ಕರ್ನಾಟಕ

karnataka

ETV Bharat / city

ರೋಡ್ ಶೋ ಮೂಲಕ ಶರತ್ ಬಚ್ಚೇಗೌಡ ವಿಜಯೋತ್ಸವ ಯಾತ್ರೆ - ಶರತ್ ಬಚ್ಚೇಗೌಡ ರೋಡ್ ಶೋ

ಹೊಸಕೋಟೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ವಿಧಾನಸೌಧದಲ್ಲಿ ಭಾನುವಾರ ಪ್ರಮಾಣವಚನ ಸ್ವೀಕರಿಸಿದ ಬಳಿಕ ಹೊಸಕೋಟೆ ಕ್ಷೇತ್ರದ ಪ್ರಮುಖ ನಗರಗಳಲ್ಲಿ ಮೆರವಣಿಗೆ ಮೂಲಕ ಸ್ವಾಭಿಮಾನಿ ವಿಜಯೋತ್ಸವ ಯಾತ್ರೆ ನಡೆಸಿದ್ರು.

Sharath Batchegowda
ಶರತ್ ಬಚ್ಚೇಗೌಡ

By

Published : Dec 23, 2019, 7:40 AM IST

ಹೊಸಕೋಟೆ: ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ವಿಧಾನಸೌಧದಲ್ಲಿ ಶಾಸಕರಾಗಿ ಆಗಿ ಭಾನುವಾರ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಹೊಸಕೋಟೆ ಕ್ಷೇತ್ರದ ಪ್ರಮುಖ ನಗರಗಳಲ್ಲಿ ಮೆರವಣಿಗೆ ಮೂಲಕ ಸ್ವಾಭಿಮಾನಿ ವಿಜಯೋತ್ಸವ ಯಾತ್ರೆ ನಡೆಸಿದರು.

ಶಾಸಕ ಶರತ್ ಬಚ್ಚೇಗೌಡ ರೋಡ್ ಶೋ

ಹೊಸಕೋಟೆ ಟೌನ್​ನ ಅಯ್ಯಪ್ಪ ದೇವಸ್ಥಾನದಿಂದ ಆರಂಭವಾಗಿದ್ದ ಮೆರವಣಿಗೆ ಮುಖ್ಯರಸ್ತೆಗಳಲ್ಲಿ ಸಾಗಿತು. ಶರತ್​ಗೆ ಅಭಿಮಾನಿಗಳು ಹೂಮಳೆ ಸುರಿಸಿ, ಬೆಳ್ಳಿ ಗದೆ ನೀಡಿದ್ರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿದ್ದಕ್ಕೆ ಕ್ಷೇತ್ರದ ಜನತೆಗೆ ಧನ್ಯವಾದ. ಈಗ ಎಂಎಲ್​ಎ ಆಗಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ಮಾದರಿ ಕ್ಷೇತ್ರ ಮಾಡುವ ಆಸೆ ಇದ್ದು, ಪಕ್ಷ ಭೇದ ಮರೆತು ಕೆಲಸ ಮಾಡುತ್ತೇನೆ. ಮುಖ್ಯಮಂತ್ರಿ ಅವರು ಘೋಷಿಸಿರುವ ಕಾರ್ಯಕ್ರಮ, ಯೋಜನೆಗಳನ್ನು ಜಾರಿಗೆ ತಂದು ಅಧಿಕಾರಿಗಳಿಂದ ಕಾರ್ಯ ಮಾಡಿಸುತ್ತೇನೆ ಎಂದರು.

ABOUT THE AUTHOR

...view details