ಕರ್ನಾಟಕ

karnataka

ETV Bharat / city

ಹಿರಿಯ ಕಲಾವಿದ ಕೃಷ್ಣ ನಾಡಿಗ್ ಇನ್ನಿಲ್ಲ

ನಾಡಿಗರು ಸುಮಾರು 50 ವರ್ಷಗಳಷ್ಟು ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದು, 60 ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ, ಚಿತ್ರಕತೆ ಬರೆದು ನಿರ್ಮಾಣ ನಿರ್ವಹಿಸಿದ್ದರು. ಅಷ್ಟೇ ಅಲ್ಲ ಖಾಸಗಿ ಸುದ್ದಿ ವಾಹಿನಿಯಲ್ಲಿ ಕರ್ನಾಟಕದ ಸಾಂಸ್ಕೃತಿಕ ಜಗತ್ತನ್ನು ಪರಿಚಯಿಸುತ್ತಿದ್ದರು.

Krishna Nadig
ಕೃಷ್ಣ ನಾಡಿಗ್

By

Published : Oct 18, 2020, 10:42 AM IST

ಬೆಂಗಳೂರು: ಕನ್ನಡ ಚಿತ್ರಂಗ ಮತ್ತು ಕಿರುತೆರೆ ಕಲಾವಿದ ಕೃಷ್ಣ ನಾಡಿಗ್ ಅವರು ಶನಿವಾರ ರಾತ್ರಿ ನಿಧನರಾಗಿದ್ದಾರೆ.

ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಲೇಖಕರಾಗಿ, ವ್ಯವಸ್ಥಪಕರಾಗಿ ನಟರಾಗಿದ್ದ ಕೃಷ್ಣ ನಾಡಿಗ್ ಅವರು ಶನಿವಾರ ಚಿತ್ರೀಕರಣದಲ್ಲಿ ತೊಡಗಿದ್ದ ವೇಳೆ ಎದೆನೋವು ಕಾಣಿಸಿಕೊಂಡಿತ್ತು. ನಂತರ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಸುಮಾರು 50 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಅವರು, 60 ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ, ಚಿತ್ರಕತೆ ಬರೆದು ನಿರ್ಮಾಣ ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲ ಖಾಸಗಿ ಸುದ್ದಿ ವಾಹಿನಿಯಲ್ಲಿ ಕರ್ನಾಟಕದ ಸಾಂಸ್ಕೃತಿಕ ಜಗತ್ತನ್ನು ಪರಿಚಯಿಸುತ್ತಿದ್ದರು. ಜೊತಗೆ ಕನ್ನಡದ ಹಲವು ಧಾರಾವಾಹಿಗಳಲ್ಲಿ ಕೃಷ್ಣಮೂರ್ತಿ ನಾಡಿಗ ನಟಿಸಿದ್ದರು. ಇತ್ತೀಚೆಗೆ ಇವಳು ಸುಜಾತ ಧಾರಾವಾಹಿಯಲ್ಲೂ ನಟಿಸಿದ್ದರು. ಇಂದು ಚಾಮರಾಜಪೇಟೆಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

'ಬೆಸ್ಟ್ ಆಕ್ಟರ್' ಕಿರುಚಿತ್ರದಲ್ಲಿ ನಟಿಸುವಾಗ ನಿಮ್ಮ ಜೊತೆ ಕಳೆದ ಅರ್ಧ ದಿನ ಈಗಲೂ ಸ್ಮೃತಿಪಟಲದಲ್ಲಿ ಅಚ್ಚೊತ್ತಿದೆ. ನಿಮ್ಮ ಪ್ರೌಢಿಮೆ, ಜ್ಞಾನಭಂಡಾರ, ಅಪರಿಮಿತ ತಾಳ್ಮೆ, ನಿಮಗಿಂತ ಕಿರಿ ವಯಸ್ಸಿನವರನ್ನು ನೀವು ಗೌರವಿಸುತ್ತಿದ್ದ ಪರಿ, ಮನಸ್ಸು ನೀವು ಇನ್ನಿಲ್ಲ ಅನ್ನುವುದನ್ನು ಅರಗಿಸಿಕೊಳ್ಳುವುದೇ? ಹೋಗಿ ಬನ್ನಿ ಕೃಷ್ಣ ಅಡಿಗರೇ ಎಂದು ನಟ ಸಂಚಾರಿ ವಿಜಯ್ ವಿಷಾದ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details