ಕರ್ನಾಟಕ

karnataka

ETV Bharat / city

ಬೆಂಗಳೂರು ವಿವಿ ಶಿಕ್ಷಕರ ಪರಿಷತ್ತಿಗೆ ಸರ್ವಾನುಮತದಿಂದ ಅಭ್ಯರ್ಥಿಗಳ ಆಯ್ಕೆ - Candidates Selection

ಬೆಂಗಳೂರು ವಿಶ್ವವಿದ್ಯಾಲಯದ ಶಿಕ್ಷಕರ ಪರಿಷತ್ ಚುನಾವಣಾ ಸ್ಪರ್ಧೆಯಲ್ಲಿ ಎರಡು ವರ್ಷಗಳ ಅವಧಿಗಳಿಗೆ ಈ ಕೆಳಕಂಡ ಅಭ್ಯರ್ಥಿಗಳನ್ನ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

Selection of Candidates for Bangaluru VV Teachers Council
ಬೆಂಗಳೂರು ವಿವಿ ಶಿಕ್ಷಕರ ಪರಿಷತ್ ಚುನಾವಣಾ ಸ್ಪರ್ಧೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳು

By

Published : Sep 26, 2020, 6:48 PM IST

ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದ ಶಿಕ್ಷಕರ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಹೊರತುಪಡಿಸಿ ಉಳಿದ ಎಲ್ಲ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಅಧ್ಯಕ್ಷ ಸ್ಥಾನದಲ್ಲಿ ಮೂರು ಜನ ಪ್ರಾಧ್ಯಾಪಕರು ಚುನಾವಣಾ ಸ್ಪರ್ಧೆಯಲ್ಲಿ ಭಾಗವಹಿಸಿ, ಆ ಮೂವರ ಪೈಕಿ ಗಣಕಶಾಸ್ತ್ರ ವಿಭಾಗದ ಪ್ರೊ. ಮುರುಳಿಧರ್ ಬಿ.ಎಲ್ ಅವರು ಅಧ್ಯಕ್ಷ ಸ್ಥಾನದಲ್ಲಿ ಸ್ಪರ್ಧಿಸಿ ಜಯಗಳಿಸಿದ್ದಾರೆ. ಉಪಾಧ್ಯಕ್ಷ ಸ್ಥಾನದಲ್ಲಿ ಮೂವರ ಪೈಕಿ, ಇತಿಹಾಸ ವಿಭಾಗದ ಪ್ರೊ. ನಾಗರತ್ನಮ್ಮ ಅವರು ಜಯಗಳಿಸಿದರು. ಈ ಎಲ್ಲ ಪದಾಧಿಕಾರಿಗಳು ಎರಡು ವರ್ಷಗಳ ಅವಧಿಗಳಿಗೆ ಆಯ್ಕೆಯಾಗಿದ್ದಾರೆ.

ಬೆಂಗಳೂರು ವಿವಿ ಶಿಕ್ಷಕರ ಪರಿಷತ್ತಿಗೆ ಅಭ್ಯರ್ಥಿಗಳ ಆಯ್ಕೆ

ಬೆಂಗಳೂರು ವಿಶ್ವವಿದ್ಯಾಲಯದ ಶಿಕ್ಷಕರ ಪರಿಷತ್ ಚುನಾವಣಾ ಸ್ಪರ್ಧೆಯಲ್ಲಿ ಈ ಕೆಳಕಂಡ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

  • ಕಾರ್ಯದರ್ಶಿ - ಶ್ರೀನಿವಾಸ್ ಸಿ (ಬಯೋಟೆಕ್ನಾಲಾಜಿ)
  • ಜಂಟಿ ಕಾರ್ಯದರ್ಶಿ - ಚಿತ್ತಯ್ಯ ಡಿ ಕೆ (ಕನ್ನಡ)
  • ಖಜಾಂಚಿ - ನಿರ್ಮಲ ಕೆ (ವಾಣಿಜ್ಯ)
    ಬೆಂಗಳೂರು ವಿವಿ ಶಿಕ್ಷಕರ ಪರಿಷತ್ ಚುನಾವಣಾ ಸ್ಪರ್ಧೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳು

ಕೆಳಕಂಡ 15 ಜನ ಬೋಧಕರು ಕಾರ್ಯಕಾರಿ ಸಮಿತಿಗೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

  • ಡಾ. ಸಮತಾ ದೇಶಮಾನೆ (ಸಮಾಜಶಾಸ್ತ್ರ)
  • ಡಾ. ಎನ್‌ಸತೀಶ್ ಗೌಡ (ಕಾನೂನು)
  • ಡಾ. ವಿಜಯಕುಮಾರ್ (ಭೌತಶಾಸ್ತ್ರ)
  • ಡಾ. ನರೇಂದ್ರ ಕುಮಾರ್ (ವಿದ್ಯುನ್ಮಾನ ಮತ್ತು ಸಂಪರ್ಕ)
  • ಡಾ. ಮಂಜೇಶ್ (ವಿದ್ಯುನ್ಮಾನ ವಿಜ್ಞಾನ)
  • ಡಾ. ಡೊಮಿನಿಕ್ ಡಿ (ಕನ್ನಡ)
  • ಡಾ.ಚಂದ್ರಕಾಂತ ಕರಿಗಾರ (ಜೀವರಸಾಯನಶಾಸ್ತ್ರ)
  • ಡಾ. ನಾಗಯ್ಯ ಎನ್ (ಭೌತ ಶಾಸ್ತ್ರ)
  • ಡಾ. ನಂದಿನಿ ಎನ್. (ಪರಿಸರವಿಜ್ಞಾನ)
  • ಡಾ.ಕೃಷ್ಣಸ್ವಾಮಿ ಪಿ.ಸಿ (ದೈಹಿಕ ಶಿಕ್ಷಣ)
  • ಡಾ. ಹೊನ್ನುಸಿದ್ಧಾರ್ಥ ಸಿ.ಬಿ , (ಕನ್ನಡ)
  • ಡಾ. ಚಿತ್ತಪ್ಪ ಹೆಚ್ ಸಿ (ಮೆಕ್ಯಾನಿಕಲ್ ಇಂಜಿನಿಯರಿಂಗ್)
  • ಡಾ. ಭವಾನಿಶಂಕರ್ (ಕಾಮಗಾರಿ)

ABOUT THE AUTHOR

...view details