ಯಲಹಂಕ(ಬೆಂಗಳೂರು): 5 ವರ್ಷದ ಪುಟ್ಟ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ 22 ವರ್ಷದ ಯುವಕನನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಪುಟ್ಟ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕ ಅರೆಸ್ಟ್ - ಲೈಂಗಿಕ ಕಿರುಕುಳ
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿರುವ ಹಿನ್ನೆಲೆಯಲ್ಲಿ ರುದ್ರೇಶ್ ನಾಯಕ್ ಎಂಬಾತನನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಜಾಲ ಪೊಲೀಸ್ ಠಾಣೆ
ರುದ್ರೇಶ್ ನಾಯಕ್ ಬಂಧಿತ ಆರೋಪಿ. ಈತ ಕಳೆದೊಂದು ತಿಂಗಳಿನಿಂದ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು ಬಾಲಕಿ ಕಿರುಕುಳದ ಬಗ್ಗೆ ಪೋಷಕರಿಗೆ ತಿಳಿಸಿದ್ದಳು. ಅಲ್ಲದೇ ಇದನ್ನು ಪ್ರಶ್ನಿಸಲು ಹೋದ ಬಾಲಕಿಯ ಪೋಷಕರ ಮೇಲೆ ಆರೋಪಿಯ ಮನೆಯವರು ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿದ್ದರು. ಹಲ್ಲೆ ಮತ್ತು ಲೈಂಗಿಕ ಕಿರುಕುಳದಿಂದ ಕಂಗಾಲಾಗಿದ್ದ, ಬಾಲಕಿಯ ಪೋಷಕರು ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.