ಕರ್ನಾಟಕ

karnataka

ETV Bharat / city

ಮೋದಿ ಸರ್ಕಾರಕ್ಕೆ ಏಳು ವರ್ಷ: ಸಿಎಂ ಸೇರಿ ಬಿಜೆಪಿ ನಾಯಕರಿಂದ ರಾಜ್ಯಾದ್ಯಂತ ಸೇವಾ ಕಾರ್ಯಕ್ರಮ - ಬೆಂಗಳೂರು

ಮೋದಿ ಸರ್ಕಾರ 7 ವರ್ಷ ಪೂರೈಕೆ ಮಾಡಿದ ಹಿನ್ನೆಲೆ ಸಿಎಂ ಯಡಿಯೂರಪ್ಪ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಪೌರಕಾರ್ಮಿಕರಿಗೆ ಫುಟ್ ಕಿಟ್ ವಿತರಣೆ ಮಾಡಿದರು. ಅದೇ ರೀತಿ ಬಿಜೆಪಿ ವಿವಿಧ ನಾಯಕರು, ಸಚಿವರು ಬಡ ಜನರಿಗೆ ಆಹಾರ ಕಿಟ್ ನೀಡುವ ಮೂಲಕ ಜನಸೇವೆ ಕಾರ್ಯಕ್ರಮ ಕೈಗೊಂಡರು..

  Seven years completed for Modi government
Seven years completed for Modi government

By

Published : May 30, 2021, 6:59 PM IST

Updated : May 30, 2021, 9:12 PM IST

ಬೆಂಗಳೂರು: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಟ್ಟು ಏಳು ವರ್ಷ ಪೂರೈಸಿರುವ ಹಿನ್ನೆಲೆ ರಾಜ್ಯ ಬಿಜೆಪಿ ನಾಯಕರು ಸೇವೆಯೇ ಸಂಘಟನೆ ಘೋಷ ವಾಕ್ಯದೊಂದಿಗೆ ರಾಜ್ಯಾದ್ಯಂತ ಸೇವಾ ಚಟುವಟಿಕೆ ನಡೆಸಿದರು.

ರಾಜ್ಯದ 58 ಸಾವಿರ ಬೂತ್‍ಗಳಲ್ಲಿ 29 ಸಾವಿರ ಹಳ್ಳಿಗಳಲ್ಲೂ ಕೋವಿಡ್ ನಿಯಮ ಅನುಸರಿಸಿ ಬಿಜೆಪಿ ನಾಯಕರು, ಕಾರ್ಯಕರ್ತರು ಸೇವಾ ಚಟುವಟಿಕೆ ಕೈಗೊಂಡರು.

ಸಿಎಂ ಯಡಿಯೂರಪ್ಪ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಪೌರಕಾರ್ಮಿಕರಿಗೆ ಫುಡ್‌ ಕಿಟ್ ವಿತರಣೆ ಮಾಡಿದರು. ಅದೇ ರೀತಿ ಬಿಜೆಪಿ ವಿವಿಧ ನಾಯಕರು, ಸಚಿವರು ಬಡವರಿಗೆ ಆಹಾರದ ಕಿಟ್ ನೀಡುವ ಮೂಲಕ ಜನಸೇವೆ ಕಾರ್ಯಕ್ರಮ ಕೈಗೊಂಡರು.

ಗೃಹ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ, ಯಲಹಂಕದಲ್ಲಿ ಶಾಸಕ ಎಸ್. ಆರ್.ವಿಶ್ವನಾಥ್ ಅವರೊಂದಿಗೆ ಕೋವಿಡ್ ಸೇವಾ ದಿವಸ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು ಹಾಗೂ ಕೋವಿಡ್ ವಾರಿಯರ್​​​​ಗಳಿಗೆ ಆಹಾರದ ಕಿಟ್‌ಗಳನ್ನು ವಿತರಿಸಿದರು.

ಸಿಎಂ ಸೇರಿ ಬಿಜೆಪಿ ನಾಯಕರಿಂದ ರಾಜ್ಯಾದ್ಯಂತ ಸೇವಾ ಕಾರ್ಯಕ್ರಮ

ಸೇವೆಯೇ ಸಂಘಟನೆ ಕಾರ್ಯಕ್ರಮದಡಿ ರಾಜ್ಯ ಬಿಜೆಪಿ ಒಂದು ಕೋಟಿಗೂ ಹೆಚ್ಚು ಬಡ ಜನರಿಗೆ ಸಹಾಯ ಮಾಡಲು ಉದ್ದೇಶಿಸಿದೆ. ಅದರ ಅಂಗವಾಗಿ ಅಕ್ಕಿ ಕೊಡುವುದು, ಪಡಿತರ ವಿತರಣೆ, ವಿದ್ಯಾರ್ಥಿಗಳ ಶುಲ್ಕ ಕಟ್ಟುವುದು ಸೇರಿದಂತೆ ರಾಜ್ಯದಾದ್ಯಂತ 25 ಲಕ್ಷ ಕಾರ್ಯಕರ್ತರು ಸೇವಾ ಚಟುವಟಿಕೆಯನ್ನು “ಸೇವಾ ಹೀ ಸಂಘಟನ್” ಹೆಸರಿನಲ್ಲಿ ಕೈಗೊಂಡಿದ್ದಾರೆ.

ಈ ಸಂಬಂಧ ಸಿಎಂ, ರಾಜ್ಯಾಧ್ಯಕ್ಷರು, ಸಚಿವರು, ವಿವಿಧ ಹಂತದ ಜನಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

Last Updated : May 30, 2021, 9:12 PM IST

ABOUT THE AUTHOR

...view details