ಕರ್ನಾಟಕ

karnataka

ETV Bharat / city

ಬಿಜೆಪಿಯಲ್ಲಿ ಭಿನ್ನಮತವಿಲ್ಲ, ಶಾಸಕರ ಜೊತೆ ಮಾತನಾಡುವ ಪ್ರಶ್ನೆಯೂ ಉದ್ಭವಿಸಿಲ್ಲ: ಶ್ರೀರಾಮುಲು - ರಾಜ್ಯ ಸಭಾ ಚುನಾವಣೆ ಅಭ್ಯರ್ಥಿ ಪೈಪೋಟಿ

ಕಮಲ ಪಾಳೆಯದಲ್ಲಿ ಭುಗಿಲೆದ್ದಿರುವ ರಾಜ್ಯಸಭಾ ಚುನಾವಣೆ ಅಭ್ಯರ್ಥಿ ಪೈಪೋಟಿಯಲ್ಲಿ ಯಾವುದೇ ಬಣ ಹಾಗೂ ಅಸಮಾಧಾನವಿಲ್ಲ. ನಾವೆಲ್ಲರೂ ಒಂದೇ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ.

shri-ramulu-statement-on-rajya-sabha-candidates-fight
ಶ್ರೀರಾಮುಲು

By

Published : May 29, 2020, 2:41 PM IST

ಬೆಂಗಳೂರು: ಬಿಜೆಪಿಯಲ್ಲಿ ಯಾವುದೇ ರೀತಿಯ ಭಿನ್ನಮತ ಇಲ್ಲವೆಂದು ಸ್ವತಃ ಶಾಸಕರೇ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ನಾವೆಲ್ಲಾ ಒಟ್ಟಾಗಿಯೇ ಇದ್ದೇವೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ರಾಜ್ಯಸಭೆ ಕೋಲಾಹಲ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಸೆವೆನ್ ಮಿನಿಸ್ಟರ್ ಕ್ವಾಟ್ರಸ್ ನಿವಾಸದಲ್ಲಿ ಮಾತನಾಡಿದ ಅವರು, ಸದ್ಯ ಸರ್ಕಾರದ ಮುಂದಿರುವ ಸವಾಲು, ಕೋವಿಡ್ ವಿರುದ್ಧ ಹೋರಾಟ ಮಾಡೋದಾಗಿದೆ. ಜನರು ಸಮಸ್ಯೆಯಲ್ಲಿ ನರಳುತ್ತಿರುವಾಗ ನಮ್ಮ ಆಲೋಚನೆ ಕೊರೊನಾ ವಿರುದ್ಧ ಹೋರಾಟ ಮಾಡುವುದೇ ಆಗಿದೆ.

ಉತ್ತರ ಕರ್ನಾಟಕ ಭಾಗದ ಶಾಸಕರು ಸಭೆ ಸೇರಿದ್ದರ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಆದರೆ ಅಸಮಾಧಾನದಿಂದ ಸೇರಿಲ್ಲ ಅಂತ ಸ್ವತಃ ಶಾಸಕರೇ ಹೇಳಿದ್ದಾರೆ. ನಾವೆಲ್ಲರೂ ಒಟ್ಟಾಗಿದ್ದೇವೆ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ ಎಂದರು.

ರಾಜಕೀಯ ಚರ್ಚೆ ಮಾಡಿಲ್ಲ ಎಂದು ಅವರೆ ಹೇಳಿದ್ದಾರೆ. ಹಾಗಾಗಿ ನಾನು ಅವರ ಜತೆ ಮಾತನಾಡುವ ಅಗತ್ಯವೇ ಇಲ್ಲ. ರಾಜಕೀಯ ಚರ್ಚೆ ಆಗಿಲ್ಲ ಅಂದಾಗ ನಾನು ಮಾತನಾಡುವ ಸನ್ನಿವೇಶವೇ ಬರೋದಿಲ್ಲ. ನಾವೆಲ್ಲರೂ ಸಿಎಂ ಜತೆಗಿದ್ದೇವೆ ಎಂದು ಭಿನ್ನಮತಕ್ಕೆ ತೆರೆ ಎಳೆದರು.

ಕೊರೊನಾ ವಿರುದ್ಧ ಹೋರಾಟ ಮಾಡೋದು ಮಾತ್ರ ನಮ್ಮ ಮುಂದಿರುವ ಗುರಿ. ನಿನ್ನೆ ರಾತ್ರಿ ಸಭೆ ಸೇರಿದ್ದ ಕೆಲ ಶಾಸಕರೂ ನನಗೆ ಕರೆ ಮಾಡಿ ಮಾತನಾಡಿದ್ದಾರೆ. ನಾವ್ಯಾರು ರಾಜಕೀಯ ಮತನಾಡಿಲ್ಲ ಎಂದೂ ಹೇಳಿದ್ದಾರೆ. ಹಾಗಾಗಿ ನಮ್ಮಲ್ಲಿ ಭಿನ್ನಮತ ಇದೆ ಅನ್ನೋದು ಸತ್ಯಕ್ಕೆ ದೂರವಾದ ಮಾತು ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ABOUT THE AUTHOR

...view details