ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿರೋ ಸಿನಿಮಾ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ'. ಈ ಸಿನಿಮಾದ ಬಿಡುಗಡೆ ದಿನಾಂಕ ಅನೌಂಸ್ ಆಗಿದೆ.
ಹಾಸ್ಯಮಯ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಪತ್ರಕರ್ತ ವಿನಾಯಕ ಕೋಡ್ಸರ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದೇ ಏಪ್ರಿಲ್ 29ರಂದು ಚಿತ್ರ ಬಿಡುಗಡೆ ಆಗುತ್ತಿದೆ. ತಿಂಗಳ ಕೊನೆಯಲ್ಲಿ ಅಕೌಂಟ್ನಲ್ಲಿ ಹಣ ಇಲ್ಲದೇ ಇದ್ರೆ ಏನಾಗುತ್ತೆ ಎಂಬುದರ ಕಥೆ ಇದು ಎಂದು ತಂಡ ಮಾಹಿತಿ ಹಂಚಿಕೊಂಡಿದೆ.
ದಿಗಂತ್ಗೆ ಇಬ್ಬರು ನಾಯಕಿಯರು. ಒಬ್ಬರು ಐಂದ್ರಿತಾ ರೇ ಮತ್ತೊಬ್ಬರು ರಂಜನಿ ರಾಘವನ್. ರಂಜನಿ ಮಾತನಾಡಿ, ಸಿನಿಮಾ ಡಬ್ಬಿಂಗ್ ಮಾಡಬೇಕಾದ್ರೆ ಸಖತ್ ಎಂಜಾಯ್ ಮಾಡಿದ್ದೀನಿ. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಎಂದರು. ಅಡಿಕೆ ಬೆಳೆಯುವ ರೈತನಾಗಿ ಕಾಣಿಸಿಕೊಂಡಿರುವ, ದೂದ್ ಪೇಡ ದಿಗಂತ್ ಈ ಸಿನಿಮಾದಲ್ಲಿ ಮಲೆನಾಡಿನ ಒಂದು ಹಳ್ಳಿಯ ಅಡಿಕೆ ರೈತನ ಕಥೆ ಇದೆ. ಕಡಿಮೆ ಬಜೆಟ್ನಲ್ಲಿ ನಿರ್ಮಾಣ ಆಗಿರುವ ಚಿತ್ರ, ನಿಜಕ್ಕೂ ಈ ಸಿನಿಮಾ ಬಿಡುಗಡೆ ಆದ್ಮೇಲೆ ಎಲ್ಲರಿಗೂ ಇಷ್ಟ ಆಗುತ್ತೆ ಎಂದರು.
ಸುಮಾರು ಏಳು ವರ್ಷಗಳ ನಂತರ ದಿಗಂತ್ ಜೊತೆ ಸ್ಕ್ರೀನ್ ಹಂಚಿಕೊಳ್ಳುತ್ತಿರುವ ಐಂದ್ರಿತಾ ರೇ, ಈ ಚಿತ್ರದಲ್ಲಿ ಪದ್ಮ ಎಂಬ ವಕೀಲೆ ಪಾತ್ರ ಮಾಡಿದ್ದೀನಿ, ಸಿನಿಮಾ ಬಹಳ ಚೆನ್ನಾಗಿ ಬಂದಿದೆ ಎಂದರು.
ಹಿರಿಯ ನಟಿ ಉಮಾಶ್ರೀ, ಪಿ.ಡಿ.ಸತೀಶ್ ಚಂದ್ರ, ಪ್ರಕಾಶ್ ತುಮ್ಮಿನಾಡ್ ಹಾಗೂ ನೀನಾಸಂನ ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ. ಸಾಗರ, ಸಿಗಂಧೂರು, ಬೆಂಗಳೂರಿನ ಪರಿಸರದಲ್ಲಿ ಚಿತ್ರೀಕರಣ ಆಗಿರುವ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಚಿತ್ರಕ್ಕೆ ಬೆಂಗಳೂರಿನ ಖ್ಯಾತ ಸ್ಟುಡಿಯೋದಲ್ಲಿ ಹಿನ್ನೆಲೆ ಸಂಗೀತ ಅಳವಡಿಸಲಾಗುತ್ತಿದೆ.
ಪ್ರಜ್ವಲ್ ಪೈ ಸಂಗೀತ ನೀಡಿದ್ದಾರೆ. ರವೀಂದ್ರ ಜೋಶಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಂದ ಕಿಶೋರ್ ಎನ್.ರಾವ್ ಛಾಯಾಗ್ರಹಣ ಹಾಗೂ ರಾಹುಲ್ ವಸಿಷ್ಠ ಅವರ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ವಿಶ್ವಜಿತ್ ರಾವ್ ಹಾಗೂ ತ್ರಿಲೋಕ್ ತ್ರಿವಿಕ್ರಂ ರಚಿಸಿದ್ದಾರೆ. ವೇಣು ಹಸ್ರಾಳಿ ಅವರ ಚಿತ್ರಕಥೆ ಹಾಗೂ ಸಂಭಾಷಣೆ ಇರುವ ಈ ಸಿನಿಮಾಗೆ ಉಪ್ಪಿ ಎಂಟರ್ಟೈನರ್ ಲಾಂಛನದಲ್ಲಿ ಸಿಲ್ಕ್ ಮಂಜು ಹಣ ಹೂಡಿದ್ದಾರೆ. ದಿಗಂತ್ ಅಡಿಕೆ ಬೆಳೆಗಾರನಾಗಿ ಪ್ರೇಕ್ಷಕರಿಗೆ ಎಷ್ಟು ಇಷ್ಟ ಆಗ್ತಾರೆ ಅನ್ನೋದು ಈ ತಿಂಗಳು 29ರಂದು ಗೊತ್ತಾಗಲಿದೆ.
ಇದನ್ನೂ ಓದಿ:'ಕಾಲಾಪತ್ಥರ್'ನಿಂದ ನಿರ್ದೇಶಕನ ಕ್ಯಾಪ್ ತೊಟ್ಟ ಕೆಂಡ ಸಂಪಿಗೆ ಹುಡುಗ