ಕರ್ನಾಟಕ

karnataka

ETV Bharat / city

ಐಷಾರಾಮಿ ಸೌಲಭ್ಯಕ್ಕೆ ಲಂಚ ಪಡೆದ ಆರೋಪ ಪ್ರಕರಣ... ಹೈಕೋರ್ಟ್​ನಲ್ಲಿ ಸತ್ಯನಾರಾಯಣ ಅರ್ಜಿ ವಿಚಾರಣೆ - undefined

ಶಶಿಕಲಾಗೆ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಕಲ್ಪಿಸಲು 2 ಕೋಟಿ‌ ರೂ. ಲಂಚ ಪಡೆದ ಆರೋಪದ ಸಂಬಂಧ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಸಿಬಿ 2 ವಾರ ಕಾಲಾವಕಾಶ ಪಡೆದಿದೆ.

ಸತ್ಯನಾರಾಯಣ

By

Published : Feb 26, 2019, 9:35 AM IST

ಬೆಂಗಳೂರು: ತಮಿಳುನಾಡಿನ ಮಾಜಿ ಸಿಎಂ‌ ಜಯಲಲಿತಾ ಅವರ ಆಪ್ತೆ ಶಶಿಕಲಾಗೆ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಕಲ್ಪಿಸಲು 2 ಕೋಟಿ‌ ರೂ. ಲಂಚ ಪಡೆದ ಆರೋಪದ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್​ಐಆರ್​ ರದ್ದು ಕೋರಿ ನಿವೃತ್ತ ಡಿಜಿಪಿ ಸತ್ಯನಾರಾಯಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಿನ್ನೆ ಹೈಕೋರ್ಟ್​ನಲ್ಲಿ ನಡೆಯಿತು.

ಇನ್ನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಸಿಬಿ 2 ವಾರ ಕಾಲಾವಕಾಶ ಪಡೆದಿರುವ ಹಿನ್ನೆಲೆ ವಿಚಾರಣೆಯನ್ನು ಮುಂದೂಡಿಕೆ ಮಾಡಲಾಯ್ತು.

ಪ್ರಕರಣದ ಹಿನ್ನೆಲೆ :

ಪರಪ್ಪನ ಅಗ್ರಹಾರದಲ್ಲಿ ಶಶಿಕಲಾಗೆ ವಿಐಪಿ ಸೌಲಭ್ಯ ಒದಗಿಸಲು ಅಂದಿನ ಡಿಜಿಪಿ ಸತ್ಯನಾರಾಯಣ ರಾವ್ 2 ಕೋಟಿ ರೂಪಾಯಿ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿ ಅಂದಿನ ಡಿಐಜಿ ಡಿ.ರೂಪಾ ದೂರು ನೀಡಿದ್ದರು. ಈ ಸಂಬಂಧ ವಿಚಾರಣೆ ನಡೆಸಲು ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ವಿನಯ್‌ ಕುಮಾರ್ ಅವರನ್ನು ನೇಮಿಸಿತ್ತು. ವಿನಯ್ ಕುಮಾರ್ ವರದಿ ಆಧರಿಸಿ ತನಿಖೆ ನಡೆಸುವಂತೆ ಪ್ರಕರಣವನ್ನು ಎಸಿಬಿಗೆ ವಹಿಸಲಾಗಿತ್ತು. ಅದರಂತೆ ಎಸಿಬಿ ತನಿಖೆ ಮುಂದುವರಿಸಿತ್ತು. ಇದನ್ನು ರದ್ದುಕೋರಿ ಸತ್ಯನಾರಾಯಣ ರಾವ್ ಹೈಕೋರ್ಟ್ ಮೆಟ್ಟಿಲೇರಿದ್ರು‌.

For All Latest Updates

TAGGED:

ABOUT THE AUTHOR

...view details