ಕರ್ನಾಟಕ

karnataka

ETV Bharat / city

ಸಿಎಂ ಗೃಹ ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್...ಬೆಂಕಿ ನಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ - Short Circuit

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಂಜೆ ಸಣ್ಣಮಟ್ಟದ ಬೆಂಕಿ ಕಾಣಿಸಿಕೊಂಡಿದ್ದು, ಸಿಎಂ ಕಚೇರಿ ಸಿಬ್ಬಂದಿ ಹಾಗು ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

short-circuit-in-home-office-krishna

By

Published : Sep 28, 2019, 10:14 PM IST

ಬೆಂಗಳೂರು:ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಂಜೆ ಎಸಿಯಲ್ಲಿ ಸಣ್ಣಮಟ್ಟದ ಬೆಂಕಿ ಕಾಣಿಸಿಕೊಂಡಿದ್ದು, ಸಿಎಂ ಕಚೇರಿ ಸಿಬ್ಬಂದಿ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಿನದ ಬಹುತೇಕ ಸಮಯ ಕಳೆಯುವ, ಅಧಿಕಾರಿಗಳ ಸಭೆ ನಡೆಸುವ, ಅತಿಥಿಗಳನ್ನು ಭೇಟಿ ಮಾಡುವ ಕೃಷ್ಣಾದಲ್ಲಿಯೇ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟಾವಶಾತ್​ ಪ್ರಾಣಾಪಾಯಗಳು ಸಂಭವಿಸಿಲ್ಲ.

ಸಿಎಂ ಮೂರು ದಿನಗಳ ಪ್ರವಾಸಕ್ಕೆ ತೆರಳಿರುವ ವೇಳೆ ಈ ಘಟನೆ ನಡೆದಿದೆ. ಸಂಜೆ 8.15 ಸಮಯದಲ್ಲಿ ಕೃಷ್ಣಾದಲ್ಲಿನ ಹವಾನಿಯಂತ್ರಿತ‌ ಯಂತ್ರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಎಚ್ಚುತ್ತುಕೊಂಡ ಅಲ್ಲಿನ ಸಿಬ್ಬಂದಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದರು.

ಇಂದು ಬೆಳಿಗ್ಗೆ ತುಮಕೂರಿಗೆ ತೆರಳಿದ್ದ ಸಿಎಂ ಬಿಎಸ್​ವೈ ಅಲ್ಲಿಂದ ಮೈಸೂರಿಗೆ ತೆರಳಿದ್ದಾರೆ. ನಾಳೆ ಮೈಸೂರು ದಸರಾ ಉದ್ಘಾಟಿಸಿ ಶಿವಮೊಗ್ಗ, ದಾವಣಗೆರೆ ಪ್ರವಾಸ ಮಾಡಲಿದ್ದಾರೆ. ಹೀಗಾಗಿ ಇಂದು ಗೃಹ ಕಚೇರಿಗೆ ಸಿಎಂ ಆಗಮಿಸಿರಲಿಲ್ಲ.

ABOUT THE AUTHOR

...view details