ಕರ್ನಾಟಕ

karnataka

ETV Bharat / city

ಕೋವಿಡ್ ಎಫೆಕ್ಟ್‌: ರಾಜ್ಯದಲ್ಲಿ ಶಾಲೆ ಅರ್ಧಕ್ಕೆ ಬಿಟ್ಟ ಮಕ್ಕಳ ಸಂಖ್ಯೆಯಲ್ಲಿ ಏರಿಕೆ - school dropout students percentage rating says education department survey

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 6 ರಿಂದ 16 ವರ್ಷ ವಯೋಮಿತಿಯ ಮಕ್ಕಳ ಗೈರು ಹೆಚ್ಚಾಗಿದೆ. ಶಿಕ್ಷಣ ಇಲಾಖೆ ಅಂಕಿ - ಅಂಶದ ಪ್ರಕಾರ ರಾಜ್ಯದಲ್ಲಿ ಒಟ್ಟು 34,411 ಮಕ್ಕಳು ಅರ್ಧಕ್ಕೆ ಶಾಲೆ ಬಿಟ್ಟಿದ್ದಾರೆ.

school dropout students percentage rating says education department survey
ಕೋವಿಡ್ ಎಫೆಕ್ಟ್‌: ರಾಜ್ಯದಲ್ಲಿ ಶಾಲೆ ಅರ್ಧಕ್ಕೆ ಬಿಟ್ಟ ಮಕ್ಕಳ ಸಂಖ್ಯೆಯಲ್ಲಿ ಏರಿಕೆ

By

Published : Feb 3, 2022, 1:10 PM IST

ಬೆಂಗಳೂರು: ಮಕ್ಕಳ ಶಿಕ್ಷಣದ ಮೇಲೆ ಕೋವಿಡ್ ಸೊಂಕು ಭಾರಿ ಪ್ರಭಾವ ಬೀರಿದೆ. ಶಾಲೆ ಅರ್ಧಕ್ಕೆ ಬಿಟ್ಟ ಮಕ್ಕಳ ಪ್ರಮಾಣ ಏರಿಕೆಯಾಗುತ್ತಿರುವುದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 6 ರಿಂದ 16 ವರ್ಷ ವಯೋಮಿತಿಯ ಮಕ್ಕಳ ಗೈರು ಹೆಚ್ಚಾಗಿದೆ. ಶಿಕ್ಷಣ ಇಲಾಖೆ ಅಂಕಿ - ಅಂಶದ ಪ್ರಕಾರ ರಾಜ್ಯದಲ್ಲಿ ಒಟ್ಟು 34,411 ಮಕ್ಕಳು ಅರ್ಧಕ್ಕೆ ಶಾಲೆ ಬಿಟ್ಟಿದ್ದಾರೆ.

ನಗರದಲ್ಲೂ ಶಾಲೆ ಅರ್ಧಕ್ಕೆ ಬಿಟ್ಟ ಮಕ್ಕಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದ್ದು, ಬೆಂಗಳೂರು ದಕ್ಷಿಣ ಮತ್ತು ಉತ್ತರ ಶೈಕ್ಷಣಿಕ ಜಿಲ್ಲೆಗಳಲ್ಲೇ ಹೆಚ್ಚು ಮಕ್ಕಳು ಶಾಲೆ ತೊರೆದಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ 6 ರಿಂದ 14 ವರ್ಷದ 2,143 ಮಕ್ಕಳು ಶಾಲೆ ಬಿಟ್ಟಿದ್ದರೆ, ಉತ್ತರದಲ್ಲಿ 14 ರಿಂದ 16 ವರ್ಷದ 4,465 ಮಕ್ಕಳು ಶಾಲೆ ತೊರೆದಿದ್ದಾರೆ. ಕೇವಲ ಎರಡು ಶೈಕ್ಷಣಿಕ ಜಿಲ್ಲೆಗಳಲ್ಲಿಯೇ ಒಟ್ಟು 6,608 ಮಕ್ಕಳು ಶಾಲೆಯನ್ನು ಅರ್ಧಕ್ಕೆ ಬಿಟ್ಟಿದ್ದಾರೆ ಎನ್ನುತ್ತವೆ ಇಲಾಖೆ ಅಂಕಿ ಅಂಶಗಳು.

1 ರಿಂದ 10ನೇಯ ತರಗತಿ ಮಕ್ಕಳ ಸರ್ವೆಯಲ್ಲಿ ಶಾಲೆ ಬಿಟ್ಟವರ ಮಾಹಿತಿ ಪತ್ತೆಯಾಗಿದೆ. ಇದಕ್ಕೆ ವಲಸೆ ಮುಖ್ಯ ಕಾರಣ ಎಂದು ಕಂಡು ಬಂದಿದ್ದು, ಅಧಿಕಾರಿಗಳು ಮತ್ತು ಶಿಕ್ಷಕರು ಹೆಚ್ಚು ಡ್ರಾಪ್​​ಔಟ್ ಆದ ಪ್ರದೇಶಗಳಲ್ಲಿ ಇಲಾಖೆಯ ವತಿಯಿಂದ ಪರಿಶೀಲನೆ ನಡೆಸುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details