ಕರ್ನಾಟಕ

karnataka

ETV Bharat / city

ಮುಂದುವರೆದ ಶ್ರಮಿಕ್ ರೈಲು ಸಂಚಾರ... ಇಂದು ಬೆಂಗಳೂರಿನಿಂದ ಮುಜಾಫರ್​ಪುರಕ್ಕೆ ತೆರಳಿದ ರೈಲು - ಮೆಜೆಸ್ಟಿಕ್​ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೇಂದ್ರ ರೈಲ್ವೆ ನಿಲ್ದಾಣ

ಮೆಜೆಸ್ಟಿಕ್​ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೇಂದ್ರ ರೈಲ್ವೆ ನಿಲ್ದಾಣದಿಂದ 1165 ಪ್ರಯಾಣಿಕರನ್ನು‌ ಹೊತ್ತ ಶ್ರಮಿಕ್​ ರೈಲು ಬಿಹಾರ ರಾಜ್ಯದ ಮುಜಾಫರ್​ಪುರದತ್ತ ತೆರಳಿದೆ.

passengers
passengers

By

Published : Jul 2, 2020, 4:25 PM IST

ಬೆಂಗಳೂರು:ಕೊರೊನಾ ಹಿನ್ನೆಲೆಯಲ್ಲಿ ತವರಿಗೆ ಮರಳಲು ಇಚ್ಛಿಸಿದ ವಲಸೆ ಕಾರ್ಮಿಕರಿಗೆ ರೈಲ್ವೆ ಇಲಾಖೆಯಿಂ‌ದ ಉಚಿತ ರೈಲು ವ್ಯವಸ್ಥೆ ಮುಂದುವರೆದಿದೆ. ಈ ತಿಂಗಳ ಮೊದಲ ಶ್ರಮಿಕ್ ರೈಲು ಬೆಂಗಳೂರಿನಿಂದ ಮುಜಾಫರ್​ಪುರಕ್ಕೆ ಇಂದು ತೆರಳಿದೆ.

ಶ್ರಮಿಕ್ ರೈಲು ಸಂಚಾರ

ಮೆಜೆಸ್ಟಿಕ್​ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೇಂದ್ರ ರೈಲ್ವೆ ನಿಲ್ದಾಣದಿಂದ 1165 ಪ್ರಯಾಣಿಕರನ್ನು‌ ಹೊತ್ತ ಶ್ರಮಿಕ್​ ರೈಲು ಬಿಹಾರ ರಾಜ್ಯದ ಮುಜಾಫರ್​ಪುರಕ್ಕೆ ತೆರಳಿತು.

ಶ್ರಮಿಕ್ ರೈಲು ಸಂಚಾರ

ಪ್ರತಿ ಪ್ರಯಾಣಿಕರಿಗೆ ಅನ್ನ, 4 ಚಪಾತಿ, ಸಿಹಿ ತಿನಿಸು, ಎರಡು ಬಾಳೆಹಣ್ಣು, 4 ಮೂಸಂಬಿ, 1 ಮೊಟ್ಟೆ ಹಾಗು 3 ನೀರಿನ ಬಾಟಲಿಗಳನ್ನು ರಾಜ್ಯ ಸರ್ಕಾರದ ವತಿಯಿಂದ ಒದಗಿಸಲಾಯಿತು.

ಆಹಾರ ವಿತರಣೆ

ಈವರೆಗೂ 258 ರೈಲುಗಳ ಮೂಲಕ 3,78,626 ಪ್ರಯಾಣಿಕರನ್ನು ತವರು ರಾಜ್ಯಗಳಿಗೆ ತಲುಪಿಸಲಾಗಿದೆ.

ABOUT THE AUTHOR

...view details