ಕರ್ನಾಟಕ

karnataka

ETV Bharat / city

ಬೇಲಿಯೇ ಎದ್ದು ಹೊಲ ಮೇಯ್ದೆಡೆ.. ಮನೆ ಕಳ್ಳತನ ಗ್ಯಾಂಗ್​ಗೆ ಸೆಕ್ಯೂರಿಟಿ ಗಾರ್ಡ್ ಲೀಡರ್​... - ಮನೆಗಳ್ಳತನ ಆರೋಪದಲ್ಲಿ ನೇಪಾಳಿಗರ ಬಂಧನ

ತಾನೇ ಕಾವಲಿದ್ದ ಮನೆಗಳಲ್ಲಿ ತನ್ನ ಸಹಚರರನ್ನು ಕರೆಯಿಸಿ ಮನೆ ಕಳ್ಳತನ ಮಾಡಿಸುತ್ತಿದ್ದ ಕಿರಾತಕ ಭದ್ರತಾ ಸಿಬ್ಬಂದಿ ಮತ್ತು ನೇಪಾಳ ಮೂಲದ ಐವರು ಖದೀಮರನ್ನು ಹೆಣ್ಣೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

security guard
ಐವರು ನೇಪಾಳಿಗರ ಬಂಧನ

By

Published : Dec 9, 2021, 7:17 PM IST

ಬೆಂಗಳೂರು:ತಾನೇ ಕಾವಲಿದ್ದ ಮನೆಗಳಲ್ಲಿ ತನ್ನ ಸಹಚರರನ್ನು ಕರೆಯಿಸಿ ಮನೆ ಕಳ್ಳತನ ಮಾಡಿಸುತ್ತಿದ್ದ ಕಿರಾತಕ ಭದ್ರತಾ ಸಿಬ್ಬಂದಿ ಮತ್ತು ನೇಪಾಳ ಮೂಲದ ಐವರು ಖದೀಮರನ್ನು ಹೆಣ್ಣೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಿರಣ್ ಬಿಸ್ತಾ, ಹಿಕ್ಮತ್ ಶಾಹಿ, ರಾಜು, ಜೀವನ್, ಗೋರಕ್ ಕಾಲು ಬಂಧಿತ ಆರೋಪಿಗಳಾಗಿದ್ದು, ಇವರಿಂದ 9.3 ಲಕ್ಷ ರೂ.ನಗದು, 19 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ನಗರ ಪೂರ್ವ ವಿಭಾಗದ ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ.

ಬಂಧಿತರಿಂದ ಜಪ್ತಿ ಮಾಡಿಕೊಂಡ ಚಿನ್ನಾಭರಣ

ಬಂಧಿತ ಆರೋಪಿಗಳ ಪೈಕಿ ಕರಣ್ ಬಿಸ್ವಾ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೋಕನೇಟ್ ಗ್ರೋ ಲೇಔಟ್ ನ ಎಸ್.ಕೆ.ರೆಸಿಡೆನ್ಸಿ ಅಪಾರ್ಟ್​ಮೆಂಟ್​ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. 6 ವರ್ಷಗಳಿಂದ ನಗರದ ಹಲವೆಡೆ ಈ ವ್ಯಕ್ತಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ದಾನೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣ ಸಂಪಾದನೆ ಮಾಡುವ ದುರಾಸೆಯಿಂದ ಬೀಗ ಹಾಕಿದ ಫ್ಲ್ಯಾಟ್​ಗಳನ್ನೇ ಗುರುತು ಹಾಕಿಕೊಳ್ಳುತ್ತಿದ್ದ.

ಇದನ್ನೂ ಓದಿ: 60 ವರ್ಷದ ವೃದ್ಧನನ್ನ ಮದುವೆಯಾಗುವುದಾಗಿ ನಂಬಿಸಿ ತಾಳಿ, ಕಾಲುಂಗುರ, ರೇಷ್ಮೆ ಸೀರೆ ಕದ್ದು ಮಹಿಳೆ ಪರಾರಿ

ಇದಲ್ಲದೇ, ಪ್ಲ್ಯಾಟ್ ಮಾಲೀಕರು ಮನೆಯಿಂದ ಹೊರ ಹೋಗುವಾಗ ಭದ್ರತೆಗೆ ಇರುತ್ತಿದ್ದ ಈತನಿಗೆ ಹೇಳಿ ಹೋಗುತ್ತಿದ್ದರು. ಇದು ಸೆಕ್ಯೂರಿಟಿ ಗಾರ್ಡ್​ಗೆ ವರದಾನವಾಗಿತ್ತು. ಸಮಯ ನೋಡಿಕೊಂಡು ಬಾಂಬೆಯಿಂದ ತನ್ನ ಸಹಚರರನ್ನು ಕರೆಯಿಸಿಕೊಂಡು ಕಳ್ಳತನ ಮಾಡಿಸುತ್ತಿದ್ದ. ಬಳಿಕ ಏನು ಆಗಿಲ್ಲ ಎಂಬಂತೆ ಮತ್ತೆ ಅದೇ ಅಪಾರ್ಟ್​ಮೆಂಟ್​ನಲ್ಲಿ ಕೆಲಸ ಮಾಡುತ್ತಿದ್ದ. ಇದರಿಂದ ಯಾರಿಗೂ ಅನುಮಾನ ಬರುವುದಿಲ್ಲ ಎಂಬ ಲೆಕ್ಕಾಚಾರ ಆರೋಪಿಯದ್ದಾಗಿತ್ತು ಎಂದು ಡಿಸಿಪಿ ತಿಳಿಸಿದ್ದಾರೆ.

ABOUT THE AUTHOR

...view details