ಕರ್ನಾಟಕ

karnataka

ETV Bharat / city

ಬೆಂಗಳೂರಿನ ಸೀಲ್​ಡೌನ್​ ವಾರ್ಡ್​ಗಳಲ್ಲಿ ಏಳು ಪಾಸಿಟಿವ್​​ ಕೇಸ್​: ಮೇಯರ್​ - ಮೇಯರ್ ಗೌತಮ್ ಕುಮಾರ್

ಸೀಲ್​ಡೌನ್​ ವಾರ್ಡ್​ಗಳಲ್ಲಿ ಏಳು ಪಾಸಿಟಿವ್ ಕೇಸ್​ಗಳು ಸಿಕ್ಕಿವೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.

Seven Positive Cases in Seal Down Wards: Mayor Gautam Kumar
ಸೀಲ್​ಡೌನ್​ ವಾರ್ಡ್​ಗಳಲ್ಲಿ ಏಳು ಪಾಸಿಟಿವ್ ಕೇಸ್​:ಮೇಯರ್ ಗೌತಮ್ ಕುಮಾರ್

By

Published : Apr 11, 2020, 9:37 PM IST

Updated : Apr 11, 2020, 10:04 PM IST

ಬೆಂಗಳೂರು:ನಿನ್ನೆಯಿಂದ ಸೀಲ್​ಡೌನ್ ಆಗಿರುವ ಚಾಮರಾಜಪೇಟೆ ಕ್ಷೇತ್ರದ ಪಾದರಾಯನಪುರ ಹಾಗೂ ಬಾಪೂಜಿನಗರ ವಾರ್ಡ್​ಗೆ ಮೇಯರ್ ಗೌತಮ್ ಕುಮಾರ್ ಹಾಗೂ ಶಾಸಕ ಜಮೀರ್ ಅಹ್ಮದ್ ತಂಡ ಭೇಟಿ ನೀಡಿ, ವಾರ್ಡ್​ನ ಜನರ ಸ್ಥಿತಿಗತಿ ಪರಿಶೀಲಿಸಿದರು.

ಸೀಲ್​ಡೌನ್​ ವಾರ್ಡ್​ಗಳಲ್ಲಿ ಏಳು ಪಾಸಿಟಿವ್ ಕೇಸ್​: ಮೇಯರ್ ಗೌತಮ್ ಕುಮಾರ್

ಬಳಿಕ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಯಾವುದೇ ಮನೆಯನ್ನ ಸೀಲ್ ಮಾಡಿಲ್ಲ. ಒಂದು ಪ್ರದೇಶವನ್ನು ಸೂಕ್ಷ್ಮವಾಗಿ ಗಮನಿಸಿ, ಯಾರೂ ಹೊರಗೆ ಬರದಂತೆ ನೋಡಿಕೊಳ್ಳಲಾಗುತ್ತಿದೆ ಅಷ್ಟೆ. ಸೀಲ್​ಡೌನ್​ ವಾರ್ಡ್​ಗಳಲ್ಲಿ ಏಳು ಪಾಸಿಟಿವ್ ಕೇಸ್​ಗಳು ಸಿಕ್ಕಿವೆ. ಹಾಗಾಗಿ ಬೇರೆ ಕಡೆಗೆ ಸೋಂಕು ಸ್ಪ್ರೆಡ್ ಆಗಬಾರದು. ಅದಕ್ಕಾಗಿ ಸಂಪೂರ್ಣ ಲಾಕ್​ಡೌನ್ ಹೇರಲಾಗಿದೆ. ಪ್ರತಿ ಮನೆಗೂ ವೈದ್ಯರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ ಎಂದರು.

ಸ್ಥಳೀಯ ಕಾರ್ಪೋರೇಟರ್ ಇಮ್ರಾನ್ ಪಾಷಾ ಮಾತನಾಡಿ, ಸೀಲ್​ಡೌನ್​ನಿಂದ ಜನ ಪ್ಯಾನಿಕ್ ಆಗಿ ಬೆಳಗ್ಗೆ ಎಲ್ಲರೂ ದಿನಸಿ, ಹಾಲು ಕೊಳ್ಳಲು ಹೊರಗೆ ಬಂದ್ರು. ಹಂತ ಹಂತವಾಗಿ ಎಲ್ಲವೂ ಸರಿ ಹೋಗಲಿದೆ ಎಂದರು. ಇನ್ನು, ಬಾಪೂಜಿನಗರದ ಹೊಸಗುಡದಹಳ್ಳಿಗೆ ಬಿಬಿಎಂಪಿ ದಕ್ಷಿಣ ಜಂಟಿ ಆಯುಕ್ತ ವೀರಭದ್ರಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು‌.

ಬಳಿಕ ಮಾತನಾಡಿದ ಬಿಬಿಎಂಪಿ ದಕ್ಷಿಣ ಜಂಟಿ ಆಯುಕ್ತ ವೀರಭದ್ರಸ್ವಾಮಿ, ಬಾಪೂಜಿನಗರದಲ್ಲಿ ಎರಡು ಪಾಸಿಟಿವ್ ಕೇಸ್ ದಾಖಲಾಗಿದೆ. ಗಂಡ-ಹೆಂಡತಿ ಗುಜರಾತ್​ನಿಂದ ಡೆಲ್ಲಿಗೆ ಹೋಗಿ ಬಂದಿದ್ರು. ಅವರಿಗೆ ಯಾವುದೇ ಲಕ್ಷಣಗಳು ಕಾಣಿಸಿರಲಿಲ್ಲ. ಆದ್ರೆ ಅವರನ್ನ ಚೆಕ್ ಮಾಡಿದಾಗ ಪಾಸಿಟಿವ್ ಬಂದಿದೆ. ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನ ಸರ್ಬವಾಲ ರೆಸಿಡೆನ್ಸಿಗೆ ಶಿಫ್ಟ್ ಮಾಡಲಾಗಿದೆ. ಈಗಾಗಲೇ ಅವರನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. ಬಿಎಂಎಸ್ ಹಾಗೂ ಕಿಮ್ಸ್​​ನಿಂದ​ ಮೂವತ್ತು ಟೀಂ ಕರೆಸಲಾಗಿದೆ ಎಂದರು.

Last Updated : Apr 11, 2020, 10:04 PM IST

ABOUT THE AUTHOR

...view details