ಬೆಂಗಳೂರು: ಸೆಕ್ಯೂರಿಟಿ ಏಜೆನ್ಸಿ ವ್ಯವಸ್ಥಾಪಕ ನಿರ್ದೇಶಕನಿಂದ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಕ್ಯೂರಿಟಿ ಏಜೆನ್ಸಿ ಪರವಾನಗಿ ರದ್ದುಗೊಳಿಸಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.
ಸಚಿವ ಎಸ್ ಸುರೇಶ್ ಕುಮಾರ್ ಟ್ವೀಟ್ ಬೆಂಗಳೂರು ಸೆಕ್ಯೂರಿಟಿ ಫೋರ್ಸ್ ಏಜೆನ್ಸಿ ಮಾಲೀಕ ಅಸ್ಸಾಂ ಮೂಲದ ಸೆಕ್ಯುರಿಟಿಗಳಿಗೆ ಹಿಗ್ಗಾಮುಗ್ಗ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಹೀಗಾಗಿ ಆಗ್ನೇಯ ವಿಭಾಗ ಪೊಲೀಸರು ಸೆಕ್ಯೂರಿಟಿ ಫೋರ್ಸ್ ಏಜೆನ್ಸಿ ಮಾಲೀಕ ಸಲೀಂ ಖಾನ್ನನ್ನು ಬಂಧಿಸಿದ್ದರು.
ಖಾಸಗಿ ಸೆಕ್ಯುರಿಟಿ ಏಜೆನ್ಸಿ ಮಾಲೀಕನಿಂದ ನೌಕರರ ಮೇಲೆ ಅಮಾನುಷ ಹಲ್ಲೆ... ವಿಡಿಯೋ ವೈರಲ್
ಸಲೀಂ ಇಬ್ಬರು ಸಿಬ್ಬಂದಿ ಮೇಲೆ ಅಮಾನವಿಯವಾಗಿ ಹಲ್ಲೆ ನಡೆಸಿದ್ದು, ಕಾರ್ಮಿಕರ ಜೊತೆ ಯಾವ ರೀತಿ ಇರಬೇಕು ಅನ್ನೋದು ಅವರಿಗೆ ಗೊತ್ತಿಲ್ಲ. ಹಿನ್ನೆಲೆ ಸೆಕ್ಯೂರಿಟಿ ಫೋರ್ಸ್ ಏಜೆನ್ಸಿ ಮಾಲಿಕತ್ವ ಪರವಾನಿಗೆ ರದ್ದು ಮಾಡಲಾಗಿದೆ ಎಂದು ಟ್ವಿಟ್ಟರ್ ಮೂಲಕ ಕಾರ್ಮಿಕ ಇಲಾಖೆಯ ಸಚಿವ ಎಸ್ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರ ವಶದಲ್ಲಿದ್ದಾನೆ.