ಕರ್ನಾಟಕ

karnataka

ETV Bharat / city

ಸಿಎಂ ಬಿಎಸ್​​ವೈ ನಿವಾಸದಲ್ಲಿ ಸಂಕ್ರಾಂತಿ ಸಂಭ್ರಮ - ಯಡಿಯೂರಪ್ಪ ಸಂಕ್ರಾಂತಿ ಹಬ್ಬ ಆಚರಣೆ

ಮಕರ ಸಂಕ್ರಾಂತಿಯ ಪ್ರಯುಕ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಗೋಪೂಜೆ ನೆರವೇರಿಸಿದರು.

sankranti-festival-celebration-in-cm-yadiyurappa-home
ಸಂಕ್ರಾಂತಿ ಹಬ್ಬ

By

Published : Jan 14, 2021, 3:35 PM IST

ಬೆಂಗಳೂರು: ಕೊರೊನಾತಂಕದ ನಡುವೆಯೂ ನಾಡಿನೆಲ್ಲೆಡೆ ಸಡಗರ ಸಂಭ್ರಮದಿಂದ ಮಕರ ಸಂಕ್ರಾಂತಿ ಹಬ್ಬಾಚರಣೆ ನಡೆಯುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಧಿಕೃತ ನಿವಾಸ ಕಾವೇರಿಯಲ್ಲೂ ಹಬ್ಬದ ಸಂಭ್ರಮವಿತ್ತು.

ಸಿಎಂ ಬಿಎಸ್​​ವೈ ನಿವಾಸದಲ್ಲಿ ಸಂಕ್ರಾಂತಿ ಸಂಭ್ರಮ

ಕಾವೇರಿ ನಿವಾಸದ ಆವರಣದಲ್ಲಿ ಕೊಟ್ಟಿಗೆ ನಿರ್ಮಿಸಿ ಸಾಕಿರುವ ಗಿರ್ ತಳಿ ಗೋವುಗಳಿಗೆ ಪೂಜೆ ಸಲ್ಲಿಸಿ ಸಾಂಪ್ರದಾಯಿಕ ರೀತಿಯಲ್ಲಿ ಸಿಎಂ ಸಂಕ್ರಾಂತಿ ಆಚರಿಸಿದರು.

ಗೋಹತ್ಯೆ ನಿಷೇಧ ಕಾಯ್ದೆಗೆ ವಿಧಾನಸಭೆಯಲ್ಲಿ ಅಂಕಿತ ಸಿಕ್ಕ ನಂತರ ರಾಜ್ಯಾದ್ಯಂತ‌ ಬಿಜೆಪಿ ಆಯೋಜಿಸಿದ್ದ ಗೋಪೂಜಾ ಕಾರ್ಯಕ್ರಮದಲ್ಲಿಯೂ ಸಿಎಂ ಭಾಗವಹಿಸಿ ತಮ್ಮ ನಿವಾಸದಲ್ಲಿನ ಹಸುಗಳಿಗೆ ಪೂಜೆ ಸಲ್ಲಿಸಿದ್ದರು. ಇದೀಗ ಸಂಕ್ರಾಂತಿಯ ಕಾರಣಕ್ಕೆ ಗೋಪೂಜೆ ನೆರವೇರಿಸಿದ್ದಾರೆ.

ABOUT THE AUTHOR

...view details