ಕರ್ನಾಟಕ

karnataka

ETV Bharat / city

ಮಹಿಳಾ ಪೊಲೀಸ್ ಅಧಿಕಾರಿಯನ್ನು ಮಂಚಕ್ಕೆ ಕರೆದ ವ್ಯಕ್ತಿ ಅರೆಸ್ಟ್‌ - bangalore sexual harassment on lady psi accused arrested

ನಗರದ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ‌ ಮಹಿಳಾ ಪೊಲೀಸ್ ಸಬ್‌ ಇನ್ಸ್‌ಪೆಕ್ಟ್‌ರ್‌ ಅವರನ್ನು ಮಂಚಕ್ಕೆ ಕರೆದಿದ್ದ ಆರೋಪಿಯನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.

bangalore-sexual-harassment-on-lady-psi-accused-arrested
ರಾಮಕೃಷ್ಣ ಆಲಿಯಾಸ್ ಚೂಲ್ ರಾಮು

By

Published : Jan 16, 2020, 8:07 PM IST

ಬೆಂಗಳೂರು : ಮಹಿಳಾ‌ ಪಿಎಸ್ಐಯನ್ನೇ ಮಂಚಕ್ಕೆ ಕರೆದಿದ್ದ ಆರೋಪಿಯನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.

ಗೌರಿಬಿದರೂರಿನ ನಿವಾಸಿ ರಾಮಕೃಷ್ಣ ಆಲಿಯಾಸ್ ರಾಮು ಬಂಧಿತ ಆರೋಪಿ.

ಈತನಿಗೆ ನಗರದಲ್ಲಿ‌ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಪುಟ್ಟಮ್ಮ‌ ಎಂಬಾಕೆಯೊಂದಿಗೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಠಾಣೆಯೊಂದರ ಮಹಿಳಾ ಪಿಎಸ್‌ಐ ಹೆಚ್ಚುವರಿ ಕೆಲಸ ನೀಡುತ್ತಿದ್ದರಿಂದ ಅಸಮಾನಧಾನಗೊಂಡಿದ್ದ ಪುಟ್ಟಮ್ಮ, ಈ ವಿಷಯವನ್ನು ಆರೋಪಿ ರಾಮಕೃಷ್ಣ ಬಳಿ‌ ಹೇಳಿಕೊಂಡಿದ್ದಳು. ಇದಕ್ಕೆ ಅಕ್ರೋಶಗೊಂಡ ಪುಟ್ಟಮ್ಮ ಹೆಸರಿನ ಫೋನ್‌ ನಂಬರ್ ನಿಂದಲೇ ಪಿಎಸ್ಐಗೆ ಜ. 7 ರಂದು ಕರೆ ಮಾಡಿ ಲಾಡ್ಜ್‌ಗೆ ಬರ್ತಿರಾ? ಹಣ ಎಷ್ಟಾದರೂ ಪರವಾಗಿಲ್ಲ ಎಂದು ಆಹ್ವಾನಿಸಿದ್ದನಂತೆ!

ನೀವೂ ಯಾರು ಯಾರು ಅಂತಾ ನನಗೆ ಗೊತ್ತು. ನಿಮಗೆ ಗಂಡ ಇಲ್ಲ ಎಂಬ ವಿಚಾರವೂ ನನಗೆ ಗೊತ್ತು. ನಿಮ್ಮ ಬಗ್ಗೆ ಹೋಮ್ ಗಾರ್ಡ್ ಪುಟ್ಟಮ್ಮ ಎಲ್ಲವನ್ನೂ ಹೇಳಿದ್ದಾಳೆ‌. ನಾನು ಕರೆದಲ್ಲಿ ಬರದೇ ಹೋದರೆ ಮಾನ ಹರಾಜು ಹಾಕುವೆ‌ ಎಂದು ಧಮಕಿ ಹಾಕಿ‌‌ ಆಶ್ಲೀಲ ಚಿತ್ರಗಳನ್ನು ಕಳುಹಿಸಿದ್ದ ಎನ್ನಲಾಗಿದೆ. ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಅರೋಪಿಯನ್ನು ಬಂಧಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details