ಬನ್ನೇರುಘಟ್ಟ(ಬೆಂಗಳೂರು):ಬನ್ನೇರುಘಟ್ಟ ರಸ್ತೆಯ ಸಿ.ಕೆ.ಪಾಳ್ಯದ ಬಳಿಯಿರುವ ಸಾರಾ ಸೋಲ್ ಕಂಪನಿಯ ಆಡಳಿತ ಮಂಡಳಿ ಕಳೆದ ಮೂರು ತಿಂಗಳ ಸಂಬಳ ನೀಡದೇ ಏಕಾಏಕಿ ಸುಮಾರು 350 ಜನ ಕಾರ್ಮಿಕರನ್ನ ಕೆಲಸದಿಂದ ತೆಗೆದು ಹಾಕಿದೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏಕಾಏಕಿ 350 ಜನರನ್ನ ಕೆಲಸದಿಂದ ತೆಗೆದ ಕಂಪನಿ: ಕಾರ್ಮಿಕರಿಂದ ಪ್ರತಿಭಟನೆ - Sarah Soul Company ck palya
ಬೆಂಗಳೂರು ಹೊರವಲಯ ಬನ್ನೇರುಘಟ್ಟ ರಸ್ತೆಯ ಸಿ.ಕೆ.ಪಾಳ್ಯದ ಬಳಿಯಿರುವ ಸಾರಾ ಸೋಲ್ ಕಂಪನಿಯ ಆಡಳಿತ ಮಂಡಳಿ, ಕಳೆದ ಮೂರು ತಿಂಗಳ ಸಂಬಳ ನೀಡದೇ ಏಕಾಏಕಿ ಸುಮಾರು 350 ಜನ ಕಾರ್ಮಿಕರನ್ನ ಕೆಲಸದಿಂದ ತೆಗೆದು ಹಾಕಿದೆ ಎಂದು ಆಕ್ರೋಶಗೊಂಡ ಕಾರ್ಮಿಕರು ಕಂಪನಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ಏಕಾಏಕಿ 350 ಜನರನ್ನ ಕೆಲಸದಿಂದ ತೆಗೆದ ಸಾರಾ ಸೋಲ್ ಕಂಪನಿ
ಕಾರ್ಮಿಕರ ಆಕ್ರೋಶ
ಈ ಕಂಪನಿಗೆ ರಾಮನಗರ, ಕನಕಪುರ, ಆನೇಕಲ್ ಸೇರಿದಂತೆ ಹಲವು ಭಾಗಗಳಿಂದ ಹಲವಾರು ಕಾರ್ಮಿಕರು ಸುಮಾರು ಹತ್ತು ಹನ್ನೆರಡು ವರ್ಷಗಳಿಂದ ಕೆಲಸಕ್ಕೆ ಬರುತ್ತಿದ್ದರು. ಆದರೆ ಕೊರೊನಾ ಲಾಕ್ಡೌನ್ ಆದ ಕಾರಣ ಕಂಪನಿಯಿಂದಲೇ ರಜೆ ನೀಡಿದ್ದರು.
ಬಳಿಕ ಲಾಕ್ಡೌನ್ ಮುಗಿದು ಕೆಲಸಕ್ಕೆ ಬಂದ ಕಾರ್ಮಿಕರಿಗೆ ದೂರದಿಂದ ಬರುತ್ತಿರುವುದರಿಂದ ಕೆಲಸಕ್ಕೆ ಬೇಡ ಎಂದು ಕುಂಟು ನೆಪ ಹೇಳಿ ಏಕಾಏಕಿ ಕೆಲಸದಿಂದ ತೆಗೆದು ಹಾಕಿದೆ ಎಂದು ಆಕ್ರೋಶಗೊಂಡ ಕಾರ್ಮಿಕರು ಕಂಪನಿ ಎದುರು ಪ್ರತಿಭಟನೆ ನಡೆಸಿದ್ದಾರೆ.