ಕರ್ನಾಟಕ

karnataka

ನಮ್ಮ ಮೆಟ್ರೋ ಸಿಬ್ಬಂದಿಗೂ ಕೊರೊನಾ ಸೋಂಕು ದೃಢ!

By

Published : Jan 12, 2022, 5:15 PM IST

ನಮ್ಮ ಮೆಟ್ರೋದ 7 ಮಂದಿ ಸಿಬ್ಬಂದಿಗೆ ಕೋವಿಡ್​ ತಗುಲಿರುವುದು ದೃಢಪಟ್ಟಿದೆ. ಮೆಟ್ರೋದ 900 ಸಿಬ್ಬಂದಿಗೂ ಕೋವಿಡ್​ ಟೆಸ್ಟ್ ನಡೆಸಲಾಗುತ್ತಿದೆ.

seven namma metro staffs tested covid positive
ನಮ್ಮ ಮೆಟ್ರೋ ಸಿಬ್ಬಂದಿಗೆ ಸೋಂಕು

ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕು ಅತಿ ವೇಗವಾಗಿ ಹಬ್ಬುತ್ತಿದೆ. ಈಗಾಗಲೇ ಸಾಕಷ್ಟು ಸಂಖ್ಯೆಯ ಪೊಲೀಸರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಇದೀಗ ನಮ್ಮ ಮೆಟ್ರೋ ಸಂಸ್ಥೆಯಲ್ಲೂ ಕೋವಿಡ್ ಅಬ್ಬರ ಶುರುವಾಗಿದೆ. ನಮ್ಮ ಮೆಟ್ರೋದ 7 ಮಂದಿ ಸಿಬ್ಬಂದಿಗೆ ಕೋವಿಡ್​ ಪಾಸಿಟಿವ್ ವರದಿ ಬಂದಿದೆ ಎಂದು ಬಿ.ಎಂ.ಆರ್.ಸಿ.ಎಲ್ ತಿಳಿಸಿದೆ.

ರಾಜಧಾನಿಯ ಶಾಂತಿ ನಗರದಲ್ಲಿನ ಕೇಂದ್ರ ಕಚೇರಿಯ ಸಿಬ್ಬಂದಿ ಸೇರಿ 7 ಜನರಿಗೆ ಕೊರೊನಾ ತಗುಲಿದೆ. ಬಿಬಿಎಂಪಿ ವತಿಯಿಂದ ಮೆಟ್ರೋ ಸಿಬ್ಬಂದಿಗೆ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ನಡೆಸಲಾಗಿತ್ತು ಎಂದು ವ್ಯವಸ್ಥಾಪಕ ನಿರ್ದೇಶಕರಾದ ಅಂಜುಂ ಪರ್ವೇಜ್ ಮಾಹಿತಿ ನೀಡಿದ್ದಾರೆ.

ಕೇಂದ್ರ ಕಚೇರಿಯಡಿಯಲ್ಲಿ ಬರುವ 900 ಸಿಬ್ಬಂದಿಗೂ ಕೋವಿಡ್​ ಪರೀಕ್ಷೆ ಮಾಡಲಾಗುತ್ತಿದೆ. ಸದ್ಯ 7 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಗಂಭೀರ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಲೋಕೋ ಪೈಲಟ್, ನಿಲ್ದಾಣದ ಅಧಿಕಾರಿಗಳಿಗೆ ಸೋಂಕು ತಾಗಿಲ್ಲ ಎಂದು ಅಂಜುಂ ಪರ್ವೇಜ್ ಸ್ಪಷ್ಟಪಡಿಸಿದ್ದಾರೆ.

ಹೊಸ ನಿಯಮಗಳೇನು?

ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ನಿಯಂತ್ರಣದ ಸಲುವಾಗಿ ಸರ್ಕಾರ ನಿನ್ನೆಯಷ್ಟೇ ಹೊಸ ಮಾರ್ಗಸೂಚಿ ಹೊರಡಿಸಿದೆ. ಆ ಪ್ರಕಾರ, ನಮ್ಮ ಮೆಟ್ರೋ ಓಡಾಟದ ರೈಲುಗಳಲ್ಲಿ ಲಭ್ಯವಿರುವ ಆಸನದ ಸಾಮರ್ಥ್ಯದಷ್ಟೇ ಜನರು ಹತ್ತಬೇಕು. ನಿಂತುಕೊಂಡು ಹೋಗಲು ಅವಕಾಶ ಇರುವುದಿಲ್ಲ. ಸರ್ಕಾರವು ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಲು ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ಇದನ್ನು ಜಾರಿಗೊಳಿಸಲಾಗುತ್ತಿದೆ ಎಂದು ಪ್ರಕಟಣೆ ಹೊರಡಿಸಲಾಗಿದೆ. ವಾರಾಂತ್ಯದ ಕರ್ಫ್ಯೂ ಕಾರಣದಿಂದಾಗಿ ಶನಿವಾರ ಮತ್ತು ಭಾನುವಾರದಂದು 20 ನಿಮಿಷದ ಬದಲಿಗೆ 30 ನಿಮಿಷಗಳ ಅಂತರದಲ್ಲಿ ಕಡಿಮೆ ರೈಲುಗಳು ಸಂಚರಿಸಲಿವೆ.

ಇದನ್ನೂ ಓದಿ:ನಮ್ಮ ಮೆಟ್ರೋದಲ್ಲೂ ತಿಂಗಳ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ಸಿದ್ಧತೆ

ABOUT THE AUTHOR

...view details