ಬೆಂಗಳೂರು: ಸ್ಟಾರ್ ಹೋಟೆಲ್‌ಗಳ ಸೆಕ್ಯೂರಿಟಿ ಆಫೀಸರ್ ಗಳಿಗೆ ಐ.ಎಸ್.ಡಿ ಪೊಲೀಸರಿಂದ ಭದ್ರತಾ ಕಾರ್ಯಾಗಾರ ನಡೆಸಲಾಯಿತು. ಆಂತರಿಕ ಭದ್ರತಾ ವಿಭಾಗ ಪೊಲೀಸರಿಂದ ಶೆರ್ಟಾನ್ ಹೋಟೆಲ್‌ನಲ್ಲಿ ಕಾರ್ಯಗಾರ ನಡೆಸಲಾಯಿತು.
ಇನ್ನು ಕಾರ್ಯಾಗಾರದಲ್ಲಿ ಬೆಂಗಳೂರಿನ ಸ್ಟಾರ್ ಹೋಟೆಲ್ಸ್ ನ ಸೆಕ್ಯೂರಿಟಿ ಹೆಡ್ ಗಳು ಭಾಗಿಯಾಗಿದ್ದರು. ಕಾರ್ಯಾಗಾರದಲ್ಲಿ ಭಯೋತ್ಪಾದನಾ ಕೃತ್ಯಗಳ ನಿಷ್ಕ್ರೀಯದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಭಯೋತ್ಪಾದನಾ ಕೃತ್ಯಗಳ ವೇಳೆ ಸ್ಟಾರ್ ಹೋಟೆಲ್ಸ್ ನ ಹಾಸ್ಪಿಟಾಲಿಟಿ ಸಿಬ್ಬಂದಿ ಏನು ಮಾಡಬೇಕು, ಆಂತರಿಕ ಭದ್ರತೆ ಕಾಪಾಡಿಕೊಳ್ಳುವುದು ಹೇಗೆ ಅನ್ನುವುದರ ಬಗ್ಗೆ ಕಾರ್ಯಾಗಾರ ನಡೆಸಲಾಗುತ್ತಿದೆ.