ಬೆಂಗಳೂರು:ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಬೇಕಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ವಾರಾಂತ್ಯ ಆಸ್ಪತ್ರೆಯಲ್ಲೇ ಕಳೆಯಲಿದ್ದಾರೆ.
ಕಳೆದ ಸೋಮವಾರ ರಾತ್ರಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಮಂಗಳವಾರ ಪುತ್ರ ಡಾ.ಯತೀಂದ್ರ ಜೊತೆ ಬೆಂಗಳೂರಿನ ಎಚ್ಎಎಲ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದರಾಮಯ್ಯ ಆರೋಗ್ಯ ಸಾಕಷ್ಟು ಚೇತರಿಕೆ ಕಂಡಿದೆ. ಆದರೂ ಇನ್ನೆರಡು ದಿನ ಆಸ್ಪತ್ರೆಯಲ್ಲೇ ಇದ್ದು ವಿಶ್ರಾಂತಿ ಪಡೆಯುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಇದನ್ನು ಒಪ್ಪಿರುವ ಅವರು ಸೋಮವಾರ ಮನೆಗೆ ಹಿಂತಿರುಗಲು ತೀರ್ಮಾನಿಸಿದ್ದಾರೆ.
ಜ್ವರ ಲಕ್ಷಣ ಈಗ ಇಲ್ಲವಾಗಿದ್ದು, ನಿನ್ನೆ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿಯೂ ನೆಗೆಟಿವ್ ವರದಿ ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ಇಂದು ಮತ್ತು ನಾಳೆ ಆಸ್ಪತ್ರೆಯಲ್ಲಿಯೇ ಸಿದ್ದರಾಮಯ್ಯ ವಿಶ್ರಾಂತಿ ಪಡೆಯಲಿದ್ದಾರೆ. ಒಂದೊಮ್ಮೆ ನಿವಾಸಕ್ಕೆ ಆಗಮಿಸಿದರೆ ಭೇಟಿಗಾಗಿ ನಾಯಕರು ಬರುತ್ತಾರೆ. ಈ ಸಂದರ್ಭ ಸಮಸ್ಯೆ ಎದುರಾಗಬಹುದು. ಹೆಚ್ಚು ಮಾತನಾಡಿ ಸುಸ್ತಾಗುವುದು ಸರಿಯಲ್ಲ ಎಂದು ವೈದ್ಯರು ವಿವರಿಸಿದ್ದಾರೆ. ಇದರಿಂದ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯಲು ತೀರ್ಮಾನಿಸಿದ್ದಾರೆ.
ಓದಿ:ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ಎಸ್ಎಸ್ಎಲ್ಸಿ ಅಂಕಗಳ ಪರಿಗಣನೆ!