ಬೆಂಗಳೂರು:ದಿನದ ಮುಕ್ಕಾಲು ಭಾಗ ಶಾಲೆಯಲ್ಲಿ ಶಿಕ್ಷಕರು-ಮಕ್ಕಳು ಸಮಯ ಕಳೆಯುತ್ತಿದ್ದರು. ಆದರೆ ಮಾರಕ ಕೋವಿಡ್ ಸೋಂಕು ಇದಕ್ಕೆ ಬ್ರೇಕ್ ಹಾಕಿತ್ತು. ಸದ್ಯ ಸೋಂಕಿನ ತೀವ್ರತೆ ಇಳಿಕೆಯಾದ ಕಾರಣ 1 ರಿಂದ 5ನೇ ತರಗತಿ ಪ್ರಾಥಮಿಕ ತರಗತಿಗಳು ಪುನಾರಂಭವಾಗಿವೆ.
ಮಕ್ಕಳನ್ನ ನಾವು ತುಂಬಾನೇ ಮಿಸ್ ಮಾಡ್ಕೊಂಡಿದ್ವಿ: ಶಿಕ್ಷಕಿ ಸ್ನೇಹ ಕುಲಕರ್ಣಿ - Banglore
ಮಕ್ಕಳನ್ನು ನಿಜಕ್ಕೂ ತುಂಬಾನೇ ಮಿಸ್ ಮಾಡ್ಕೊಂಡಿದ್ವಿ. ಇಂದು ಬಹಳ ಖುಷಿಯಾಗಿದ್ದು, ಕೋವಿಡ್ ಮಾರ್ಗಸೂಚಿಯ ಎಲ್ಲ ನಿಯಮಗಳನ್ನು ಪಾಲಿಸುತ್ತಿದ್ದೇವೆ ಎಂದು ಕನ್ನಡ ಹಾಗು ಗಣಿತ ಶಿಕ್ಷಕಿ ಸ್ನೇಹ ಕುಲಕರ್ಣಿ ಹೇಳಿದರು.
ಶಾಲೆಗೆ ಆಗಮಿಸಿದ ಮಕ್ಕಳನ್ನು ಕಂಡು ಶಿಕ್ಷಕರು ಸಂತಸಗೊಂಡಿದ್ದಾರೆ. ಬ್ಲಾಕ್ ಬೋರ್ಡ್ ಮುಂದೆ ನಿಂತು ಮಕ್ಕಳಿಗೆ ಪಾಠ ಮಾಡುತ್ತಾ ಹರ್ಷ ವ್ಯಕ್ತಪಡಿಸಿದರು. ಈಟಿವಿ ಭಾರತದೊಂದಿಗೆ ಮಾತನಾಡಿದ ಕನ್ನಡ ಹಾಗು ಗಣಿತ ಶಿಕ್ಷಕಿ ಸ್ನೇಹ ಕುಲಕರ್ಣಿ, ಮಕ್ಕಳನ್ನು ನಿಜಕ್ಕೂ ತುಂಬಾನೇ ಮಿಸ್ ಮಾಡ್ಕೊಂಡಿದ್ವಿ. ಇಂದು ಬಹಳ ಖುಷಿಯಾಗಿದ್ದು, ಕೋವಿಡ್ ಮಾರ್ಗಸೂಚಿಯ ಎಲ್ಲ ನಿಯಮಗಳನ್ನು ಪಾಲಿಸುತ್ತಿರುವುದಾಗಿ ಹೇಳಿದರು.
ಇನ್ನು ಮನೆಯಲ್ಲಿ ಅಮ್ಮ ಹೇಳಿದಂತೆ ಸ್ಯಾನಿಟೈಸ್ ಹಾಗೂ ಮಾಸ್ಕ್ ಹಾಕಿಕೊಂಡು ಶಾಲೆಗೆ ಬಂದಿದ್ಧೇನೆ ಎಂದು ಎರಡನೇ ತರಗತಿ ವಿದ್ಯಾರ್ಥಿನಿ ಲಕ್ಷ್ಮಿ ಮಾತಾನಾಡಿದ್ದಾರೆ.