಕ್ಷೆ ಪ್ರಕಾರ ಸಾವಿನ ಸಂಖ್ಯೆ 3.17 ಲಕ್ಷ ಆಗಿತ್ತು. ಅರವಿಂದ್ ಸುಬ್ರಹ್ಮಣ್ಯ ಮತ್ತು ಜೇಕಬ್ ಝಾ ಪ್ರಕಾರ ಸಾವಿನ ಸಂಖ್ಯೆ ನಾಲ್ಕು ಲಕ್ಷ. ಕಳೆದ ವರ್ಷದ ಜೂನ್ ತಿಂಗಳಲ್ಲಿಯೇ ನಾನು ಇದನ್ನು ಹೇಳಿದ್ದೆ. ಕೊರೊನಾ ಕಾಯಿಲೆಯಿಂದ ರಾಜ್ಯದಲ್ಲಿ ಈ ವರೆಗೆ 5 ಲಕ್ಷಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿರುವ ಸಾಧ್ಯತೆ ಇದೆ. ಮರು ಸಮೀಕ್ಷೆ ಮೂಲಕ ಮೃತರ ಸಂಖ್ಯೆಯನ್ನು ಖಚಿತವಾಗಿ ತಿಳಿದುಕೊಂಡು ಮೃತರ ಕುಟುಂಬಕ್ಕೆ ಕನಿಷ್ಠ 4 ಲಕ್ಷ ರೂ.ಪರಿಹಾರ ಕೊಡಬೇಕೆಂದು ಆಗ್ರಹಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ:'ಭಾರತದಲ್ಲಿ 47 ಲಕ್ಷ ಕೋವಿಡ್ ಸಾವು': WHO ವರದಿ ತಿರಸ್ಕರಿಸಿದ ಭಾರತ

ABOUT THE AUTHOR

...view details