ಆನೇಕಲ್:ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕು ಸರ್ಜಾಪುರ ವ್ಯಾಪ್ತಿಯ ಟ್ರಿನಿಟಿ ಅಪಾರ್ಟ್ಮೆಂಟ್ ನಿವಾಸಿ 43 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ.
ಸರ್ಜಾಪುರದ ಅಪಾರ್ಟ್ಮೆಂಟ್ ನಿವಾಸಿಗೆ ಕೊರೊನಾ ಸೋಂಕು... ಸೀಲ್ಡೌನ್ಗೆ ಸಿದ್ಧತೆ - ಸರ್ಜಾಪುರ ಕೊರೊನಾ ನ್ಯೂಸ್
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕು ಸರ್ಜಾಪುರ ವ್ಯಾಪ್ತಿಯ ಸೋಂಪುರ ಗೇಟ್ ಬಳಿಯ ಟ್ರಿನಿಟಿ ಅಪಾರ್ಟ್ಮೆಂಟ್ ನಿವಾಸಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಅಪಾರ್ಟ್ಮೆಂಟ್ನ ಒಂದೆರಡು ಫ್ಲೋರ್ಗಳನ್ನು ಸೀಲ್ಡೌನ್ ಮಾಡಲು ಸಿದ್ಧತೆ ನಡೆಸಲಾಗ್ತಿದೆ.

ಈತ ಆಂಧ್ರ ಮೂಲದವರಾಗಿದ್ದು, ಬಹಳ ವರ್ಷಗಳಿಂದ ಕುಟುಂಬ ಸಮೇತ ಟ್ರಿನಿಟಿ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದರು. ಸೋಂಕಿತ ವ್ಯಕ್ತಿ ದೊಮ್ಮಸಂದ್ರ ಯಮರೆ ಭಾಗದ ಸೂಪರ್ ಮಾರ್ಕೆಟ್ ಮಾಲೀಕನಾಗಿದ್ದು, 3 ತಿಂಗಳಿಂದ ಹೆಚ್ಚು ಓಡಾಟದ ಇತಿಹಾಸವಿಲ್ಲದಿದ್ದರೂ ನಾಲ್ಕೈದು ದಿನದ ಹಿಂದೆ ಹುಸ್ಕೂರು ಮಾರ್ಕೆಟ್ಗೆ ಎರಡು ಬಾರಿ ಹೋಗಿ ಬಂದಿದ್ದಾರೆ. ಈ ಹಿನ್ನೆಲೆ ಮಾರ್ಕೆಟ್ಗೆ ಬಂದ ಗ್ರಾಹಕರ ಪಟ್ಟಿ, ಮತ್ತಿತರ ಪ್ರಾಥಮಿಕ ಸಂಪರ್ಕದ ವಿವರ ಸಂಗ್ರಹಿಸಲು ತಂಡ ತೆರಳಿದೆ.
ನಿನ್ನೆ ಜ್ವರ ಇದೆಯೆಂದು ವರ್ತೂರು ರಸ್ತೆಯ ಕೊಲಂಬಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ತೆರಳಿದಾಗ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಇವರ ಕುಟುಂಬ ಸದಸ್ಯರನ್ನು ಕ್ವಾರಂಟೈನ್ ಮಾಡಲಿದ್ದು, ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ. ಸದ್ಯ ತಾಲೂಕು ವೈದ್ಯಾಧಿಕಾರಿಗಳು ಹಾಗು ಪೊಲೀಸ್ ಸಿಬ್ಬಂದಿ, ತಹಶೀಲ್ದಾರ್ ಸ್ಥಳಕ್ಕೆ ಧಾವಿಸಿದ್ದಾರೆ. ಅಪಾರ್ಟ್ಮೆಂಟ್ನ ಒಂದೆರೆಡು ಫ್ಲೋರ್ಗಳನ್ನು ಸೀಲ್ಡೌನ್ ಮಾಡಲು ಸಿದ್ಧತೆ ನಡೆಸಲಾಗ್ತಿದೆ.