ದೇವನಹಳ್ಳಿ : ಕಳೆದ ಹತ್ತು ದಿನಗಳಿಂದ ದೇವನಹಳ್ಳಿ ರೆಸಾರ್ಟ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ತಮಿಳುನಾಡಿನ ಶಶಿಕಲಾ ಇಂದು ಬೆಳಗ್ಗೆ ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ.
ದೇವನಹಳ್ಳಿ ರೆಸಾರ್ಟ್ನಿಂದ ಚೆನ್ನೈನತ್ತ ಶಶಿಕಲಾ ಪ್ರಯಾಣ: ಖಾಸಗಿ ವಿಐಪಿ ಎಸ್ಕಾರ್ಟ್ ಭದ್ರತೆ - ಶಶಿಕಲಾ ನಟರಾಜನ್ ಲೇಟೆಸ್ಟ್ ನ್ಯೂಸ್
ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕಳೆದ ನಾಲ್ಕು ವರ್ಷದಿಂದ ಜೈಲುವಾಸ ಅನುಭವಿಸಿ ಬಿಡುಗಡೆಯಾದ ಬಳಿಕ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ತಂಗಿದ್ದ ತಮಿಳುನಾಡಿನ ಶಶಿಕಲಾ ನಟರಾಜನ್ ಇಂದು ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ.
ಶಶಿಕಲಾಗೆ ಖಾಸಗಿ ಎಸ್ಕಾರ್ಟ್:
ಶಶಿಕಲಾ ಚೆನ್ನೈಗೆ ತೆರಳಲು ಖಾಸಗಿ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿದ್ದು. 8ಕ್ಕೂ ಹೆಚ್ಚು ವಾಹನಗಳಲ್ಲಿ ಎಸ್ಕಾರ್ಟ್ ಖಾಸಗಿ ಅಂಗ ರಕ್ಷಕರನ್ನ ಶಶಿಕಲಾ ಆಪ್ತರು ವ್ಯವಸ್ಥೆ ಮಾಡಿದ್ದಾರೆ. ಇನ್ನು ತಿರುವಣಮಲೈ, ತಿರುಪತಿ ಸೇರಿದಂತೆ ಹಲವು ದೇವಸ್ಥಾನಗಳ ಪ್ರಸಾದವನ್ನು ಚಿನ್ನಮ್ಮಗೆ ಕೊಡಲು ಆರ್ಚಕರು ತಂದಿದ್ದರು. ರೆಸಾರ್ಟ್ನಿಂದ ಹೊರಗೆ ಬಂದ ಕಾರಿಗೆ ಮೊದಲು ಮಂಗಳಮುಖಿರಿಂದ ಪೂಜೆ ಮಾಡಿಸಲಾಯಿತು. ಎಐಎಡಿಎಂಕೆ ಬಾವುಟ ಹಾಕಿದ ಕಾರಿನಲ್ಲಿ ಶಶಿಕಲಾ ಪ್ರಯಾಣ ಬೆಳೆಸಿದ್ದಾರೆ. ದೇವನಹಳ್ಳಿ, ಯಲಹಂಕ, ಹೆಬ್ಬಾಳ, ಟಿನ್ ಫ್ಯಾಕ್ಟರಿ ಸಿಲ್ಕ್ ಬೋರ್ಡ್, ಮಾರ್ಗದ ಮೂಲಕ ಶಶಿಕಲಾ ತಮಿಳುನಾಡಿನ ಗಡಿಭಾಗ ತಲುಪಲಿದ್ದಾರೆ. 200 ಕ್ಕೂ ಹೆಚ್ಚು ವಾಹನಗಳು ಬಂದ ಹಿನ್ನೆಲೆ ನಂದಿಬೆಟ್ಟ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.