ಕರ್ನಾಟಕ

karnataka

ETV Bharat / city

ಶಿವಾನಂದ ಸ್ಟೀಲ್ ಬ್ರಿಡ್ಜ್​​ ಓಪನ್​​: ಸದ್ಯ ಒಂದು ಬದಿ ಓಡಾಟ, ಆ.30ಕ್ಕೆ ಟೂ ವೇ ಸಂಚಾರ - steel bridge in shivananda circle

ಐದು ವರ್ಷಗಳ ಬಳಿಕ ಶಿವಾನಂದ ಸ್ಟೀಲ್ ಬ್ರಿಡ್ಜ್ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಇದೀಗ ಭಾಗಶಃ ರಸ್ತೆಯಲ್ಲಿ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

steel bridge
ಶಿವಾನಂದ ಸ್ಟೀಲ್ ಬ್ರಿಡ್ಜ್​​ ಓಪನ್​​

By

Published : Aug 17, 2022, 3:59 PM IST

ಬೆಂಗಳೂರು: ಶಿವಾನಂದ ಸ್ಟೀಲ್ ಬ್ರಿಡ್ಜ್ ಸಂಚಾರಕ್ಕೆ ಮುಕ್ತವಾಗಿದೆ. ಕಳೆದ 5 ವರ್ಷಗಳಿಂದ ನೆನೆಗುದಿಗೆ ಬಿದ್ದಿದ ಫ್ಲೈ ಓವರ್ ಅನ್ನು ಆಗಸ್ಟ್ 15 ರಂದು ಒನ್ ಸೈಡ್ ಓಪನ್ ಮಾಡಲಾಗಿದೆ. ಈ ತಿಂಗಳ ಅಂತ್ಯದೊಳಗೆ ಎರಡು ಕಡೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಪಾಲಿಕೆ ಹೇಳಿದೆ.

ಕಳೆದ 5 ವರ್ಷಗಳಿಂದ ನಗರದ ಶಿವಾನಂದ ಸರ್ಕಲ್ ಬಳಿ ಇರುವ ಸ್ಟೀಲ್ ಬ್ರಿಡ್ಜ್ ಕಾಮಗಾರಿ ಹಲವು ಕಾರಣಗಳಿಂದ ಸ್ಥಗಿತಗೊಂಡಿತ್ತು. ಮೂರು ಸಿಎಂಗಳು ಬಂದು ಹೋದರೂ ಬ್ರಿಡ್ಜ್ ಮತ್ರ ಓಪನ್ ಅಗಿರಲಿಲ್ಲ. ಕೆಲ ಕಾನೂನಾತ್ಮಕ ತೊಡಕಿನಿಂದ ಕಾಮಗಾರಿ ಕಳೆದ 5 ವರ್ಷಗಳಿಂದ ಆರಂಭವಾಗಿ ಅರ್ಧಕ್ಕೆ ನಿಂತಿತ್ತು. ಆದರೆ ಈಗ ನ್ಯಾಯಲಯದ ಆದೇಶದಂತೆ ಬ್ರಿಡ್ಜ್​​ ಅನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಸೋಮವಾರ ಒಂದು ಕಡೆ ಸಂಚಾರ ಆರಂಭವಾಗಿದೆ.

ಶಿವಾನಂದ ಸ್ಟೀಲ್ ಬ್ರಿಡ್ಜ್​​ ಓಪನ್

ಹೈಕೋರ್ಟ್​ನಿಂದ ಗ್ರೀನ್​ ಸಿಗ್ನಲ್​: 2017 ರ ಜೂನ್‌ನಲ್ಲಿ ಉಕ್ಕಿನ ಮೇಲ್ಸೇತುವೆ ಕಾಮಗಾರಿ ಆರಂಭಿಸಲಾಗಿತ್ತು. 9 ತಿಂಗಳಲ್ಲಿ ಪೂರ್ಣಗೊಳ್ಳಬೇಕಾದ ಕಾಮಗಾರಿ ವಿವಿಧ ಅಡೆತಡೆಗಳಿಂದಾಗಿ 5 ವರ್ಷವಾದ್ರೂ ಪೂರ್ಣಗೊಂಡಿರಲಿಲ್ಲ. ಹೈಕೋರ್ಟ್ ಕಾಮಗಾರಿಗೆ ಗ್ರೀನ್ ಸಿಗ್ನಲ್ ನೀಡಿದ ನಂತರ ಬಿಬಿಎಂಪಿ ಸಿಬ್ಬಂದಿ ಕಳೆದ ಒಂದು ತಿಂಗಳಿನಿಂದ ರಾತ್ರಿ ಹಗಲು ಕೆಲಸ ಮಾಡಿ ಕಾಮಗಾರಿ ಪೂರ್ಣ ಗೊಳಿಸಲು ಯತ್ನಿಸಿದರು.

ಈ ತಿಂಗಳ 15 ಕ್ಕೆ ಡೆಡ್ ಲೈನ್ ಫಿಕ್ಸ್ ಮಾಡಿಕೊಳ್ಳಲಾಗಿತ್ತು. ಆದರೆ ಸೇತುವೆಯ ಅಂಡರ್ ಪಾಸ್ ಕೆಳಗಡೆ ರಾಜಕಾಲುವೆ ಕಾಮಗಾರಿ ಪ್ರಗತಿಯಲ್ಲಿದೆ. ಹೀಗಾಗಿ ಶೇಷಾದ್ರಿಪುರಂ ಕಡೆಯಿಂದ ರೇಸ್ ಕೋರ್ಸ್​ ಕಡೆ ಮಾತ್ರ ಸಂಚಾರಕ್ಕೆ ಮುಕ್ತ ಗೊಳಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಅಭಿಯಂತರ ಲೋಕೇಶ್ ತಿಳಿಸಿದ್ದಾರೆ ಹೇಳಿದ್ದಾರೆ.

ಇದನ್ನೂ ಓದಿ:ನಿಲ್ಲದ ಡ್ರಗ್ಸ್ ಅಮಲು.. ಆರೋಗ್ಯದ ಮೇಲೆ ಬೀರುವ ಪರಿಣಾಮಗಳೇನು?

ಡೌನ್‌ ರಾಂಪ್ ಕಾರ್ಯ ಪೂರ್ಣ: ಉಕ್ಕಿನ ಮೇಲ್ಸೇತುವೆಯ ರೈಲ್ವೆ ಅಂಡ‌ರ್ ಪಾಸ್‌ ಬದಿಯಲ್ಲಿ ಡೌನ್‌ ರಾಂಪ್ ಕಾರ್ಯ ಮುಗಿದಿದೆ. ಕೆಲವರು ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯ, ವೈಜ್ಞಾನಿಕ ವರದಿ ನೀಡುವಂತೆ ಭಾರತೀಯ ವಿಜ್ಞಾನ ಸಂಸ್ಥೆಗೆ ಸೂಚಿಸಿತ್ತು. ಐಐಎಸ್‌ಸಿ ನೀಡಿದ ವರದಿಯಲ್ಲಿ ಪಾಲಿಕೆಯು ಮರು ಯೋಜಿಸಿದ ಡೌನ್‌ ರಾಂಪ್ ನಿರ್ಮಾಣ ಯೋಗ್ಯವಾಗಿದೆ ಎಂದು ತಿಳಿಸಲಾಗಿತ್ತು. ಹೀಗಾಗಿ, ಮೇಲ್ಸೇತುವೆ ಕಾಮಗಾರಿ ಮುಂದುವರೆಸಲು ಹೈಕೋರ್ಟ್ ವಿಭಾಗೀಯ ಪೀಠ ಒಪ್ಪಿಗೆ ನೀಡಿತ್ತು.

ಶೇ.90 ರಷ್ಟು ಫ್ಲೈ ಓವರ್ ನಿರ್ಮಾಣ ಕಾರ್ಯ ಪೂರ್ಣ: ಫ್ಲೈ ಓವರ್ ನಿರ್ಮಾಣ ಕಾರ್ಯ ಶೇ.90 ರಷ್ಟು ಪೂರ್ಣಗೊಂಡಿದೆ. ಶೇಷಾದ್ರಿಪುರ ಕಡೆಗೆ ಸಂಪರ್ಕಿಸುವ ಡೌನ್‌ ರಾಂಪ್ ಬಳಿ ರಾಜಕಾಲುವೆ ಅಭಿವೃದ್ಧಿ ಮತ್ತು ಇಳಿಜಾರು ರಸ್ತೆ ನಿರ್ಮಿಸಿ ಡಾಂಬರೀಕರಣ ಮಾಡುವುದು ಮಾತ್ರ ಬಾಕಿಯಿದೆ. ಕಾಮಗಾರಿ ಪೂರ್ಣಗೊಳಿಸಲು ಅಂದಾಜು 10 ದಿನಗಳು ಬೇಕಾಗುತ್ತದೆ. ಇದೇ ಆಗಸ್ಟ್ 30 ರಂದು ಎರಡು ಬದಿಯ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಲೋಕೇಶ್ ಹೇಳಿದ್ದಾರೆ.

ABOUT THE AUTHOR

...view details