ಕರ್ನಾಟಕ

karnataka

ETV Bharat / city

ಹೈಕೋರ್ಟ್ ಮೆಟ್ಟಿಲೇರಿದ ಮುತ್ತಪ್ಪ ರೈ 2ನೇ ಪತ್ನಿ: ಆಸ್ತಿ ಮಾರಾಟಕ್ಕೆ ತಡೆ - ಆಸ್ತಿಗಾಗಿ ಹೈಕೋರ್ಟ್​ಗೆ ಹೋದ ಮುತ್ತಪ್ಪ ರೈ ಎರಡನೇ ಪತ್ನಿ

ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧಾ ಸಲ್ಲಿಸಿರುವ ಅರ್ಜಿ ಆಧರಿಸಿ, ರೈ ಆಸ್ತಿಗಳ ಮಾರಾಟಕ್ಕೆ ಹೈಕೋರ್ಟ್ ತಡೆ ನೀಡಿದೆ.

ಹೈಕೋರ್ಟ್ ಮೆಟ್ಟಿಲೇರಿದ ಮುತ್ತಪ್ಪ ರೈ ಎರಡನೇ ಪತ್ನಿ
ಮುತ್ತಪ್ಪ ರೈ

By

Published : Dec 17, 2021, 9:50 PM IST

ಬೆಂಗಳೂರು:ಮುತ್ತಪ್ಪ ರೈ ಆಸ್ತಿ ಹಕ್ಕಿನ ವಿಚಾರವಾಗಿ ಎರಡನೇ ಪತ್ನಿ ಅನುರಾಧಾ ಹೈಕೋರ್ಟ್ ಮೆಟ್ಟಿಲೇರಿದ್ದು, ಕೆಲ ನಿರ್ದಿಷ್ಟ ಆಸ್ತಿಗಳ ಮಾರಾಟಕ್ಕೆ ಹೈಕೋರ್ಟ್ ತಡೆ ನೀಡಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅನುರಾಧಾ ಸಿವಿಲ್ ಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್ ಮುದಗಲ್ ಅವರಿದ್ಧ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಿಸಿರುವ ನಿರ್ದಿಷ್ಟ ಆಸ್ತಿಗಳನ್ನು ನ್ಯಾಯಾಲಯದ ಮುಂದಿನ ಆದೇಶದವರೆಗೆ ವರ್ಗಾವಣೆ ಮಾಡದಂತೆ ಪೀಠ ಮಧ್ಯಂತರ ಆದೇಶ ಮಾಡಿದೆ. ಮುತ್ತಪ್ಪ ರೈ ಎರಡನೇ ಪತ್ನಿ ಆಗಿರುವ ಅನುರಾಧಾ ಪತಿಯ ಆಸ್ತಿಯಲ್ಲಿ ಮೂರನೇ ಒಂದು ಪಾಲು ಕೋರಿ ಸಿವಿಲ್ ಕೋರ್ಟ್​ನಲ್ಲಿ ದಾವೆ ಹೂಡಿದ್ದರು.

ಈ ನಡುವೆ ಮುತ್ತಪ್ಪ ರೈ ಪುತ್ರರಾದ ರಾಕಿ ರೈ ಹಾಗೂ ರಿಕ್ಕಿ ರೈ ಕೆಲ ಆಸ್ತಿ ಮಾರಾಟ ಮಾಡಿದ್ದರು. ಆಸ್ತಿ ಮಾರಾಟ ಮಾಡದಂತೆ ನೀಡಿದ್ದ ತಡೆಯಾಜ್ಞೆಯನ್ನು ಸಿವಿಲ್ ಕೋರ್ಟ್ ಇತ್ತೀಚೆಗೆ ತೆರವು ಮಾಡಿತ್ತು. ಇದನ್ನು ಪ್ರಶ್ನಿಸಿ, ಅನುರಾಧಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

(ಇದನ್ನೂ ಓದಿ: ನೀವು ಶ್ವಾನ ಪ್ರಿಯರೇ.. ಹಾಗಾದರೆ ಇಲ್ಲಿದೆ Dog Hostel... ಏನಿದರ ವಿಶೇಷತೆ?)

ABOUT THE AUTHOR

...view details