ಬೆಂಗಳೂರು: ಹಿರಿಯ ಪತ್ರಕರ್ತ ಮತ್ತು ಸಂಜೆ ದಿನ ಪತ್ರಿಕೆಯೊಂದರ ಸಂಪಾದಕರಾಗಿದ್ದ ವಿ.ನಾಗರಾಜು (71) ಕೊರೊನಾದಿಂದ ಅಸುನೀಗಿದ್ದಾರೆ.
ಕೊರೊನಾಗೆ ಹಿರಿಯ ಪತ್ರಕರ್ತ ವಿ.ನಾಗರಾಜು ಬಲಿ - ಕೊರೊನಾಗೆ ಪತ್ರಕರ್ತ ಬಲಿ
ಕೊರೊನಾಗೆ ಹಿರಿಯ ಪತ್ರಕರ್ತ ವಿ.ನಾಗರಾಜು (71) ಬಲಿಯಾಗಿದ್ದಾರೆ. ಪತ್ರಿಕಾ ಸೇವೆಯ ಜೊತೆ ಸಮಾಜ ಸೇವೆಯಲ್ಲೂ ಇವರು ತಮ್ಮನ್ನು ತೊಡಗಿಸಿಕೊಂಡಿದ್ದರು.
![ಕೊರೊನಾಗೆ ಹಿರಿಯ ಪತ್ರಕರ್ತ ವಿ.ನಾಗರಾಜು ಬಲಿ ಕೊರೊನಾಗೆ ಹಿರಿಯ ಪತ್ರಕರ್ತ ವಿ.ನಾಗರಾಜು ಬಲಿ](https://etvbharatimages.akamaized.net/etvbharat/prod-images/768-512-11680593-thumbnail-3x2-jrnl.jpg)
ಕೊರೊನಾಗೆ ಹಿರಿಯ ಪತ್ರಕರ್ತ ವಿ.ನಾಗರಾಜು ಬಲಿಕೊರೊನಾಗೆ ಹಿರಿಯ ಪತ್ರಕರ್ತ ವಿ.ನಾಗರಾಜು ಬಲಿ
ಕೊರೊನಾದಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಿಸದೇ ಶುಕ್ರವಾರ ಮೃತಪಟ್ಟಿದ್ದಾರೆ.
ಇವರು 'ಇಂದು ಸಂಜೆ' ಸಂಜೆ ದಿನಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು. ಪತ್ರಿಕಾ ಸೇವೆಯೊಂದಿಗೆ, ಸಮಾಜ ಸೇವೆಯಲ್ಲೂ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.
ರಾಜ್ಯದಲ್ಲಿ 'ದಲಿತ ಚಳವಳಿ' ಕಟ್ಟುವುದಕ್ಕೆ ಮತ್ತು ಬೆಳೆಸುವುದಕ್ಕೆ ಅಪಾರವಾಗಿ ಶ್ರಮಿಸಿದ್ದ ಇವರು 'ಬಂಡಾಯ ಸಾಹಿತ್ಯ', 'ವೈಚಾರಿಕ ಸಾಹಿತ್ಯ' ಕುರಿತ ಹಲವು ಪ್ರಕಟಣೆಗಳನ್ನು ಹೊರತಂದಿದ್ದಾರೆ.
ಸಮಸ್ತ ಮಾಧ್ಯಮ ಬಳಗ ಹಿರಿಯ ಪತ್ರಕರ್ತ ನಾಗರಾಜು ಸಾವಿಗೆ ಕಂಬನಿ ಮಿಡಿದಿದೆ.(ಖ್ಯಾತ ಸುದ್ದಿವಾಹಿನಿ ಪತ್ರಕರ್ತ ರೋಹಿತ್ ಸರ್ದಾನಾ ನಿಧನ)