ಬೆಂಗಳೂರು: ಸಿಎಂ ಯಡಿಯೂರಪ್ಪ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ತಮ್ಮ ಸಚಿವಾಲಯದಲ್ಲಿ ಸಣ್ಣ ಸರ್ಜರಿ ಮಾಡಿಸಿದ್ದಾರೆ.
ಸಿಎಂ ಕಚೇರಿಗೆ ಸಣ್ಣ ಸರ್ಜರಿ: ಮುಖ್ಯಮಂತ್ರಿ ಕಾರ್ಯದರ್ಶಿ ಕಳಸದ್ ಎತ್ತಂಗಡಿ, ಆ ಹುದ್ದೆಗೆ ಸೆಲ್ವಕುಮಾರ್ ನಿಯೋಜನೆ - ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಡಾ. ಎಸ್. ಸೆಲ್ವಕುಮಾರ್ ನೇಮಕ
ಸಿಎಂ ಯಡಿಯೂರಪ್ಪ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಡಾ. ಎಸ್. ಸೆಲ್ವಕುಮಾರ್ ಅವರನ್ನು ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದ್ದರೆ, ಆ ಹುದ್ದೆಯಲ್ಲಿದ್ದ ಶಿವಯೋಗಿ ಕಳಸದ್ ಅವರನ್ನ ಅಲ್ಲಿಂದ ಎತ್ತಂಗಡಿ ಮಾಡಲಾಗಿದೆ.
![ಸಿಎಂ ಕಚೇರಿಗೆ ಸಣ್ಣ ಸರ್ಜರಿ: ಮುಖ್ಯಮಂತ್ರಿ ಕಾರ್ಯದರ್ಶಿ ಕಳಸದ್ ಎತ್ತಂಗಡಿ, ಆ ಹುದ್ದೆಗೆ ಸೆಲ್ವಕುಮಾರ್ ನಿಯೋಜನೆ](https://etvbharatimages.akamaized.net/etvbharat/prod-images/768-512-4806192-thumbnail-3x2-megha.jpg)
ಶಿವಯೋಗಿ ಕಳಸದ್
ಡಾ. ಎಸ್. ಸೆಲ್ವಕುಮಾರ್ರನ್ನು ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದ್ದರೆ, ಆ ಹುದ್ದೆಯಲ್ಲಿದ್ದ ಶಿವಯೋಗಿ ಕಳಸದ್ರನ್ನು ಎತ್ತಂಗಡಿ ಮಾಡಲಾಗಿದೆ. ಇನ್ನು ಡಾ. ವಿಶಾಲ್ರನ್ನು ಮುಖ್ಯಮಂತ್ರಿಯ ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಸಿಎಂ ಸಚಿವಾಲಯವನ್ನು ಪ್ರಧಾನಮಂತ್ರಿ ಕಚೇರಿ ರೀತಿಯಲ್ಲೇ ಆಡಳಿತ ವ್ಯವಸ್ಥೆಯನ್ನು ಉನ್ನತೀಕರಿಸಲು ಯಡಿಯೂರಪ್ಪ ಸೂಚನೆ ನೀಡಿದ್ದು, ಈ ಸಂಬಂಧ ಕೆಲ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.