ಹೊಸಕೋಟೆ :ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್ ರಸ್ತೆಯ ಮಧ್ಯ ಕಾರು ನಿಲ್ಲಿಸಿ ಸೆಲ್ಫಿ ತೆಗೆದುಕೊಳ್ಳಲು (selfie crazy in fly over) ಹೋಗಿ ಇಬ್ಬರು ಮೃತ ಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ನಂದಗುಡಿ ಸಮೀಪ ಈ ಅಪಘಾತ ಸಂಭವಿಸಿದೆ.
ಕಳೆದ ರಾತ್ರಿ ಸುಮಾರು 1:30ರ ವೇಳೆ ಕೋಲಾರ ಬಳಿಯ ಕಾಫೀ ಡೇಗೆ ನಾಲ್ವರು ಸೇಹಿತರು ತೆರಳುತ್ತಿದ್ದರು. ತಾವರೆಕೆರೆ ರಾಷ್ಟ್ರಿಯ ಹೆದ್ದಾರಿ 75ರ ಫ್ಲೈ ಓವರ್ ಮೇಲೆ ಕಾರನ್ನು ರಸ್ತೆ ಮಧ್ಯೆ ನಿಲ್ಲಿಸಿ ಸೆಲ್ಫೀ ತೆಗೆದುಕೊಳ್ಳುತ್ತಿದ್ದರು.
ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿ (youths hit by canter and killed) ಹೊಡೆದಿದೆ. ಘಟನೆಯಲ್ಲಿ ಬೆಂಗಳೂರಿನ ವೈಟ್‌ಫೀಲ್ಡ್ ಮೂಲದ ದಿನೇಶ್ ( 27 ) ವಿನಯ್ ( 24 ) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಂಕಿತ್ ಎಂಬುವನು ಫ್ಲೈ ಓವರ್ ಮೇಲಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ದಿನೇಶ್ ಕಾಲ್ ಸೆಂಟರ್ನಲ್ಲಿ ವಿನಯ್ ಪೈಂಟರ್ ಕೆಲಸ ಮತ್ತು ಅಂಕಿತ್ ಕಾಲೇಜಿಗೆ ಹೊಗುತ್ತಿದ್ದ ಎನ್ನಲಾಗುತ್ತಿದೆ. ವೈಟ್ ಫೀಲ್ಡ್‌ನಿಂದ ಕೋಲಾರದವರೆಗೆ ಜಾಲಿ ರೈಡ್ ಮೂಲಕ ಕಾಫೀ ಡೇಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬೆಂಗಳೂರು ಗ್ರಾಮಾಂತರ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.