ಕರ್ನಾಟಕ

karnataka

ETV Bharat / city

ಕೊಲೆಗೆ ಸುಪಾರಿ ಪಡೆದಿದ್ದ ಆರೋಪಿ ಕಾಲಿಗೆ ಗುಂಡೇಟು... ಕೊಲೆಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಮಹಾಲಕ್ಷ್ಮಿ ಲೇಔಟ್ ಪೊಲೀಸ್

ಆಟೋ ಚಾಲಕ ರಘು ಕೊಲೆಗೆ ಸುಪಾರಿ ಪಡೆದಿದ್ದ ಆರೋಪಿ ಕಾಲಿಗೆ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ಗುಂಡು ಹಾರಿಸಿದ್ದಾರೆ.

shootout-in-bangalore
ಕೊಲೆಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

By

Published : Dec 24, 2019, 10:16 AM IST

Updated : Dec 24, 2019, 11:54 AM IST

ಬೆಂಗಳೂರು:ಆಟೋ ಚಾಲಕ ರಘು ಎಂಬುನ ಕೊಲೆಗೆ ಸುಪಾರಿ ಪಡೆದಿದ್ದ ಆರೋಪಿ ಕಾಲಿಗೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ಗುಂಡೇಟು ನೀಡಿದ್ದಾರೆ. ಬಳಿಕ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಕೊಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಆರೋಪಿ ಬಾಬು ಶಿವಕುಮಾರ್ ಮೇಲೆ ಗುಂಡು ಹಾರಿಸಲಾಗಿದೆ. ಇದೇ ತಿಂಗಳ 11ರಂದು ರಘು ಎಂಬ ಆಟೋ ಚಾಲಕನ ಕೊಲೆಯಾಗಿತ್ತು. ರಘುನನ್ನು ಕೊಲೆ ಮಾಡಲು ಆತನ ಮಾವ ಪ್ರಭಾಕರ್​​ ಎಂಬಾತ ಆರೋಪಿಗೆ ಸುಪಾರಿ ಕೊಟ್ಟಿದ್ದ ಎನ್ನಲಾಗ್ತಿದೆ. ಬಳಿಕ ಲಗ್ಗೆರೆ ಸೇತುವೆ ಬಳಿ ರಘುನನ್ನು ಕೊಲೆಗೈದಿದ್ದರು.

ಆರೋಪಿ ಕಾಲಿಗೆ ಗುಂಡೇಟು

ರಘುನನ್ನು ಕೊಲೆ ಮಾಡಿರುವ ದೃಶ್ಯ ಸಿಸಿಟಿವಿ ಸೆರೆಯಾಗಿತ್ತು. ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದರ ಆಧಾರದ ಮೇಲೆ ಬಂಧಿಸಲು ಮುಂದಾದಾಗ ಪೊಲೀಸರ ಮೇಲೆಯೇ ಆರೋಪಿ ಹಲ್ಲೆ ನಡೆಸಲು ಮುಂದಾಗಿದ್ದ. ಹೀಗಾಗಿ ಆತ್ಮ ರಕ್ಷಣೆಗಾಗಿ ಪಿಎಸ್ಐ ವೆಂಕಟರಾಮು ಅವರು ಗುಂಡು ಹಾರಿಸಿದ್ದಾರೆ.

ಆರೋಪಿ ಕಾಲಿಗೆ ಗುಂಡೇಟು

ವೃತ್ತಿಯಲ್ಲಿ ಚಾಲಕನಾಗಿ ಜೀವನ ನಡೆಸುತ್ತಿದ್ದ ರಘು ಹಾಗೂ ಆತನ ಮಾವ ಪ್ರಭಾಕರ್ ಅವರ ನಡುವೆ ಹಣಕಾಸಿನ ವಿಚಾರದಲ್ಲಿ ನಿತ್ಯ ಗಲಾಟೆ ನಡೆಯುತ್ತಿತ್ತು. ಹೀಗಾಗಿ ಚೆನ್ನೈನಲ್ಲಿರುವ ತನ್ನ ಸ್ನೇಹಿತನಿಗೆ ಪ್ರಭಾಕರ್ ₹ 50 ಸಾವಿರ ಹಣ ನೀಡಿ ರಘು ಕೊಲೆಗೆ ಸುಪಾರಿ ನೀಡಿದ್ದ ಎನ್ನಲಾಗ್ತಿದೆ.

ರಘು ಕೊಲೆ ಮಾಡಲಿಕ್ಕೆ ಸುಪಾರಿ ಪಡೆದಿದ್ದರ ಬಗ್ಗೆ ಮಾಹಿತಿ ಬಿಚ್ಚಿಟ್ಟ ಆರೋಪಿ ಶಿವಕುಮಾರ್, ₹ 50 ಸಾವಿರ ಹಣಕ್ಕಾಗಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗ್ತಿದೆ.

Last Updated : Dec 24, 2019, 11:54 AM IST

ABOUT THE AUTHOR

...view details