ಬೆಂಗಳೂರು: ತುಮಕೂರು ಡಿಸಿಸಿ ಬ್ಯಾಂಕ್ ಅವ್ಯವಹಾರದಲ್ಲಿ ಭಾಗಿಯಾದವರನ್ನು ಜೈಲಿಗೆ ಕಳುಹಿಸಬೇಕು ಎಂದು ತುಮಕೂರು ಗ್ರಾಮಾಂತರ ಶಾಸಕ ಗೌರಿ ಶಂಕರ್ ಹೇಳಿದ್ದಾರೆ.
ಡಿಸಿಸಿ ಬ್ಯಾಂಕ್ ಅವ್ಯವಹಾರದಲ್ಲಿ ಭಾಗಿಯಾದವರನ್ನು ಜೈಲಿಗಟ್ಟಿ : ಗೌರಿ ಶಂಕರ್ - undefined
ಡಿಸಿಸಿ ಬ್ಯಾಂಕ್ ಅವ್ಯವಹಾರದಲ್ಲಿ ಭಾಗಿಯಾದವರನ್ನು ಜೈಲಿಗೆ ಕಳುಹಿಸಬೇಕು ಎಂದು ತುಮಕೂರು ಗ್ರಾಮಾಂತರ ಶಾಸಕ ಗೌರಿ ಶಂಕರ್ ಆಗ್ರಹಿಸಿದ್ದಾರೆ.
![ಡಿಸಿಸಿ ಬ್ಯಾಂಕ್ ಅವ್ಯವಹಾರದಲ್ಲಿ ಭಾಗಿಯಾದವರನ್ನು ಜೈಲಿಗಟ್ಟಿ : ಗೌರಿ ಶಂಕರ್](https://etvbharatimages.akamaized.net/etvbharat/prod-images/768-512-3905532-thumbnail-3x2-gouri.jpg)
ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ಬಳಿ ಮಾತನಾಡಿದ ಗೌರಿ ಶಂಕರ್, ಜೆಡಿಎಸ್ ದ್ವೇಷದ ರಾಜಕಾರಣ ಮಾಡುವುದಿಲ್ಲ. ದೇವೇಗೌಡರು ತಮ್ಮ ರಾಜಕೀಯ ಜೀವನದಲ್ಲಿ ಸೋಲು-ಗೆಲುವನ್ನು ನೋಡಿದ್ದಾರೆ. ಅವರ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲ. ದೇವೇಗೌಡರ ಜೊತೆಯಲ್ಲಿದ್ದವರೆ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಆದರೂ ದೇವೇಗೌಡರು ದ್ವೇಷದ ರಾಜಕಾರಣ ಮಾಡಲ್ಲ ಎಂದರು.
ತುಮಕೂರಿನ ರಾಜಕಾರಣಿಗಳು ಬೆಳಗ್ಗೆಯಾದ್ರೆ ದೇವೇಗೌಡರ ಹೆಸರು ಹೇಳತ್ತಾರೆ. ಕೆಲವು ನಾಯಕರಿಗೆ ದೇವೇಗೌಡರ ಹೆಸರು ಹೇಳಿಲ್ಲ ಅಂದ್ರೆ ನಿದ್ದೆ ಬರಲ್ಲ. ರಾಜಕೀಯಕ್ಕೂ ಬ್ಯಾಂಕ್ ಅವ್ಯವಹಾರಕ್ಕೂ ವ್ಯತ್ಯಾಸ ಇದೆ. ಇಂತಹ ಚೀಪ್ ಪಾಲಿಟಿಕ್ಸ್ ದೇವೇಗೌಡರು ಮಾಡಲ್ಲ. ಅವ್ಯವಹಾರದಲ್ಲಿ ಭಾಗಿಯಾದವರನ್ನು ಜೈಲಿಗೆ ಕಳುಹಿಸಬೇಕು. ಇದು ನನ್ನ ಬೇಡಿಕೆ ಅಲ್ಲ ಗ್ರಾಹಕರ ಬೇಡಿಕೆ ಎಂದು ಆಗ್ರಹಿಸಿದರು.