ಕರ್ನಾಟಕ

karnataka

ETV Bharat / city

ಸ್ವಾತಂತ್ರ್ಯಕ್ಕಾಗಿ ಮೋದಿ ಹೋರಾಡಿದ್ರಾ?... ಸಿದ್ದರಾಮಯ್ಯ ಪ್ರಶ್ನೆ - Siddarmaiah, campaing ,krishnabairegowda ,Bangalore ,

ಕಾಂಗ್ರೆಸ್ ಸರ್ಕಾರ ಇದ್ದಾಗಲೂ 12 ಸರ್ಜಿಕಲ್ ಸ್ಟ್ರೈಕ್ ಆಗಿದೆ. 4 ಯುದ್ದಗಳಾಗಿವೆ. ನಾಲ್ಕೂ ಬಾರಿಯೂ ಕೂಡ ನಾವು ಯುದ್ದದಲ್ಲಿ ಎದುರಾಳಿಯನ್ನು ಸೋಲಿಸಿದ್ದೀವಿ.ಇಂದಿರಾಗಾಂಧಿ ಇದ್ದಾಗ ಯುದ್ದ ಮಾಡಿ ಬಾಂಗ್ಲಾದೇಶ ನಿರ್ಮಾಣ ಆಯ್ತಲ್ಲಾ ಅದು ಮೋದಿ ಮಾಡಿದ್ದಾ ಎಂದು ಪ್ರಶ್ನೆ ಮಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್​ ಹೋರಾಟ ಮಾಡಿತ್ತೇ ಹೊರತು, ಬಿಜೆಪಿಯಾಗಲೀ ಮೋದಿಯಾಗಲಿ ಅಲ್ಲಾ ಎಂದರು.

ಸಿದ್ದರಾಮಯ್ಯ ಭರ್ಜರಿ  ಪ್ರಚಾರ

By

Published : Apr 6, 2019, 9:03 AM IST

ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಚಾರದ ಭರಾಟೆ ಹಚ್ಚಾಗಿದ್ದು ಅಭ್ಯರ್ಥಿಗಳು ತಮ್ಮ ಪರ ಸ್ಟಾರ್ ಪ್ರಚಾರಕರ ಮೋರೆ ಹೋಗಿದ್ದಾರೆ. ನಿನ್ನೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೃಷ್ಣ ಬೈರೇಗೌಡ ಅವರ ಪರ ಕೆ.ಆರ್.ಪುರಂ ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರ್ಜರಿ ಪ್ರಚಾರ ಮಾಡಿದರು.

ಕೆ.ಆರ್. ಪುರಂನ ಅಂಬೇಡ್ಕರ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೋದಿ ಒಬ್ಬರೇ ಈ ದೇಶ ರಕ್ಷಣೆ ಮಾಡುವವರು, ಬೇರೆ ಯಾರ ಕೈಲೂ ಮಾಡೋಕಾಗಲ್ಲ ಅಂತ ಜನತೆಗೆ ತಪ್ಪು ಸಂದೇಶ ಕೊಡುತ್ತಿದ್ದಾರೆ.ಪುಲ್ವಾಮಾದಲ್ಲಿ 42 ಜನ ಯೋಧರು ಸತ್ತರು. ದೇಶದ ಯೋಧರ ಬಗ್ಗೆ ಅಪಾರ ಗೌರವವಿದೆ.ನಮ್ಮ ನಮನ ಸಲ್ಲಿಸಬೇಕಾದ್ದು ಸೈನಿಕರಿಗೆ ಹೊರತು, ಬಿಜೆಪಿಯವರಿಗಲ್ಲ. ಸರ್ಜಿಕಲ್ ಸ್ಟ್ರೈಕ್ ರಾಜಕೀಯವಾಗಿ ಬಳಸಿಕೊಳ್ಳಲು ಮೋದಿ, ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪ ಮಾಡಿದರು.

ಸಿದ್ದರಾಮಯ್ಯ ಭರ್ಜರಿ ಪ್ರಚಾರ

ಕಾಂಗ್ರೆಸ್ ಸರ್ಕಾರ ಇದ್ದಾಗಲೂ 12 ಸರ್ಜಿಕಲ್ ಸ್ಟ್ರೈಕ್ ಆಗಿದೆ. 4 ಯುದ್ದಗಳಾಗಿವೆ. ನಾಲ್ಕೂ ಬಾರಿಯೂ ಕೂಡ ನಾವು ಯುದ್ದದಲ್ಲಿ ಎದುರಾಳಿಯನ್ನು ಸೋಲಿಸಿದ್ದೀವಿ. ಇಂದಿರಾಗಾಂಧಿ ಇದ್ದಾಗ ಯುದ್ದ ಮಾಡಿ ಬಾಂಗ್ಲಾದೇಶ ನಿರ್ಮಾಣ ಆಯ್ತಲ್ಲಾ ಅದು ಮೋದಿ ಮಾಡಿದ್ದಾ ಎಂದು ಪ್ರಶ್ನೆ ಮಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್​ ಹೋರಾಟ ಮಾಡಿತ್ತೇ ಹೊರತು, ಬಿಜೆಪಿಯಾಗಲೀ ಮೋದಿಯಾಗಲಿ ಅಲ್ಲಾ ಎಂದರು.

ಸದಾನಂದ ಗೌಡ ಈಗ ಮುಖಹೀನ ಆಗಿದ್ದಾರೆ. ಅವರ ಮುಖ ತೋರಿಸೋಕೆ ನಾಚಿಕೆ ಆಗುತ್ತದೆ. ನನ್ನ ಮುಖ ನೋಡಬೇಡಿ, ಮೋದಿ ಮುಖ ನೋಡಿ ಓಟು ಕೊಡಿ ಎಂದು ಕೇಳುವ ಸ್ಥಿತಿ ಬಿಜೆಪಿ ಅಭ್ಯರ್ಥಿಗಳಿಗೆ ಬಂದೊದಗಿದೆ ಎಂದು ಲೇವಡಿ ಮಾಡಿದರು.

For All Latest Updates

TAGGED:

ABOUT THE AUTHOR

...view details